ಮೈಸೂರು, ಜೂ.25(ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ಮಾಡಿದ ನಂತರ ಕಳೆದ ಮಾರ್ಚ್ ತಿಂಗಳಿನಿಂದ ಮೈಸೂರಲ್ಲಿ 4 ಕೋಟಿ ರೂ. ನೀರಿನ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ವಾಣಿ ವಿಲಾಸ ವಾಟರ್ ವಕ್ರ್ಸ್ ಎಕ್ಸಿ ಕ್ಯೂಟಿವ್ ಇಂಜಿನಿಯರ್ ಪಿ.ನಾಗರಾಜಮೂರ್ತಿ ತಿಳಿಸಿದ್ದಾರೆ.
ಮೈಸೂರು ನಗರದ ಎಲ್ಲಾ 65 ವಾರ್ಡ್‍ಗಳ ನೀರು ಬಳಕೆದಾರರಿಂದ 180 ಕೋಟಿ ರೂ. ಬಾಕಿ ಉಳಿದಿರು ವುದರಿಂದ ಅದನ್ನು ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದ್ದು, ವಾಣಿ ವಿಲಾಸ ವಾಟರ್ ವಕ್ರ್ಸ್ ಸಿಬ್ಬಂದಿಗಳ ತಂಡವು ನಿತ್ಯ ಕಾರ್ಯಾಚರಣೆ ನಡೆಸುತ್ತಿದೆ ಎಂದರು.
ಲಾಕ್‍ಡೌನ್ ಘೋಷಿಸಿದ ತಿಂಗಳಲ್ಲಿ ಕೇವಲ 79 ಲಕ್ಷ ರೂ. ಸಂಗ್ರಹಿಸಲಾಗಿತ್ತು. ಕೊರೊನಾ ವೈರಸ್ ಸೋಂಕಿನ ಭೀತಿಯನ್ನೂ ಲೆಕ್ಕಿಸದೇ ಸಿಬ್ಬಂದಿಗಳು ಬಡಾ ವಣೆಗಳಿಗೆ ನೀರಿನ ತೆರಳಿ ಬಿಲ್ ನೀಡಿದ್ದರಿಂದಾಗಿ ಜನರು ಪಾವತಿಸಿದ್ದಾರೆ. ಸ್ಥಳದಲ್ಲಿಯೂ ವಸೂಲಿ ಮಾಡಿದ ಹಿನ್ನೆಲೆಯಲ್ಲಿ ಈವರೆಗೆ 4 ಕೋಟಿ ರೂ. ಸಂಗ್ರಹಿಸಿದ್ದೇವೆ ಎಂದು ನಾಗರಾಜಮೂರ್ತಿ ತಿಳಿಸಿದ್ದಾರೆ.
ಮೇ ಮಾಹೆವೊಂದರಲ್ಲೇ 3.21 ಲಕ್ಷ ರೂ. ವಸೂಲಿ ಮಾಡಲಾಗಿದ್ದು, ಜೂನ್ ಅಂತ್ಯದವರೆಗೆ 6 ಕೋಟಿ ರೂ. ನೀರಿನ ತೆರಿಗೆ ಸಂಗ್ರಹಿಸುವ ಗುರಿಯೊಂದಿಗೆ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಅದಕ್ಕಾಗಿಯೇ `ಕಾವೇರಿ’ ಮತ್ತು `ಕೆಬಿಸಿ’ ಎಂಬ ಎರಡು ಪ್ರತ್ಯೇಕ ವಾಹನಗಳನ್ನು ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಬಿಲ್ ವಸೂಲಾತಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಅವರು ತಿಳಿಸಿದರು.
ಸುಮಾರು 40 ಕೋಟಿ ರೂ.ಗಳಿಗೂ ಹೆಚ್ಚು ತೆರಿಗೆ ಹಣ ಸರ್ಕಾರಿ ಕಚೇರಿ ಸಂಸ್ಥೆ ಗಳಿಂದಲೇ ಬರಬೇಕಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಬಾಕಿ ನೀರಿನ ಬಿಲ್ ಪಾವತಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.