ವಿಪತ್ತು ನಿರ್ವಹಣೆಗೆ ಸನ್ನದ್ಧರಾಗಿರಲು ಸಲಹೆ
ಹಾಸನ

ವಿಪತ್ತು ನಿರ್ವಹಣೆಗೆ ಸನ್ನದ್ಧರಾಗಿರಲು ಸಲಹೆ

May 20, 2019

ಹಾಸನ: ಪ್ರತಿ ಜಿಲ್ಲೆಯಲ್ಲಿ ಎದು ರಾಗಬಹುದಾದ ವಿವಿಧ ರೀತಿಯ ಅಪಾಯ ಗಳನ್ನು ಮೊದಲೇ ಗುರುತಿಸಿ ಅತ್ಯಂತ ವ್ಯವಸ್ಥಿತವಾದ ನಿರ್ವಹಣಾ ಯೋಜನೆ ಯನ್ನು ಸಿದ್ಧಪಡಿಸಿ ಸದಾ ಸನ್ನದ್ಧವಾಗಿ ರುವುದು ಅತೀ ಅಗತ್ಯ ಎಂದು ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಸಂಪನ್ಮೂಲ ಅಧಿಕಾರಿ ಪರಮೇಶ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ 2005ರ ಕುರಿತು ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಅಪಾಯ ಸಂಭವಿಸಿದ ನಂತರ ಕಾರ್ಯ ಪ್ರವೃತ್ತ ರಾಗುವುದಕ್ಕಿಂತ ಮೊದಲೇ ಮುಂಜಾಗ್ರತೆ ವಹಿಸುವುದು ಮುಖ್ಯ ಎಂದು ಹೇಳಿದರು.

ಜಿಲ್ಲಾ ಮಟ್ಟದ ಪ್ರಕೃತಿ ವಿಕೋಪ ನಿರ್ವ ಹಣಾ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾ ಗಿದ್ದು, ಇತರ ಹಲವು ಪ್ರಮುಖ ಅಧಿಕಾರಿ ಗಳು ಇದರ ಸದಸ್ಯರಾಗಿರುತ್ತಾರೆ. ಪ್ರತಿ ಯೊಂದು ಇಲಾಖೆಯು ಜವಾಬ್ದಾರಿ ಯುತ ಪಾತ್ರ ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.
ಪ್ರತಿಯೊಂದು ವಿಚಾರವಾಗಿ ಯೋಜನೆ, ಸಂಘಟನೆ, ಸಮನ್ವಯ ಹಾಗೂ ಅನು ಷ್ಠಾನ ಮುಖ್ಯ. ಪ್ರತಿಯೊಂದಕ್ಕೂ ಪೂರ್ವ ಸಿದ್ಧತೆ ಅತ್ಯಂತ ಮುಖ್ಯ. ಈಗ ಸಾಕಷ್ಟು ತಾಂತ್ರಿಕ ಪ್ರಗತಿ ಹೊಂದಿದ್ದು ಅದನ್ನು ಬಳಸಿ ಜಿಲ್ಲೆಯ ಭೌಗೊಳಿಕ ಪರಿಸ್ಥಿತಿ ಅಧ್ಯ ಯನ ಮಾಡಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಪರಿಹಾರ ಕ್ರಮಗಳನ್ನು ಕೈಗೊ ಳ್ಳುವ ಮೂಲಕ ಅಪಾಯಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಪೂರ್ವಸಿದ್ಧತೆ ಪ್ರಕ್ರಿಯೆ ಪರಿಹಾರಕ್ಕೂ ಅತೀ ಮುಖ್ಯ ಎಂದು ತಿಳಿಸಿದರು.

ನೀರು ಮತ್ತು ಹವಾಮಾನಕ್ಕೆ ಸಂಬಂ ಧಿಸಿದ ಅವಘಡಗಳು, ಭೂ ಪದರಕ್ಕೆ ಸಂಬಂಧಿಸಿದ ಅವಘಡ, ಮಾನವ ನಿರ್ಮಿತ ಹಾಗೂ ಜೈವಿಕ ಅಪಾಯಗಳ ಕುರಿತು ನಿರ್ವಹಣೆಗೆ ಸೂಕ್ಷ್ಮವಾಗಿ ಅವ ಲೋಕಿಸಿ ಸಂಭವನೀಯ ತೊಂದರೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಹೇಗೆ ನಿಯಂ ತ್ರಿಸಬೇಕು ಎಂಬುದರ ಬಗ್ಗೆ ವಿವರಿಸಿದರು.

