ಅಭಿವೃದ್ಧಿಗೊಂಡ ರಸ್ತೆಯಲ್ಲಿ ಅರೆನಗ್ನ ಜಾಹೀರಾತು ಪ್ರದರ್ಶನ
ಮೈಸೂರು

ಅಭಿವೃದ್ಧಿಗೊಂಡ ರಸ್ತೆಯಲ್ಲಿ ಅರೆನಗ್ನ ಜಾಹೀರಾತು ಪ್ರದರ್ಶನ

October 24, 2018

ಮೈಸೂರು: ಮೈಸೂರು-ಹುಣಸೂರು ರಸ್ತೆ, ಕಲಾ ಮಂದಿರದಿಂದ ವಾಲ್ಮೀಕಿ ರಸ್ತೆ ಜಂಕ್ಷನ್ ವರೆಗೆ ಇತ್ತೀಚೆಗಷ್ಟೇ ಸಂಸದ ಪ್ರತಾಪ ಸಿಂಹ ಅವರ ಮುತುವರ್ಜಿಯಿಂದ ಅಭಿವೃದ್ಧಿಗೊಂಡಿದ್ದು, ಇದೀಗ ಈ ಮಾರ್ಗದಲ್ಲಿ ಅಶ್ಲೀಲ ಜಾಹೀರಾತುಗಳು ರಾರಾಜಿಸುತ್ತಿದ್ದು, ಮೈಸೂರು ಸುಸಂಸ್ಕೃತ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು-ಹುಣಸೂರು ರಸ್ತೆಯನ್ನು ಕಲಾಮಂದಿರದಿಂದ ಪಡುವಾರಹಳ್ಳಿ ಜಂಕ್ಷನ್ ವರೆಗೆ ಅಗಲೀಕರಣಗೊಳಿಸಿ, ರಸ್ತೆಯ ಎರಡೂ ಬದಿಯಲ್ಲೂ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಜಲದರ್ಶಿನಿ ಅತಿಥಿ ಗೃಹ ಸಮೀಪದ ರಂಗಾಯಣ ಸಿಬ್ಬಂದಿ ವಸತಿಗೃಹಗಳ ಬಳಿ ಪುರುಷ, ಸ್ತ್ರೀ ಅರೆನಗ್ನ ಜಾಹೀರಾತು ಫಲಕವುಳ್ಳ ಹೋರ್ಡಿಂಗ್ ಅಳವಡಿಸಲಾಗಿದೆ.

ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಹೆದ್ದಾರಿಯಲ್ಲಿ ಪುರುಷ, ಮಹಿಳೆಯರ ಒಳ ಉಡುಪುಗಳ ಆಕ್ಷೇಪಾರ್ಹ ಹೋರ್ಡಿಂಗ್ ಅಳವಡಿಸಿರುವು ದಕ್ಕೆ ಮೈಸೂರಿನ ಬಗ್ಗೆ ಕಳಕಳಿಯುಳ್ಳ, ಬರಹ ಗಾರರೂ ಆದ ನಾಗಮಂಗಲ ನರಸಿಂಹ ಮೂರ್ತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಂತಹ ಜಾಹೀರಾತು ಪ್ರದರ್ಶನದಿಂದ ಈ ಮಾರ್ಗದ ವಾಹನ ಸವಾರರ ಗಮನ ಬೇರೆಡೆ ಸೆಳೆದು ಅಪಘಾತಗಳು ಸಂಭವಿಸುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಹಾಗಾಗಿ ಈ ಸ್ಥಳದಲ್ಲಿ ಹಾಕಲಾಗಿರುವ ಈ ಜಾಹೀರಾತನ್ನು ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಿ, ರಸ್ತೆಯ ಅಂದ ಕಾಪಾಡುವಂತೆ ಮನವಿ ಮಾಡಿದ್ದಾರೆ.

Translate »