`ಅಡ್ಜುಡಿಕೇಟ್’ಗೆ ದಿ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್: 6 ಲಕ್ಷ ರೂ. ಮೌಲ್ಯದ ಟ್ರೋಫಿ, 60 ಲಕ್ಷ ನಗದು ಬಹುಮಾನ
ಮೈಸೂರು

`ಅಡ್ಜುಡಿಕೇಟ್’ಗೆ ದಿ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್: 6 ಲಕ್ಷ ರೂ. ಮೌಲ್ಯದ ಟ್ರೋಫಿ, 60 ಲಕ್ಷ ನಗದು ಬಹುಮಾನ

March 2, 2020

ಮೈಸೂರು, ಮಾ.1(ಎಂಕೆ)- ಮೈಸೂರು ರೇಸ್ ಕ್ಲಬ್‍ನಲ್ಲಿ ನಡೆದ 58ನೇ ಆವೃತ್ತಿಯ ಪ್ರತಿಷ್ಠಿತ `ದಿ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್-2020’ ಅನ್ನು ಡಾ. ಖೈತಾನ್, ಶ್ರೀಮತಿ ಖೈತಾನ್, ಡಾ.ಜಲನ್, ಸೂಮ್ ಸ್ಟಡ್ ಫಾರ್ಮ್ ಪ್ರೈ.ಲಿಮಿಟೆಡ್, ಡಿ.ಎ. ನಂದ, ಇಶಾನಂದ, ಅಮಿತಾಬ್ ನಂದ ಮಾಲೀಕತ್ವದ ‘ಅಡ್ಜುಡಿಕೇಟ್’ ಮುಡಿಗೇರಿಸಿಕೊಂಡಿತು.

ಮೈಸೂರಿನ ರೇಸ್ ಕ್ಲಬ್ ಇತಿಹಾಸ ದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದ ‘ದಿ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್’ ರೇಸ್ ತೀವ್ರ ಕುತೂಹಲ ಸೃಷ್ಟಿಸಿತ್ತು. 14 ಬಹು ನಿರೀಕ್ಷಿತ ಪ್ರಥಮ ದರ್ಜೆಯ ಕುದುರೆಗಳ ನಡುವಿನ ಸ್ಪರ್ಧೆಯಲ್ಲಿ ಜಾಕಿ ವೈ.ಎಸ್.ಶ್ರೀನಾಥ್ ‘ಅಡ್ಜುಡಿಕೇಟ್’ ಕುದುರೆಯನ್ನು 2.26 ನಿಮಿಷದಲ್ಲಿ ಗುರಿ ತಲುಪಿಸಿದ್ದು ನೆರೆದಿದ್ದವರನ್ನು ನಿಬ್ಬೆರಗಾಗಿಸಿತು. ಮೊದಲಿಗೆ ಗುರಿ ಮುಟ್ಟುವ ಮೂಲಕ ‘ಅಡ್ಜುಡಿಕೇಟ್’ 6 ಲಕ್ಷ ರೂ. ಮೌಲ್ಯದ ಅತ್ಯಾಕರ್ಷಕ ಟ್ರೋಫಿ ಮತ್ತು 60 ಲಕ್ಷ ರೂ. ನಗದು ಬಹುಮಾನಕ್ಕೆ ಭಾಜನವಾಯಿತು.

ಡಾ.ಎಂ.ಎ.ಎಂ.ರಾಮಸ್ವಾಮಿ ಚೆಟ್ಟಿ ಯಾರ್ ಆಫ್ ಚೆಟ್ಟಿನಾಡ್ ಚಾರಿಟೆಬಲ್ ಟ್ರಸ್ಟ್ ಮಾಲೀಕತ್ವದ ಜಾಕಿ ಎ.ಸಂದೇಶ್ ಅವರ ‘ಜೂಲಿಯಟ್’ ದ್ವಿತೀಯ ಸ್ಥಾನ ಪಡೆಯುವ ಮೂಲಕ 20 ಲಕ್ಷ ರೂ. ನಗದು ಬಹುಮಾನ ಗಳಿಸಿತು. ರೇಡಿ ಯಂಟ್ ಬ್ಲಡ್‍ಸ್ಟಾಕ್ ಪ್ರೈ.ಲಿ. ಮಾಲೀಕತ್ವದ ಜಾಕಿ ಡೆವಿಡ್ ಅಲನ್ ಅವರ ‘ಡೆಸರ್ಟ್ ಗಾಡ್’ ತೃತೀಯ ಬಹುಮಾನ(10 ಲಕ್ಷ ರೂ.), ಸರೈನಗಾ ರೇಸಿಂಗ್ ಪ್ರೈ.ಲಿ. ಮಾಲೀಕತ್ವದ ಜಾಕಿ ಟ್ರೆವರ್ ಅವರ ‘ಅಂಜೇಜ್’ ನಾಲ್ಕನೇ ಬಹುಮಾನ(5 ಲಕ್ಷ ರೂ.) ಪಡೆಯಿತು.

