ಶುದ್ಧ ಕುಡಿಯುವ ನೀರು ಘಟಕಕ್ಕೆ ಶಾಸಕ ರಾಮದಾಸ್ ಗುದ್ದಲಿಪೂಜೆ
ಮೈಸೂರು

ಶುದ್ಧ ಕುಡಿಯುವ ನೀರು ಘಟಕಕ್ಕೆ ಶಾಸಕ ರಾಮದಾಸ್ ಗುದ್ದಲಿಪೂಜೆ

June 25, 2020

ಮೈಸೂರು, ಜೂ.24(ಆರ್‍ಕೆಬಿ)- ಮೈಸೂರು ಮಹಾನಗರ ಪಾಲಿಕೆಯ 51ನೇ ವಾರ್ಡ್‍ನ ಅಗ್ರಹಾರದ ಬನುಮಯ್ಯ ವೃತ್ತದ ಬಳಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಬುಧವಾರ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾ ಡಿದ ಅವರು, ಕೃಷ್ಣರಾಜ ಕ್ಷೇತ್ರದ ರಮಾ ವಿಲಾಸ ರಸ್ತೆ, ಕ್ಷೇತ್ರಯ್ಯ ರಸ್ತೆ, ತೊಗರಿ ಬೀದಿ, ಬನುಮಯ್ಯ ರಸ್ತೆ, ಕೆಂಪನಂ ಜಾಂಬ ಅಗ್ರಹಾರ, ದೇವಾಂಬ ಅಗ್ರಹಾರ, ಚೆಲುವಾಂಬ ಅಗ್ರಹಾರದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ 14ನೇ ಹಣಕಾಸು ಯೋಜನೆಯಡಿ 12 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುತ್ತಿದೆ. 5 ರೂ.ಗೆ 20 ಲೀ. ಶುದ್ಧ ನೀರು ನೀಡಲಾಗುವುದು. ಇದಕ್ಕಾಗಿ ಪ್ರತ್ಯೇಕ ಬೋರ್‍ವೆಲ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭ ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ವಾಣಿ ವಿಲಾಸ ನೀರು ಸರಬ ರಾಜು ಕೇಂದ್ರದ ಕಾರ್ಯಪಾಲಕ ಅಭಿಯಂ ತರ ನಾಗರಾಜಮೂರ್ತಿ, ಸಹಾಯಕ ಅಭಿಯಂತರ ವಿನಯ್ ಕುಮಾರ್, 15ನೇ ವಾಡ್‍ನ ಅಭಿಯಂತರರಾದ ಕೃತಿಕಾ, ಮಧು, ಬಿಜೆಪಿ ಮಂಡಲ ಉಪಾಧ್ಯಕ್ಷ ಹೇಮಂತ ಕುಮಾರ್, ಯುವಮೋರ್ಚಾ ಅಧ್ಯಕ್ಷ ಮಲ್ಲಿ ಕಾರ್ಜುನ್, ವಾರ್ಡ್ ಅಧ್ಯಕ್ಷ ಗುರುರಾಜ್ ಶೆಣೈ, ಟಿ.ಎಸ್.ಅರುಣ, ವೆಂಕಟೇಶ್, ಲಕ್ಷ್ಮಿ, ನಾರಾಯಣ, ಅಶೋಕ್ ಇನ್ನಿತರÀರಿದ್ದರು.

 

 

 

 

 

 

Translate »