ಮೃಗ ಲವ್ ಮತ್ತು ಬ್ರೇಕಪ್ ನಡುವೆ..
ಸಿನಿಮಾ

ಮೃಗ ಲವ್ ಮತ್ತು ಬ್ರೇಕಪ್ ನಡುವೆ..

August 22, 2020

ಹೀರೋ ಹೀರೋಯಿನ್ ನಡುವೆ ಲವ್ ಆಗುವುದು, ನಂತರ ಯಾವುದೋ ಕಾರಣದಿಂದ ಅವರ ನಡುವೆ ಬ್ರೇಕಪ್ ಆಗುವುದು ಈ ತರಹದ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ನಿರ್ದೇಶಕ ಹೆಚ್.ಎಂ. ಮಾರುತಿ ಇಂಥದೇ ಕಥೆಯೊಂದನ್ನು ಒಂದಷ್ಟು ಹೊಸ ಪ್ರಯೋಗದ ಮೂಲಕ ನಿರೂಪಿಸ ಹೊರಟಿದ್ದಾರೆ. ಆ ಚಿತ್ರದ ಹೆಸರು ಮೃಗ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಈ ಹಿಂದೆ ನಾನೊಬ್ನೇ ಒಳ್ಳೇವ್ನು ಚಿತ್ರದಲ್ಲಿ ಅಭಿನಯಿಸಿದ್ದ ವಿಜಯ್‍ಮಹೇಶ್ ಈ ಚಿತ್ರದ ನಾಯಕ. ನಿಖಿತಾಸ್ವಾಮಿ ನಾಯಕಿ. ಉದ್ಯಮಿ ಶಶಿಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಮಾರುತಿ ಅವರು ಮಾತನಾಡುತ್ತ ನಾನು ಈ ಹಿಂದೆ ಒಂದಷ್ಟು ಸೀರಿಯಲ್ ಹಾಗೂ ಚಿತ್ರಗಳಲ್ಲಿ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದು, ನನ್ನ ನಿರ್ದೇಶನದ ಮೊದಲ ಚಿತ್ರವಿದು. ಕ್ರೈಮ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರದ ಸ್ಟೋರಿಲೈನ್ ಕೇಳಿ ನಿರ್ಮಾಪಕ ಶಶಿಕುಮಾರ್ ಅವರು ಚಿತ್ರ ನಿರ್ಮಿಸಲು ಮುಂದೆ ಬಂದಿದ್ದಾರೆ. ಚಿತ್ರದಲ್ಲಿ ನಡೆಯುವ ಕ್ರೈಮ್‍ಗಳಿಗೆ ಕಾರಣವೇನು?, ಅದರ ಹಿಂದೆ ಯಾರಿದ್ದಾರೆ ಎನ್ನುವುದೇ ಮೃಗ ಚಿತ್ರದ ಕಥೆ. ಸೆಪ್ಟೆಂಬರ್‍ನಿಂದ ಚಿತ್ರದ ಚಿತ್ರೀಕರಣ ಆರಂಭಿಸಿ ಒಟ್ಟು 35 ದಿನಗಳ ಕಾಲ ಮೂರು ಹಂತಗಳಲ್ಲಿ ಶೂಟಿಂಗ್ ನಡೆಸುವ ಪ್ಲಾನ್ ಮಾಡಿಕೊಂಡಿz್ದÉೀವೆ, ಚಿತ್ರದಲ್ಲಿ ನೆಗೆಟಿವ್ ಶೇಡ್ ಇರುವ ಮತ್ತೊಂದು ಪಾತ್ರವಿದ್ದು, ಆ ಪಾತ್ರಕ್ಕೆ ಹುಡುಕಾಟ ನಡೆದಿದೆ ಎಂದು ಹೇಳಿದರು. ನಂತರ ಚಿತ್ರದ ನಾಯಕ ವಿಜಯ್ ಮಹೇಶ್ ಮಾತನಾಡಿ ನಿರ್ದೇಶÀಕರು ಬಂದು ಕಥೆ ಹೇಳಿದಾಗ ತುಂಬಾನೇ ಥ್ರಿಲ್ಲಿಂಗ್ ಆಗಿತ್ತು. ಆ ಕಾರಣದಿಂದಲೇ ಅಭಿನಯಿಸಲು ಒಪ್ಪಿಕೊಂಡೆ ಎಂದು ಹೇಳಿದರು. ನಂತರ ಚಿತ್ರದ ನಿರ್ಮಾಪಕರಾದ ಶಶಿಕುಮಾರ್ ಮಾತನಾಡಿ ಮಾರುತಿ ನನಗೆ ಮೂರ್ನಾಲ್ಕು ವರ್ಷಗಳಿಂದ ಪರಿಚಯ. ಇದೊಂದು ಟೆಕ್ನಿಕಲ್ ಸಸ್ಪೆನ್ಸ್ ಕಂಟೆಂಟ್ ಇರುವ ಸಿನಿಮಾ. ಚಿತ್ರದಲ್ಲಿ ಸಿಜಿವರ್ಕ್ ಜಾಸ್ತಿನೇ ಇದೆ ಎಂದು ಹೇಳಿಕೊಂಡರು. ನಾಯಕಿ ನಿಖಿತಾ ಸ್ವಾಮಿ ಮಾತನಾಡಿ, ಇದು ಲವ್ ಮತ್ತು ಬ್ರೇಕಪ್ ಕಥೆಯಿರುವ ಚಿತ್ರ. ಜಗಳದಿಂದಲೇ ಚಿತ್ರ ಪ್ರಾರಂಭವಾಗುತ್ತದೆ. ಚಿತ್ರದಲ್ಲಿ ನಾನೊಬ್ಬ ಟ್ರೆಡಿಷನಲ್ ಹುಡುಗಿಯಾಗಿ ಕಾಣಿಸಿಕೊಂಡಿz್ದÉೀನೆ. ಎಮೋಷನ್ಸ್‍ಗೆ ಹೆಚ್ಚು ಬೆಲೆ ಕೊಡುವಂತಹ ಯುವತಿಯ ಪಾತ್ರ ನನ್ನದು ಎಂದು ಹೇಳಿಕೊಂಡರು. ಚಿತ್ರದ ಸಂಗೀತ ನಿರ್ದೇಶಕರು ಇನ್ನೂ ಫೈನಲ್ ಆಗಿಲ್ಲ. ಅನಿಲ್‍ಕುಮಾರ್ ಚಿತ್ರದ ಛಾಯಾಗ್ರಾಹಕರು.

Translate »