ಮುಂಗಡ ಹಣ ಮರುಪಾವತಿ ವಿಚಾರ: ಸರ್ಕಾರದ ಲಿಖಿತ ಆದೇಶ ಹೊರಬಿದ್ದ ನಂತರ ಮುಂದಿನ ಹೋರಾಟದ ರೂಪುರೇಷೆ ನಿರ್ಧಾರ
ಮೈಸೂರು

ಮುಂಗಡ ಹಣ ಮರುಪಾವತಿ ವಿಚಾರ: ಸರ್ಕಾರದ ಲಿಖಿತ ಆದೇಶ ಹೊರಬಿದ್ದ ನಂತರ ಮುಂದಿನ ಹೋರಾಟದ ರೂಪುರೇಷೆ ನಿರ್ಧಾರ

June 14, 2020

ಮೈಸೂರು, ಜೂ.13(ಆರ್‍ಕೆ)- ಮದುವೆ ಹಾಗೂ ಇನ್ನಿತರೆ ಶುಭ ಸಮಾರಂಭ ಗಳಿಗೆ ಈಗಾಗಲೇ ಪಾವತಿಯಾಗಿರುವ ಮುಂಗಡ ಹಣ ಮರು ಪಾವತಿ¸ುವ ಸಂಬಂಧ ಸರ್ಕಾರ ಲಿಖಿತ ಆದೇಶ ಹೊರಬಿದ್ದ ನಂತರ ಮುಂದಿನ ಹೋರಾಟದ ಬಗ್ಗೆ ರೂಪು ರೇಷೆ ನಿರ್ಧರಿಸಲು ಕಲ್ಯಾಣ ಮಂಟಪ ಗಳ ಮಾಲೀಕರು ತೀರ್ಮಾನಿಸಿದ್ದಾರೆ.

ಮೈಸೂರಿನ ವಿಶ್ವೇಶ್ವರನಗರದ ಸಿಂಧೂರ ಕಲ್ಯಾಣ ಮಂಟಪದಲ್ಲಿ ಇಂದು ಸಭೆ ನಡೆಸಿ, ಸರ್ಕಾರದ ಮೌಖಿಕ ಆದೇಶ ಸಂಬಂಧ ಸುದೀರ್ಘ ಚರ್ಚೆ ನಡೆಸಿದ ಮಾಲೀಕರು, ಮದುವೆ, ಇನ್ನಿತರೆ ಶುಭ ಸಮಾರಂಭಕ್ಕೆಂದು ಕಲ್ಯಾಣ ಮಂಟಪ ಬುಕ್ ಮಾಡಿ ಮುಂಗಡ ಪಾವತಿಸಿದ್ದವರಿಗೆ ಹಣ ವಾಪಸ್ ನೀಡು ವಂತೆ ಸರ್ಕಾರ ಮೌಖಿಕವಾಗಿ ಆದೇಶಿಸಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆ ಗಳಿಗೆ ತೆರಿಗೆ ಕಟ್ಟಬೇಕು. ಸ್ವಚ್ಛತಾ ಖರ್ಚು, ವಿದ್ಯುತ್ ಶುಲ್ಕ, ಸಿಬ್ಬಂದಿ ಸಂಬಳ ಹೀಗೆ ನಾನಾ ವೆಚ್ಚ ಭರಿಸಬೇಕಾಗಿದೆ. ನಿರ್ವ ಹಣಾ ವೆಚ್ಚ ಅಧಿಕವಾಗಿದೆ. ಕೊರೊನಾ ವೈರಸ್ ಸೋಂಕಿನಿಂದಾಗಿ ಕಳೆದ 3 ತಿಂಗ ಳಿಂದ ಮದುವೆ ಸೇರಿದಂತೆ ಯಾವುದೇ ಸಮಾರಂಭಗಳು ನಡೆದಿಲ್ಲ. ಇಂತಹ ವೇಳೆ ನಾವೇ ಆರ್ಥಿಕ ಸಂಕಷ್ಟ ಎದುರಿಸು ತ್ತಿದ್ದು, ಈಗ ಸರ್ಕಾರ ಮುಂಗಡ ಹಣ ಮರು ಪಾವತಿಸಬೇಕೆಂದು ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ತಮಗಿರುವ ಖರ್ಚು-ವೆಚ್ಚ ಕಡಿತ ಮಾಡಿಕೊಂಡು ಉಳಿದ ಮುಂಗಡ ಹಣ ವಾಪಸ್ ಮಾಡಲು ನಮ್ಮ ತಕರಾರೇನೂ ಇಲ್ಲ. ಸರ್ಕಾರ ಆದೇಶ ಹೊರಡಿಸುವಾಗ ನಮ್ಮ ಆರ್ಥಿಕ ಸಂಕಷ್ಟವನ್ನೂ ಪರಿಗಣಿಸ ಬೇಕಿತ್ತು ಎಂದು ಕಲ್ಯಾಣ ಮಂಟಪಗಳ ಮಾಲೀಕರು ಪ್ರತಿಪಾದಿಸಿದರು. ದಿನೇ ದಿನೆ ಕೊರೊನಾ ವೈರಸ್ ಸೋಂಕು ಪ್ರಕರಣ ಗಳು ಹೆಚ್ಚುತ್ತಲೇ ಇರುವುದರಿಂದ ಸದ್ಯಕ್ಕೆ ಮದುವೆ ಹಾಗೂ ಯಾವುದೇ ಶುಭ ಸಮಾ ರಂಭಗಳು ನಡೆಯುವುದು ಅನುಮಾನ ವಾಗಿರುವುದರಿಂದ ನಮ್ಮ ತೊಂದರೆಯನ್ನು ಸರ್ಕಾರ ಮೌಖಿಕ ಆದೇಶ ಹೊರಡಿಸುವ ಮುನ್ನ ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಅವರು ತಿಳಿಸಿದರು. ಈ ಕುರಿತು ಸರ್ಕಾರ ಲಿಖಿತ ಆದೇಶ ಹೊರಡಿಸಿದ ಬಳಿಕ ಅದರಲ್ಲಿ ಯಾವ ಯಾವ ಅಂಶಗಳನ್ನು ಸೇರಿಸಲಾ ಗಿದೆ ಎಂಬುದನ್ನು ನೋಡಿಕೊಂಡು ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲು ಕಲ್ಯಾಣ ಮಂಟಪಗಳ ಮಾಲೀಕರು ನಿರ್ಧರಿಸಿದರು.

ಮೈಸೂರು ಜಿಲ್ಲಾ ಕಲ್ಯಾಣ ಮಂಟಪ ಗಳ ಮಾಲೀಕರ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಎಸ್.ಮೂರ್ತಿ, ಕಾರ್ಯದರ್ಶಿ ವೆಂಕಟೇಶ, ಖಜಾಂಚಿ ಮನೋಜ್‍ಕುಮಾರ್, ಸದಸ್ಯರಾದ ಶಿವಣ್ಣ, ಶಶಿಧರ್, ಚಂದ್ರಶೇಖರ್, ಮಲ್ಲಿನಾಥ ಸೇರಿದಂತೆ ಹಲವರು ಭಾಗವಹಿಸಿದ್ದರು.

Translate »