ಮೈಸೂರು, ಜೂ. 25- ಮೈಸೂರಿನ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾಯಿ, ಮಗು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ನಗರದ ಮಂಡಿ ಮೊಹಲ್ಲಾದ ಕಬೀರ್ ರಸ್ತೆ, 4ನೇ ಕ್ರಾಸ್ ನಿವಾಸಿ ಜಿ. ಹರೀಶ್ ಅವರ ಪತ್ನಿ ಉಷಾಭಾಯಿ (32) ಮತ್ತು ಪುತ್ರ ಆರೂಶ್ (3) ಕಾಣೆಯಾದವರು.
ಮನೆಯಲ್ಲಿ ಮಕ್ಕಳ ವಿಚಾರವಾಗಿ ನಡೆದ ಗಲಾಟೆ ಸಂಬಂಧ ಜೂ. 22 ರಂದು ಸಂಜೆ 4.30 ಗಂಟೆ ಸಮಯದಲ್ಲಿ ತನ್ನ ತವರು ಮನೆಯವರು ಕೊಟ್ಟಿದ್ದ ಬಟ್ಟೆ ಮತ್ತು ವಸ್ತುಗಳನ್ನು ತೆಗೆದುಕೊಂಡು ಮಗುವನ್ನು ಕರೆದುಕೊಂಡು ಆಟೋ ಹತ್ತಿ ಹೋದ ಉಷಾಬಾಯಿ ಇದುವರೆಗೂ ವಾಪಸ್ ಬಂದಿಲ್ಲ ಎಂದು ಆಕೆಯ ಪತಿ ಜಿ.ಹರೀಶ್ ದೂರು ನೀಡಿದ್ದಾರೆ. ಇವರ ಬಗ್ಗೆ ಮಾಹಿತಿ ತಿಳಿದಲ್ಲಿ ದೂ. 0821-2418113, 2418313, ಮೊ. 9845862184 ಸಂಪರ್ಕಿಸಲು ಕೋರಲಾಗಿದೆ.