ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗೀಕಾರ
ಮೈಸೂರು

ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗೀಕಾರ

September 21, 2020

ನವದೆಹಲಿ, ಸೆ.20- ಭಾರೀ ವಿರೋಧದ ನಡುವೆಯೇ ಕೃಷಿ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತ ಘಟನೆಯನ್ನು ಭಾರತೀಯ ಕೃಷಿ ಇತಿಹಾಸದಲ್ಲಿ ಐತಿಹಾಸಿಕ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಎರಡು ಪ್ರಮುಖ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ ಸಿಕ್ಕ ನಂತರ ಭಾನುವಾರ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಕೃಷಿ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಸಂಸತ್ತಿ ನಲ್ಲಿ ಪ್ರಮುಖ ಮಸೂದೆಗಳು ಅಂಗೀಕಾರವಾಗಿದ್ದು, ಶ್ರಮ ಜೀವಿಗಳಾದ ರೈತರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇನ್ನು, ಕೃಷಿ ಕ್ಷೇತ್ರದ ಸಂಪೂರ್ಣ ಬದಲಾವಣೆಯನ್ನು ಈ ಮಸೂದೆಗಳು ಖಚಿತಪಡಿಸುತ್ತವೆ ಹಾಗೂ ಕೋಟ್ಯಾಂತರ ರೈತರ ಬದುಕು ಸಬಲೀಕರಣವಾಗುತ್ತದೆ. ದಶಕಗಳಿಂದ, ಭಾರತದ ರೈತ ವಿವಿಧ ನಿರ್ಬಂಧಗಳು ಹಾಗೂ ಮಧ್ಯವರ್ತಿ ಗಳ ಹಾವಳಿಗೆ ಕಂಗಾಲಾಗಿದ್ದ. ಸಂಸತ್ತು ಅಂಗೀಕರಿಸಿದ ಮಸೂದೆಗಳು ರೈತರನ್ನು ಇಂತಹ ತೊಂದರೆಗಳಿಂದ ಮುಕ್ತಗೊಳಿಸುತ್ತವೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಈ ಮಸೂದೆಗಳು ರೈತರ ಆದಾಯವನ್ನು ದ್ವಿಗುಣಗೊಳಿ ಸುವ ಮತ್ತು ಅವರಿಗೆ ಹೆಚ್ಚಿನ ಸಮೃದ್ಧಿ ನೀಡುವ ಪ್ರಯತ್ನಗಳಿಗೆ ಪೆÇ್ರೀತ್ಸಾಹ ನೀಡುತ್ತವೆ. ಇತ್ತೀಚಿನ ತಂತ್ರ ಜ್ಞಾನವನ್ನು ರೈತರಿಗೆ ತಲುಪಿಸುವಲ್ಲಿ ನಮ್ಮ ಕೃಷಿ ಕ್ಷೇತ್ರ ಎಡವಿದೆ. ಆದರೆ, ಈ ಮಸೂದೆ ಗಳ ಅಂಗೀಕಾರದಿಂದ ನಮ್ಮ ರೈತರು ಭವಿಷ್ಯದ ತಂತ್ರಜ್ಞಾನವನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು ಎಂದಿರುವ ಪ್ರಧಾನಿ ಮಸೂದೆಗಳನ್ನು ಸ್ವಾಗತಿಸಿದ್ದಾರೆ.

ಎಂಎಸ್‍ಪಿ ವ್ಯವಸ್ಥೆ ರದ್ದಾಗುವುದಿಲ್ಲ, ಸರಕಾರದಿಂದ ಕೃಷಿ ಉತ್ಪನ್ನಗಳ ಖರೀದಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ರೈತರಿಗೆ ಸೇವೆ ಸಲ್ಲಿಸುವುದಕ್ಕಾಗಿ ನಾವು ಇಲ್ಲಿದ್ದೇವೆ. ಅವರನ್ನು ಬೆಂಬಲಿಸಲು ಮತ್ತು ಅವರ ಮುಂದಿನ ಪೀಳಿಗೆಗೆ ಉತ್ತಮ ಜೀವನ ಖಾತ್ರಿಪಡಿಸಲು ಏನು ಬೇಕೋ ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದ್ದಾರೆ. ವಿರೋಧ ಪಕ್ಷಗಳ ಭಾರೀ ಗಲಾಟೆ ಹಾಗೂ ಪ್ರತಿಭಟನೆ ನಡುವೆಯೇ ಕೇಂದ್ರದ ಮೂರು ಕೃಷಿ ಮಸೂದೆಗಳ ಪೈಕಿ ಎರಡು ಪ್ರಮುಖ ಮಸೂದೆಗಳಿಗೆ ಧ್ವನಿಮತದ ಮೂಲಕ ಅಂಗೀಕಾರ ನೀಡಲಾಗಿದೆ. ಈಗ ರಾಷ್ಟ್ರ ಪತಿ ಅವರ ಅಂಕಿತವೊಂದೇ ಬಾಕಿಯಿದ್ದು, ಶೀಘ್ರದಲ್ಲಿ ಮಸೂದೆ ಗಳು ಕಾನೂನು ರೂಪ ಪಡೆಯಲಿವೆ.