SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು
ಅಧಿಕಾರಿಗಳಿಗೆ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಜಿ.ಟಿ.ದೇವೇಗೌಡರ ಸೂಚನೆ
ಮೈಸೂರು, ಜೂ.24(ಪಿಎಂ)- ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಕೊರೊನಾ ಸೋಂಕು ನಿವಾರಣೆ ಸಂಬಂಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಜಿ.ಟಿ.ದೇವೇಗೌಡ, ನಾಳೆಯಿಂದ (ಜೂ.25) ಆರಂಭವಾಗುವ ಎಸ್‍ಎಸ್ ಎಲ್‍ಸಿ ಪರೀಕ್ಷೆಯಲ್ಲಿ ಕ್ಷೇತ್ರದ ವಿದ್ಯಾರ್ಥಿ ಗಳಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಎಲ್ಲಾ ಅಗತ್ಯ ವ್ಯವಸ್ಥೆ ಮಾಡು ವಂತೆ ನಿರ್ದೇಶನ ನೀಡಿದರು.
ಮೈಸೂರಿನ ಜಲದರ್ಶಿನಿ ಅತಿಥಿಗೃಹ ಆವರಣದ ತಮ್ಮ ಕಚೇರಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿದ ಶಾಸಕರು, ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ನಿವಾರಣೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ನಾಳೆಯಿಂದ ಆರಂಭವಾ ಗುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮಕ್ಕ ಳಿಗೆ ಯಾವುದೇ ಸಮಸ್ಯೆ ಆಗಬಾರದು. ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣೆ ನಮ್ಮ ಹೊಣೆಯಾಗಿದ್ದು, ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಯಾವುದೇ ಕೊರತೆ ಉಂಟಾಗಬಾರದು. ಅಗತ್ಯವಿದ್ದರೆ ಇವು ಗಳಿಗೆ ತಗಲುವ ಹಣಕಾಸು ವ್ಯವಸ್ಥೆ ಮಾಡುವು ದಾಗಿಯೂ ತಿಳಿಸಿದರು.
ಪರೀಕ್ಷೆಯ ಮುನ್ನಾ ದಿನವೇ ಸ್ಯಾನಿಟೈಸರ್ ವ್ಯವಸ್ಥೆ ಮಾಡಿಕೊಳ್ಳಬೇಕು. ಜೊತೆಗೆ ಶೌಚಾ ಲಯಗಳ ಶುಚಿತ್ವ ಸೇರಿದಂತೆ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕಾಗಿಯೇ ಪ್ರತಿ ಕೇಂದ್ರಕ್ಕೆ ಇಬ್ಬರನ್ನು ನಿಯೋಜಿಸ ಬೇಕು. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಯಾಗದಂತೆ ಕ್ರಮ ವಹಿಸಬೇಕು. ಮಕ್ಕಳ ರಕ್ಷಣೆ ವಿಚಾರದಲ್ಲಿ ಸಣ್ಣ ನ್ಯೂನತೆಯೂ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಮೈಸೂರು ತಾಲೂಕು ಹಾಗೂ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿ ಯಲ್ಲಿ ಕೊರೊನಾ ಸೋಂಕಿಗೆ ಸಂಬಂಧಿಸಿ ದಂತೆ ಮಾಹಿತಿ ನೀಡಿದ ತಾಪಂ ಇಓ ಕೃಷ್ಣ ಕುಮಾರ್ ಹಾಗೂ ತಹಸೀಲ್ದಾರ್ ರಕ್ಷಿತ್, ರಮ್ಮನಹಳ್ಳಿ ಹಣ್ಣಿನ ವ್ಯಾಪಾರಿ ಸರಸ್ವತಿ ಪುರಂ, ಕುವೆಂಪುನಗರ ಸೇರಿದಂತೆ ಹಲ ವೆಡೆ ವ್ಯಾಪಾರ ಮಾಡಿದ್ದಾನೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ದಿನವೇ ಅವರ ಮನೆಯಲ್ಲಿ ಸುಮಾರು 20 ಮಂದಿ ನಂಟರಿಷ್ಟ ರಿದ್ದರು. 36 ಮಂದಿ ಪ್ರಾಥಮಿಕ ಹಾಗೂ 150ಕ್ಕೂ ಹೆಚ್ಚು ಮಂದಿ ದ್ವಿತೀಯ ಸಂಪರ್ಕವನ್ನು ಈತನೊಂದಿಗೆ ಹೊಂದಿದ್ದಾರೆ. ಈ ಸಂಬಂಧ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ 10 ಮಂದಿ ಇರಿ ಸಿದ್ದು, 26 ಮಂದಿಯನ್ನು ಹೋಂ ಕ್ವಾರಂಟೈ ನಲ್ಲಿ ಇರಿಸಲಾಗಿದೆ ಎಂದು ವಿವರಿಸಿದರು.
