ಇಲವಾಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಮೈಸೂರು

ಇಲವಾಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

March 2, 2020

ಮೈಸೂರು, ಮಾ.1- ಮೈಸೂರು ತಾಲೂಕಿನ ಇಲವಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಟೇಶ್, ಉಪಾಧ್ಯಕ್ಷರಾಗಿ ಚಿದಂಬರ ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ನಟೇಶ್ ಮತ್ತು ಚಿದಂಬರ ಮಾತ್ರ ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ರೇಣುಕಾ ಘೋಷಿಸಿದರು. ಈ ವೇಳೆ ನಿರ್ದೇಶಕರಾದ ಸುಧಾಕರ್, ನಂಜುಂಡಸ್ವಾಮಿ, ಬಿ.ಮಹದೇವಸ್ವಾಮಿ, ಸಾವಿತ್ರಮ್ಮ, ಶಿವೇಗೌಡ, ರಮೇಶ್, ಮಹಮದ್ ರಫೀಕ್, ವೆಂಕಟಾಚಲ, ಮಂಜುಳಾ ಸಂಘದ ಮೇಲ್ವಿಚಾರಕ ಚರಣ್ ಇದ್ದರು.

Translate »