ಜಿಲ್ಲೆಯ ಭೌಗೊಳಿಕ ನಕ್ಷೆಯನ್ನು ಗೂಗಲ್ ಮ್ಯಾಪ್ ಮೂಲಕ ಪಡೆದು ಅದ ರಲ್ಲಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಭೌಗೋಳಿಕ ಸಂಚಾರ ನಿಗದಿ ಮಾಡ ಬೇಕು. ಮಲೆನಾಡು ಪ್ರದೇಶಗಳಲ್ಲಿ ಹೊರ ಗಿನಿಂದ ಬಂದು ಜಮೀನು ಖರೀದಿಸಿ ವಾಣಿಜ್ಯ ಚಟುವಟಿಕೆ ನಡೆಸುವವರ ಬಗ್ಗೆಯೂ ನಿಗಾವಹಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಪ್ರಾಕೃತಿಕ ವಿಕೋಪಗಳ ನಿಯಂತ್ರಣ ಮತ್ತು ನಿರ್ವಹಣೆ ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಿದೆ. ತರ ಬೇತಿಯಲ್ಲಿ ನೀಡುವ ಮಾಹಿತಿಯನ್ನು ಗಮನಿಸಿ ತಮ್ಮ ಇಲಾಖೆಗಳಿಗೆ ಸಂಬಂ ಧಿಸಿದ ವಿಷಯಗಳ ಕುರಿತು ಪೂರ್ವ ತಯಾರಿ ನಡೆಸಿ ಎಂದರು.

ಪ್ರತಿಯೊಂದು ಇಲಾಖೆಯೂ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ತಾವು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಪಟ್ಟಿಮಾಡಿ ಅಧೀನ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ಹಾಗೂ ತರಬೇತಿ ನೀಡಬೇಕು. ಸಂಭವನೀಯ ಅಪಾಯಗಳನ್ನು ಗುರು ತಿಸಿಕೊಳ್ಳಬೇಕು ಎಂದರು.

ಭೂಗರ್ಭ ತಜ್ಞರು ತಮ್ಮ ಮನವಿ ಮೇರೆಗೆ ಸಕಲೇಶಪುರ ತಾಲೂಕಿಗೆ ಆಗ ಮಿಸಿದ್ದು ಅಪಾಯಕಾರಿಯಾಗಿರುವ ಸ್ಥಳ ಗಳನ್ನು ಪರಿಶೀಲಿಸುತ್ತಿದ್ದಾರೆ. ವಿವಿಧ ಇಲಾಖಾ ಅಧಿಕಾರಿಗಳು ಅವರನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯ ಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಖಾಸಗಿ ವ್ಯಕ್ತಿಗಳ ನಿರ್ಲಕ್ಷ್ಯ ಅಥವಾ ಅವರ ಅಸಡ್ಡೆ ಕಾರಣದಿಂದ ಪ್ರಾಕೃತಿಕ ಹಾನಿ ಹಾಗೂ ಇತರರಿಗೆ ತೊಂದರೆಯಾ ದಲ್ಲಿ ಅದಕ್ಕೆ ಆ ವ್ಯಕ್ತಿಗಳನ್ನು ಹೊಣೆಗಾರರ ನ್ನಾಗಿ ಮಾಡಬೇಕಾಗಿದ್ದು ತಹ ಸೀಲ್ದಾರ್ ಈ ಬಗ್ಗೆ ಗಮನಹರಿಸಬೇಕು ಎಂದರು.
ಸಭೆಯಲ್ಲಿ ಎಲ್ಲಾ ತಾಲೂಕುಗಳ ತಹ ಸೀಲ್ದಾರರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ಪ್ರತಿಯೊಂದು ಜಿಲ್ಲೆಯ ಸಂಭವನೀಯ ಅಪಾಯಗಳು ವಿಭಿನ್ನವಾಗಿರಬಹುದು. ಆದರೆ, ಅವುಗಳನ್ನು ಸೂಕ್ಷ್ಮವಾಗಿ ಮೊದಲೇ ಗ್ರಹಸಿ ಅವುಗಳ ತಡೆ, ನಿಯಂತ್ರಣ, ನಿರ್ವಹಣೆಗೆ ಯೋಜನೆ ರೂಪಿಸಿ ಜೊತೆಗೆ ತಂಡಗಳ ಮುಖ್ಯಸ್ಥರನ್ನು ಗುರುತಿಸಿ ಕರ್ತವ್ಯ ನಿಯೋಜಿಸಬೇಕು.
-ಪರಮೇಶ್, ಸಂಪನ್ಮೂಲ ಅಧಿಕಾರಿ, ಮೈಸೂರು ಆಡಳಿತ ತರಬೇತಿ ಸಂಸ್ಥೆ

Translate »