ಚಾಮುಂಡೇಶ್ವರಿ ವ್ಯಾಪ್ತಿ ಕ್ಷೇತ್ರಗೂ ಒಳ ಪಡುವ ಮೈಸೂರು ಪಾಲಿಕೆಯ ವಾಪ್ತಿಯ ಕೊರೊನಾ ಸೋಂಕು ಸಂಬಂಧ ವಿವರ ನೀಡಿದ ಪಾಲಿಕೆ ವಲಯ ಕಚೇರಿ-3ರ ಸಹಾಯಕ ಆಯುಕ್ತ ಶಿವಾನಂದಮೂರ್ತಿ, ಈ ವ್ಯಾಪ್ತಿಯ ದಟ್ಟಗಳ್ಳಿಯಲ್ಲಿ ಒಂದೇ ಮನೆ ಯಲ್ಲಿ ನಾಲ್ವರಿಗೆ ಪಾಸಿಟಿವ್ ಕಂಡು ಬಂದಿ ರುವ ಹಿನ್ನೆಲೆಯಲ್ಲಿ ಈ ನಿವಾಸದ ಒಂದು ರಸ್ತೆಯನ್ನು ಕಂಟೇನ್ಮೆಂಟ್ ವಲಯವಾಗಿ ಮಾಡಲಾಗಿದೆ. ತಮಿಳುನಾಡಿನಿಂದ ಬಂದಿದ್ದ ಮಹಿಳೆಯೊಬ್ಬರಿಗೆ ಪಾಸಿಟಿವ್ ಆದ ಹಿನ್ನೆಲೆ ಯಲ್ಲಿ ಅವರು ವಾಸವಿದ್ದ ಮತ್ತೊಂದು ದಟ್ಟಗಳ್ಳಿ ರಸ್ತೆಯನ್ನು ಕಂಟೇನ್ಮೆಂಟ್ ವಲಯ ಮಾಡಲಾಗಿದೆ ಎಂದು ತಿಳಿಸಿದರು.
ಟಿಕೆ ಬಡಾವಣೆಯಲ್ಲಿ ಒಂದು ರಸ್ತೆ ಕಂಟೇನ್ಮೆಂಟ್ ವಲಯ ಮಾಡಲಾಗಿದೆ. ರಾಮಕೃಷ್ಣನಗರದಲ್ಲಿ ಎರಡು ಪಾಸಿಟಿವ್ ಪ್ರಕರಣದಲ್ಲಿ ಅವರು ಗುಣಮುಖಗೊಂಡಿ ದ್ದಾರೆ. ಆದರೆ ಇನ್ನು ಇಲ್ಲಿನ 2 ರಸ್ತೆಗಳನ್ನು ಕಂಟೇನ್ಮೆಂಟ್ ವಲಯದಿಂದ ಮುಕ್ತಗೊಳಿ ಸಿಲ್ಲ. ಮೈಸೂರು ನಗರದ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟಾರೆ 8 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಇಬ್ಬರು ಗುಣಮುಖರಾಗಿದ್ದಾರೆ. 6 ಸಕ್ರಿಯ ಪ್ರಕರಣಗಳು ಇವೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸೋಂಕಿ ತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪ ರ್ಕಿತರನ್ನು ಪತ್ತೆ ಹಚ್ಚಿ ಸೋಂಕು ಹರಡುವಿಕೆ ಯನ್ನು ತಡೆಯಬೇಕು. ಅಲ್ಲದೆ, ಕಂಟೇನ್ಮೆಂಟ್ ವಲಯ ವ್ಯಾಪ್ತಿಯಲ್ಲಿ ಯಾವುದೇ ಅಗತ್ಯ ವಸ್ತುಗಳಿಗೆ ತೊಂದರೆ ಆಗದಂತೆ ಕ್ರಮ ಕೈ ಗೊಳ್ಳಬೇಕು ಎಂದು ಸೂಚನೆ ನೀಡಿದರು.
ಮೈಸೂರು ತಾಲೂಕು ಬಿಇಓ ಕೃಷ್ಣ ಮಾತ ನಾಡಿ, ರಮ್ಮನಹಳ್ಳಿಯ ಕಂಟೇನ್ಮೆಂಟ್ ಜೋನ್ ವ್ಯಾಪ್ತಿಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆ ಯುವ ಒಂದು ಹುಡುಗ ಇದ್ದು, ಅವನಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಪಾಸಿಟಿವ್ ಹಾಗೂ ಕ್ವಾರಂಟೈನ್‍ನಲ್ಲಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಿಲ್ಲ. ಆದರೆ ನಮ್ಮಲ್ಲಿ ಆ ರೀತಿಯ ಯಾವುದೇ ಪ್ರಕರಣಗಳಿಲ್ಲ ಎಂದು ತಿಳಿಸಿದರು.
