ನಾಗೇಂದ್ರರ ಪತ್ನಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕ ಹುದ್ದೆ: 30 ಲಕ್ಷ ಪರಿಹಾರ
ಮೈಸೂರು

ನಾಗೇಂದ್ರರ ಪತ್ನಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕ ಹುದ್ದೆ: 30 ಲಕ್ಷ ಪರಿಹಾರ

August 21, 2020

ಮೈಸೂರು, ಆ.20(ಎಂಕೆ)- ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಗುರುವಾರ ರಾತ್ರಿ ಮೈಸೂ ರಿಗೆ ಆಗಮಿಸಿ, ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಅಂತಿಮ ದರ್ಶನ ಪಡೆದು, ಶ್ರದ್ಧಾಂಜಲಿ ಅರ್ಪಿಸಿದರು.

ಈ ವೇಳೆ ಸಚಿವರನ್ನು ಸುತ್ತುವರಿದ ಪ್ರತಿಭಟನಾ ನಿರತ ವೈದ್ಯರು, ಜಿಪಂ ಸಿಇಓ ಅವರನ್ನು ಅಮಾ ನತು ಮಾಡುವುದರ ಜೊತೆಗೆ ಸೂಕ್ತ ತನಿಖೆ ನಡೆಸ ಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿ ಸಿದ ಸಚಿವ ಕೆ.ಸುಧಾಕರ್, ಕೊರೊನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಅವಿರತವಾಗಿ ಸೇವೆ ಸಲ್ಲಿಸಿದ ನಿಷ್ಠಾವಂತ, ನಂಜನಗೂಡು ತಾಲೂಕು ಆರೋಗ್ಯಾ ಧಿಕಾರಿ ಡಾ.ನಾಗೇಂದ್ರ ಅವರು ಬಾರದ ಲೋಕಕ್ಕೆ ಹೋಗಿರುವುದು ನಮ್ಮೆಲ್ಲರ ದುರದೃಷ್ಟಕರ. ಪಿಹೆಚ್‍ಡಿ ವ್ಯಾಸಂಗ ಮಾಡಿರುವ ಅವರ ಪತ್ನಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕ ಹುದ್ದೆಯ ಜೊತೆಗೆ ಕುಟುಂಬಕ್ಕೆ 30 ಲಕ್ಷ ರೂ. ಆರ್ಥಿಕ ನೆರವು ನೀಡ ಲಾಗುವುದು ಎಂದು ತಿಳಿಸಿದರು.

ಕಳೆದ 6 ತಿಂಗಳಿಂದ ಕೊರೊನಾ ನಿಂಯತ್ರಣ ಕಾರ್ಯದಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ದ್ದಾರೆ. ಪ್ರಾರಂಭದಲ್ಲಿ ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯಲ್ಲಿ ನೂರಾರು ಜನರಿಗೆ ಕೊರೊನಾ ಸೋಂಕು ಪತ್ತೆಯಾದ ಮೇಲೆ ಒಂದೇ ಒಂದು ಸಾವು ಸಂಭವಿಸಿದಂತೆ ಸಮಯೋಜಿತ ನಿರ್ಧಾರಗಳ ಮೂಲಕ ಬದ್ದತೆಯಿಂದ ಕಾರ್ಯನಿರ್ವಹಿಸಿ ಇತಿ ಹಾಸ ಬರೆದಿದ್ದಾರೆ ಎಂದು ಸ್ಮರಿಸಿಕೊಂಡರು.

ಕೊರೊನಾ ಬಂದಾಗಿನಿಂದ ಯಾರಿಗೂ ವಿಶ್ರಾಂತಿ ಸಿಕ್ಕಿಲ್ಲ. ಮಾನಸಿಕವಾಗಿ, ದೈಹಿಕವಾಗಿ ಬಹಳಷ್ಟು ದಣಿದಿ ದ್ದಾರೆ. ಮಂತ್ರಿ ವರ್ಗದಿಂದ ಹಿಡಿದು ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಮಾಧ್ಯಮದವರು, ಎಲ್ಲಾ ಶ್ರೇಣಿಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಹಾಗಾಗಿ ಇಂದು ಮಾನಸಿಕ ಖಿನ್ನತೆಗೆ ಅನೇಕರು ಒಳಗಾಗಿರುವುದು ಸತ್ಯದ ವಿಚಾರ. ಇವತ್ತು ಅಸಹಾಯಕತೆಯಿಂದಲೋ ಏನೋ ಮಾನಸಿಕವಾಗಿ ಬಳಲಿ, ಹೆಚ್ಚಿನ ಪರಿಶ್ರಮ ದಿಂದ ದೈಹಿಕವಾಗಿ ದಣಿದು, ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಡಾ.ನಾಗೇಂದ್ರ ಇಂತಹ ನಿರ್ಧಾರ ತೆಗೆದುಕೊಂಡು ಬಾರದ ಲೋಕಕ್ಕೆ ಹೋಗಿ ರುವುದು ದುರಷ್ಟಕರ ಸಂಗತಿ ಎಂದು ವಿಷಾದÀ ವ್ಯಕ್ತಪಡಿಸಿದರು.

