ಮೈಸೂರು, ಜೂ.25(ಆರ್‍ಕೆ)- ಸುಸಜ್ಜಿತ ಹವಾನಿಯಂತ್ರಿತ ಬಸ್ ಸಂಚಾರಕ್ಕೆ ಇಂದು ಚಾಲನೆ ನೀಡಲು ಉದ್ದೇಶಿಸಲಾಗಿತ್ತು. ಆದರೆ ಪ್ರಯಾಣಿಕರು ಇವುಗಳ ಹತ್ತಿರವೂ ಸುಳಿಯದೇ ಇದ್ದಾಗ ಎಸಿ ಬಸ್ ಸಂಚಾರ ಸದ್ಯಕ್ಕೆ ರದ್ದುಪಡಿಸಲಾಗಿದೆ.
ಸರ್ಕಾರದ ಅನುಮತಿ ಮೇರೆಗೆ ಕೆಎಸ್‍ಆರ್‍ಟಿಸಿ ಗ್ರಾಮಾಂತರ ವಿಭಾಗದ ಅಧಿಕಾರಿಗಳು ಗುರುವಾರ ಬೆಳಗ್ಗೆ ಮೈಸೂರಿನ ಸಬ ರ್ಬನ್ ಬಸ್ ನಿಲ್ದಾಣಕ್ಕೆ ಮಲ್ಟಿಕುಷನ್ಡ್ ವೋಲ್ವೋ ಎಸಿ ಬಸ್‍ಗಳ ತಂದು ನಿಲ್ಲಿಸಿದ್ದರು. ಪ್ರಯಾಣಿಕರು ಇವುಗಳ ಹತ್ತಿರವೂ ಸುಳಿ ಯದೇ ಗಂಟೆಗಟ್ಟಲೆ ಕಾದು, ಮಧ್ಯಾಹ್ನದ ನಂತರ ಈ ಬಸ್ ಗಳನ್ನು ಡಿಪೋಗೆ ವಾಪಸ್ ಕಳುಹಿಸಲಾಯಿತು. ಇಂದಿನಿಂದ ಬೆಂಗಳೂರಿಗೆ 4, ವಿರಾಜಪೇಟೆ, ಮಡಿಕೇರಿಗೆ ತಲಾ 2 ಹಾಗೂ ಮಣಿಪಾಲ್‍ಗೆ 1 ಎಸಿ ಬಸ್ಸು ಮೈಸೂರು ಸಬರ್ಬನ್ ಬಸ್ ನಿಲ್ದಾಣ ದಿಂದ ಕಾರ್ಯಾಚರಣೆಗಿಳಿಸಲು ಸಾರಿಗೆ ಸಂಸ್ಥೆ ನಿರ್ಧರಿಸಿ, ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಪ್ರಯಾಣಿಕರೇ ಬಾರದ ಕಾರಣ ಪ್ರಯಾಣ ರದ್ದುಪಡಿಸಲಾಯಿತು ಎಂದು ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾ ಧಿಕಾರಿ ಆರ್.ಅಶೋಕಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಿಂದಾಗಿ ಜನರು ಎಸಿ ಬಸ್ಸುಗಳಲ್ಲಿ ಪ್ರಯಾಣಿಸಲು ಮುಂದೆ ಬರುತ್ತಿಲ್ಲ. ಪ್ರಯಾಣಿಕರಿಲ್ಲದೆ ಬಸ್ಸುಗಳನ್ನು ಆಪರೇಟ್ ಮಾಡಲು ಸಾಧ್ಯವಿಲ್ಲ. ಬೇಡಿಕೆ ಬಂದರೆ ಮಾತ್ರ ಮುಂದಿನ ವಾರ ಎಸಿ ಬಸ್ಸುಗಳನ್ನು ಓಡಿಸುತ್ತೇವೆ ಎಂದರು. ಈಗಾಗಲೇ ಸಂಸ್ಥೆ ನಷ್ಟದಲ್ಲಿರು ವುದ ರಿಂದ ಇನ್ನಷ್ಟು ನಷ್ಟ ಮಾಡಿಕೊಳ್ಳಲಾಗದು. ಹಾಗಾಗಿ ಈಗ ನಾವು ಯಾವ ನಗರಕ್ಕೂ ಎಸಿ ಬಸ್ಸುಗಳನ್ನು ಸದ್ಯಕ್ಕೆ ಓಡಿಸುವು ದಿಲ್ಲ ಎಂದು ಅಶೋಕ್‍ಕುಮಾರ್ ತಿಳಿಸಿದರು