ಮೈಸೂರು ತಾಲೂಕಿನಲ್ಲಿ 16 ಪರೀಕ್ಷಾ ಕೇಂದ್ರಗಳಿದ್ದು, 4,515 ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಅದರಲ್ಲಿ 98 ಮಂದಿ ಖಾಸಗಿ ವಿದ್ಯಾರ್ಥಿಗಳಾಗಿದ್ದಾರೆ. (15 ವರ್ಷ ಮೇಲ್ಪಟ್ಟು ಖಾಸಗಿಯಾಗಿ ಪರೀಕ್ಷೆ ಬರೆಯುತ್ತಿರುವವರು). ಸಾರಿಗೆ ವ್ಯವಸ್ಥೆ ಇಲ್ಲದ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೋರಿಕೆ ಮೇರೆಗೆ 14 ಕೆಎಸ್ ಆರ್‍ಟಿಸಿ ಬಸ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, 5 ವಾಹನಗಳನ್ನು ವ್ಯವಸ್ಥೆ ಮಾಡಿ ಕೊಳ್ಳಲಾಗಿದೆ. ಪ್ರಶ್ನೆ ಪತ್ರಿಕೆ ಪೂರೈಕೆಗೆ 8 ಮಾರ್ಗಗಳನ್ನು ವ್ಯವಸ್ಥೆ ಮಾಡಿಕೊಳ್ಳ ಲಾಗಿದೆ ಎಂದು ವಿವರಿಸಿದರು. ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್, ವೃತ್ತ ನಿರೀಕ್ಷಕ ಜೀವನ್, ತಾಲೂಕು ಆರೋಗ್ಯಾಧಿಕಾರಿ ಡಾ. ಮಹದೇವ ಪ್ರಸಾದ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಉಡುಪಿಯಿಂದ ಮೀನು ಆಮದು ಸ್ಥಗಿತಕ್ಕೆ ಚಿಂತನೆ…
ರಮ್ಮನಹಳ್ಳಿಯ ಹಣ್ಣಿನ ವ್ಯಾಪಾರಿ ಬೆಂಗಳೂರಿಗೆ ಹೋಗಿ ಹಣ್ಣು ತಂದಿದ್ದ. ಈ ಗ್ರಾಮದ ಅಂಗಡಿ ಮುಂಗಟ್ಟು, ದೇವಸ್ಥಾನ, ಗರಡಿ ಮನೆಗಳು ಸೇರಿದಂತೆ ಎಲ್ಲರ ಮನೆ ಬಾಗಿಲಿಗೆ ಹೋಗಿ ಅರಿವು ಮೂಡಿಸಲಾಗಿದೆ. ಇಲ್ಲಿ 130 ಮಂದಿ ಮೀನು ಮಾರಾಟಗಾರರಿದ್ದಾರೆ. ಅಲ್ಲದೆ, ಇವರು ಉಡುಪಿಯಿಂದ ಕೋಲ್ಡ್ ಕಂಟೈನರ್‍ನಲ್ಲಿ ತರುವ ಮೀನು ಸರಬರಾಜು ಮಾಡುತ್ತಾರೆ. ಉಡುಪಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ವ್ಯಾಪಕವಾಗುತ್ತಿದ್ದು, ಹೀಗಾಗಿ ಅಲ್ಲಿಂದ ಮೀನು ಸರಬರಾಜು ಸ್ಥಗಿತಗೊಳಿಸುವುದು ಒಳ್ಳೆಯದು ಎಂದು ತಾಪಂ ಇಓ ಕೃಷ್ಣಕುಮಾರ್, ಮತ್ತಿತರ ಅಧಿಕಾರಿಗಳು ಅಭಿಪ್ರಾಯಪಟ್ಟರು.
ಈ ವಿಚಾರವಾಗಿ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, ರಮ್ಮನಹಳ್ಳಿಯ 130 ಮಂದಿ ಮೀನು ಮಾರಾಟಗಾರರು ಉಡುಪಿಯಿಂದ ಮೀನು ತರಿಸಿಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಉಡುಪಿಯಲ್ಲಿ ಕೊರೊನಾ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಅಲ್ಲಿಂದ ಮೀನು ಸರಬರಾಜು ಸ್ಥಗಿತಗೊಳಿಸಲು ಸಾಧ್ಯವಿಲ್ಲವೇ? ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈಗ ಲಾಕ್‍ಡೌನ್ ಮುಕ್ತವಾಗಿರುವ ಹಿನ್ನೆಲೆಯಲ್ಲಿ ಸ್ವತಃ ಅವರೇ ಮೀನು ಮಾರಾಟ ಸ್ಥಗಿತಗೊಳಿಸುವುದು ಒಳ್ಳೆಯದು. ಆದಾಗ್ಯೂ ಏನು ಮಾಡುವುದು ಸೂಕ್ತ ಎಂದು ಚಿಂತಿಸುವುದಾಗಿ ತಿಳಿಸಿದರು.