Adjudicate wins Indian Turf Invitation Cup-1

ಇತರೆ ರೇಸ್‍ಗಳು: ರಾಜವಂಶಸ್ಥರಾದ ಡಾ.ಪ್ರಮೋದಾದೇವಿ ಒಡೆಯರ್, ಕಾಮಾಕ್ಷಿದೇವಿ ಮತ್ತು ಇಂದ್ರಾಕ್ಷಿದೇವಿ ಪ್ರಾಯೋಜಿತ 2,000 ಮೀ ಓಟದ ‘ದಿ ಮಹಾರಾಜ ಶ್ರೀ ಜಯಚಾರಾಜ ಒಡೆಯರ್ ಬರ್ತ್ ಸೆಂಚುನರಿ ಸೆಲಬ್ರೇಷನ್ ಮಿಲಿಯನ್ ಕಪ್’ನ್ನು ವಿಜಯ ರೇಸಿಂಗ್ ಅಂಡ್ ಫಾರ್ಮ್ ಪ್ರೈ.ಲಿ. ಮಾಲೀಕತ್ವದ ಜಾಕಿ ಡೆವಿಡ್ ಎಗನ್ ಅವರ ‘ದಿ ಗ್ರೇಟ್ ಗಟ್ಸ್ಬಯ್’ ಪಡೆದುಕೊಂಡಿತು. ಚದು ರಂಗ ಕಾಂತರಾಜ್ ಅರಸ್ ಪ್ರಾಯೋಜಿತ 1,600 ಮೀ. ಓಟದ ‘ದಿ ಗಾಯತ್ರಿದೇವಿ ಅಂಡ್ ಸರ್ದಾರ್ ಕೆ.ಬಿ.ರಾಮಚಂದ್ರರಾಜೇ ಅರಸ್ ಮಿಲಿಯನ್ ಕಪ್’ನ್ನು ಆರ್.ಸಿ. ಪುರಿ, ಮನೋಹರ್ ದುಗ್ಗಾಲ್ ಮಾಲೀಕತ್ವದ ಜಾಕಿ ಚೆಸ್ಟಿ ಅವರ ‘ಸ್ಟಾರಿ ವಿಂಡ್’ ಕುದುರೆ ಗಳಿಸಿಕೊಂಡಿತು. ಡಾ.ಸೈರಸ್ ಎಸ್.ಪೂನವಾಲಾ ಮತ್ತು ಮೈಸೂರು ರೇಸ್ ಕ್ಲಬ್ ಪ್ರಾಯೋಜಿತ 1,200 ಮೀ. ಓಟದ ‘ದಿ ವಿಲ್ಲೂ ಸಿ.ಪೂನವಾಲಾ ಮಿಲಿಯನ್ ಕಪ್’ನ್ನು ಅರುಣ್, ಅಲಗಪ್ಪನ್‍ರಾಯಲ್ ಬ್ಲೂ ಮಾಲೀಕತ್ವದ ಜಾಕಿ ಸಿ.ಎಸ್.ಜೋಧಾ ಅವರ ‘ಅಚೆನ್’ ತನ್ನದಾಗಿಸಿಕೊಂಡಿತು.

