ಡಿಯರ್ ಸತ್ಯ ಟೀಸರ್ ಲಾಂಚ್
ಸಿನಿಮಾ

ಡಿಯರ್ ಸತ್ಯ ಟೀಸರ್ ಲಾಂಚ್

August 22, 2020

`ನೂರು ಜನ್ಮಕು’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಆರ್ಯನ್ ಸಂತೋಷ್ ನಂತರ ರಿಯಾಲಿಟಿ ಶೋಗಳ ನಿರೂಪಕರಾಗಿ, ಅಲ್ಲದೆ ಬಿಗ್‍ಬಾಸ್ ಸ್ಪರ್ಧಿಯಾಗಿಯೂ ಗುರುತಿಸಿಕೊಂಡರು. ಈಗ ಡಿಯರ್ ಸತ್ಯ ಚಿತ್ರದ ಮೂಲಕ ಇಂಡಸ್ಟ್ರಿಗೆ ರೀ ಎಂಟ್ರಿ ಕೊಡುತ್ತಿz್ದÁರೆ. ಇವರ ಜೊತೆಗೆ ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ನಟಿಸುತ್ತಿz್ದÁರೆ. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರ ಪುತ್ರ ಯತೀಶ್ ವೆಂಕಟೇಶ್, ಬಿ.ಎಸ್.ಶ್ರೀನಿವಾಸ್ ಮತ್ತು ಗಣೇಶ್ ಪಾಪಣ್ಣ, ಸೇರಿ 4 ಜನ ಈ ಚಿತ್ರಕ್ಕೆ ನಿರ್ಮಾಪಕರು. ಶಿವಗಣೇಶ್ ಅವರ ನಿರ್ದೆಶನದಲ್ಲಿ ಮೂಡಿಬಂದಿರುವ ಡಿಯರ್ ಸತ್ಯ ಚಿತ್ರದ ಟೀಸರನ್ನು ನಟ ಶಿವರಾಜ್‍ಕುಮಾರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ.

ಇತ್ತೀಚೆಗೆ ತೆರೆಕಂಡ ಥ್ರಿಲ್ಲರ್ ಭಿನ್ನ ಚಿತ್ರತಂಡವೇ ಈ ಚಿತ್ರವನ್ನು ನಿರ್ಮಿಸಿ ತೆರೆಗೆ ತರುತ್ತಿದೆ. ಇದೊಂದು ಲವ್, ಆP್ಷÀನ್ ರಿವೇಂಜ್ ಕಮ್ ಥ್ರಿಲ್ಲರ್ ಸಿನಿಮಾ. ಸತ್ಯ ನಾಯಕನ ಹೆಸರು, ಚಿತ್ರದ ಮೇಕಿಂಗ್‍ನಲ್ಲಿ ವಿಭಿನ್ನತೆ ಇದೆ ಎಂದು ನಿರ್ದೇಶಕ ಶಿವಗಣೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸದಾ ಗಿಜಿಗುಡುವ ಬೆಂಗಳೂರಿನಲ್ಲಿ ಪ್ರತಿಯೊಬ್ಬರಿಗೂ ಅವರz್ದÉೀ ಆದ ಒತ್ತಡಗಳು, ಜಂಜಾಟಗಳಿರುತ್ತವೆ. ಇವೆಲ್ಲದರ ನಡುವೆ ಸಾಮಾನ್ಯನೊಬ್ಬ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುವ, ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವ ಕಥಾಹಂದರವೇ ಡಿಯರ್ ಸತ್ಯ,

ನೈಜ ಘಟನೆಗಳ ಪ್ರೇರಣೆಯಿಂದ ತಯಾರಾಗಿರುವ ‘ಡಿಯರ್ ಸತ್ಯ’ ಚಿತ್ರದಲ್ಲಿ ಅರುಣಾ ಬಾಲರಾಜï, ಅಶ್ವಿನ್ ರಾವ್ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ ಹೊಸಕೋಟೆ, ಆದರ್ಶ್ ಚಂದ್ರಕರ್ ಮುಂತಾದವರು ಉಳಿದ ಪಾತ್ರಗಳನ್ನು ನಿರ್ವಹಿಸಿz್ದÁರೆ.

ಜಿಗರ್ ಥಂಡ, ಆ ದೃಶ್ಯ, ತ್ರಾಟಕ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಶಿವಗಣೇಶ್ ಡಿಯರ್ ಸತ್ಯ ಚಿತ್ರವನ್ನು ನಿರ್ದೇಶಿಸಿz್ದÁರೆ. ವಿನೋದ್ ಭಾರತಿ ಈ ಚಿತ್ರದ ಛಾಯಾಗ್ರಹಕರಾಗಿದ್ದು, ಶ್ರೀಧರ್ ವಿ. ಸಂಭ್ರಮ್ ಈ ಚಿತ್ರದ 5 ಹಾಡುಗಳಿಗೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದಾರೆ. ಸುರೇಶ್ ಆರ್ಮುಗಂ ಅವರ ಸಂಕಲನ, ಭಜರಂಗಿ ಮೋಹನ್, ಕಲೈ ಮತ್ತು ಗೀತಾ ನೃತ್ಯ ಸಂಯೋಜನೆ, ಕುಂಗು ಚಂದ್ರು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Translate »