ವೈದ್ಯ ಸಹೋದರನಾಗಿ ನಿಜವಾಗಿಯೂ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ಸರ್ಕಾ ರದ ಪರವಾಗಿ ಬಂದಿದ್ದೇವೆ. ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಗಿದೆ. ಕುಟುಂಬದ ಜೊತೆಗೆ ಸರ್ಕಾರ ವಿದ್ದು, ಎಲ್ಲಾ ರೀತಿಯ ಸಹಕಾರ ನೀಡಲಿದೆ. ಡಾ. ನಾಗೇಂದ್ರ ಅವರ ಪತ್ನಿ ಪಿಹೆಚ್‍ಡಿ ವ್ಯಾಸಂಗ ಮಾಡಿದ್ದು, ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕಿ ಹುದ್ದೆ ನೀಡುವುದರ ಜೊತೆಗೆ ಈಗಾಗಲೇ ಮುಖ್ಯಮಂತ್ರಿ ಗಳು ಅವರ ಕುಟುಂಬಕ್ಕೆ ಆರ್ಥಿಕ ಸಹಾಯವಾಗಿ 30 ಲಕ್ಷ ರೂ. ಘೋಷಣೆ ಮಾಡಿದ್ದಾರೆ ಎಂದರು.

ಈ ಕುರಿತು ಅವರ ಸಂಬಂಧಿಕರೊಂದಿಗೂ ಮಾತ ನಾಡಿದ್ದು, ಸರ್ಕಾರದ ಆಲೋಚನೆ ಹಾಗೂ ಕುಟುಂ ಬಕ್ಕೆ ನೆರವು ನೀಡುವ ಕುರಿತು ಚರ್ಚಿಸಲಾಗಿದೆ. ಈ ದುರ್ಘಟನೆಯಿಂದ ಬಹಳಷ್ಟು ದುಃಖವಾಗಿದೆ. ಹಿರಿಯ ಅಧಿಕಾರಿಗಳು ನಾಗೇಂದ್ರ ಅವರ ಬಗ್ಗೆ ಬಹಳ ಒತ್ತಡ ಹಾಕಿದದ್ದರಿಂದಲೇ ಸಾವಾಗಿದೆ ಎಂದು ಸಹೋದ್ಯೋಗಿಗಳು ಹೇಳುತ್ತಿದ್ದಾರೆ. ಇನ್ನು ಮುಂದೆ ಈ ರೀತಿಯ ಪ್ರಸಂಗಗಳು ನಮ್ಮ ರಾಜ್ಯದ ಯಾವುದೇ ಭಾಗದಲ್ಲಿ ಮರುಕಳಿಸದಂತೆ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ವೈದ್ಯರ ಜೀವ ಉಳಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ತನಿಖೆ ಬಗ್ಗೆ ಸಂಶಯ ಬೇಡ: ಈ ಪ್ರಕರಣದ ಬಗ್ಗೆ ಪಾರದರ್ಶಕವಾಗಿ ತನಿಖೆಯಾಗಲಿದ್ದು, ನಾಗೇಂದ್ರ ಅವರ ಸಾವಿಗೆ ಯಾರೇ ಕಾರಣರಾಗಿದ್ದರು ಕಾನೂನು ಕ್ರಮ ಜರುಗಿಸಲಾಗುವುದು, ಇದರಲ್ಲಿ ಯಾವುದೇ ಅನುಮಾನ ಬೇಡ. ನಾಳೆ ಕೆಆರ್‍ಎಸ್ ಡ್ಯಾಂ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಲಿದ್ದು, ಯಾವ ಸ್ವರೂಪದ ತನಿಖೆಯಾಗಬೇಕು ಎಂಬುದನ್ನು ಸಮಾ ಲೋಚಿಸಿ, 10.30ರೊಳಗೆ ತಿಳಿಸಲಾಗುವುದು. ನಾಳೆ ಎಲ್ಲವನ್ನು ಸ್ಪಷ್ಟಪಡಿಸಲಾಗುವುದು. ಈ ಸಮಯದಲ್ಲಿ ಮುಷ್ಕರ ಎಂದರೆ ಅದು ಅಮಾನವೀಯತೆ ಎನಿಸಿಕೊಳ್ಳಲಿದೆ. ಯಾವುದೇ ವೈಯಕ್ತಿಕವಾಗಿ ದ್ವೇಷದಿಂದ ಆಗಿರುವು ದಲ್ಲ. ಎಲ್ಲರ ಮೇಲೂ ಕಾರ್ಯ ಒತ್ತಡ ಇರುವುದ ರಿಂದ ಆಗಿರಬಹುದಾಗಿದ್ದು, ನಾಳೆ(ಶುಕ್ರವಾರ) 12 ಗಂಟೆಗೆ ಅಂತ್ಯಸಂಸ್ಕಾರಕ್ಕೆ ಸಿದ್ದತೆ ನಡೆಸಲಾಗುವುದು ಎಂದು ತಿಳಿಸಿದರು.

Translate »