ಮಾರ್ಥಾಂಡ ಸಿಂಗ್ ಮಹೀಂದ್ರ ಮತ್ತು ಮೈಸೂರು ರೇಸ್ ಕ್ಲಬ್ ಪ್ರಾಯೋ ಜಿತ ಗ್ರೇಡ್ 2ನೇ ದರ್ಜೆಯ ‘ದಿ ಸುರೇಶ್ ಮಹಿಂದ್ರ ಮಲ್ಟಿ ಮಿಲಿಯನ್ ಟ್ರೋಫಿ’ ಯನ್ನು ರಿಎನ್ಜ್ ಎಂ.ಕೆ.ಎಡ್ವರ್ಡ್ ಮಾಲೀಕತ್ವದ ಜಾಕಿ ಸೂರಜ್ ನರೇಡು ಅವರ ‘ಮಲ್ಟಿಫೆಸಿಟೆಡ್’ ಕುದುರೆ ಪಡೆದುಕೊಂಡಿತು. ಉಷಾ ಸ್ಟಡ್ ಅಂಡ್ ಅಗ್ರಿಕಲ್ಚರ್ ಫಾಮ್ಸ್ ಪೈ.ಲಿ ಮತ್ತು ಟರ್ಫ್ ಅಥಾರಿಟಿ ಆಫ್ ಇಂಡಿಯಾ ಪ್ರಾಯೋ ಜಿತ 1,600 ಮೀ ಓಟದ ‘ದಿ ಮೇಜರ್ ಪಿ.ಕೆ. ಮೆಹ್ರಾ ಮೆಮೋರಿಯಲ್ ಸೂಪರ್ ಮೈಲ್ ಕಪ್’ನ್ನು ಜೆ.ಡಿ.ಗುಪ್ತ ಮಾಲೀಕತ್ವದ ಜಾಕಿ ಡೆವಿಡ್ ಅಲನ್ ಅವರ ‘ಟ್ರಫಾಲ್ಗರ್’ ಮತ್ತು ಯುನೈಟೆಡ್ ಬ್ಲಡ್‍ಸ್ಟಾಕ್ ಅಂಡ್ ಬ್ರೀಡರ್ಸ್ ಲಿಮಿಟೆಡ್ ಪ್ರಾಯೋಜಿತ 1,200 ಮೀ ಓಟದ ‘ದಿ ಕುಣಿಗಲ್ ಸ್ಟಡ್ ಮಿಲಿಯನ್ ಕಪ್’ನ್ನು ನಮ್ರತಾ ರಾಕೇಶ್, ಉಜಾಶ್ ಮಹೇಂದ್ರ ಪಟೇಲ್ ಮಾಲೀಕತ್ವದ ಜಾಕಿ ಪಿ.ಟ್ರವೆರ್ ಅವರ `ವಚನ್’ ಜಯಿಸಿದರೆ, ಮಲಯಾನ್ ರೇಸಿಂಗ್ ಅಸೋಸಿಯೇಷನ್ ಪ್ರಾಯೋ ಜಿತ 1,400 ಮೀ ಓಟದ ‘ದಿ ಮಲಯಾನ್ ರೇಸಿಂಗ್ ಅಸೋಸಿಯೇಷನ್ ಗುಡ್ ವಿಲ್ ಟ್ರೋಫಿ’ಯನ್ನು ಹೆಚ್.ಕೆ.ಲಕ್ಷ್ಮಣ್ ಗೌಡ ಮಾಲೀಕತ್ವದ ಜಾಕಿ ಆರ್.ಎನ್. ದರ್ಶನ್ ಅವರ ‘ಸ್ಟ್ರೈಕಿಂಗ್ ಮೆಮೋರಿ’ ತನ್ನದಾಗಿಸಿಕೊಂಡಿತು.

ರೇಸ್‍ನಲ್ಲಿ ಜಯಗಳಿಸಿದ ಕುದುರೆಗಳ ಮಾಲೀಕರಿಗೆ ಮೈಸೂರು ರೇಸ್ ಕ್ಲಬ್ ಅಧ್ಯಕ್ಷ ಡಾ.ನಿತ್ಯಾನಂದರಾವ್ ಹಾಗೂ ಪದಾ ಧಿಕಾರಿಗಳು ಬಹುಮಾನ ವಿತರಿಸಿದರು.

Translate »