ಇಂದಿನಿಂದ ವಿಧಾನಮಂಡಲ ಅಧಿವೇಶನ
ಮೈಸೂರು

ಇಂದಿನಿಂದ ವಿಧಾನಮಂಡಲ ಅಧಿವೇಶನ

September 21, 2020

ಬೆಂಗಳೂರು, ಸೆ.20- ಇತಿಹಾಸದಲ್ಲಿ ಮೊದಲ ಬಾರಿಗೆ ವಿಧಾನ ಮಂಡಲ ಅಧಿ ವೇಶನ ನಡೆಸಲು ಹೊಸ ಸವಾಲು ಎದು ರಾಗಿದೆ. ಕೊರೊನಾ ವೈರಸ್ ಆತಂಕದ ಮಧ್ಯೆ ಲೋಕಸಭಾ ಅಧಿವೇಶನ ನಡೆಯುತ್ತಿದೆ.

ಇದೀಗ ನಾಳೆ (ಸೋಮವಾರ)ಯಿಂದ ಕರ್ನಾಟಕ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಮೊದಲ ಸಲ ಹೊಸ ಸವಾಲುಗಳು ಮೂರು ರಾಜಕೀಯ ಪಕ್ಷಗಳಿಗೆ ಎದುರಾ ಗಿವೆ. ಜೊತೆಗೆ ಕರ್ನಾಟಕ ವಿಧಾನಸಭೆ ಸಚಿ ವಾಲಯ ಹೊಸ ಮಾರ್ಗಸೂಚಿ ಹೊರಡಿ ಸಿದ್ದು, ಮುಖ್ಯಮಂತ್ರಿ, ಸಚಿವರು, ವಿಪಕ್ಷ ನಾಯಕರು, ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಕಡ್ಡಾಯವಾಗಿ ಮಾರ್ಗಸೂಚಿ ಪಾಲನೆ ಮಾಡಬೇಕಾಗಿದೆ.

ಸುಗ್ರೀವಾಜ್ಞೆ, ಲಾಕ್‍ಡೌನ್ ಕಾಲದ ಆಡ ಳಿತ, ಕೋವಿಡ್ ನಿಯಂತ್ರಿಸಲು ವೈದ್ಯಕೀಯ ಸಲಕರಣೆಗಳ ಖರೀದಿ ಹಗರಣ ಸೇರಿ ದಂತೆ ಹಲವು ಸವಾಲುಗಳು ಸರ್ಕಾರದ ಮುಂದಿವೆ. ನಾಳೆಯಿಂದಲೇ ಅಧಿವೇಶನ ಆರಂಭವಾಗುವುದರಿಂದ ಸಂಪುಟ ವಿಸ್ತರಣೆ ಒತ್ತಡದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರಿಗೆ 2 ವಾರಗಳ ಬಿಡುವು ಸಿಕ್ಕಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳು ಅಧಿವೇಶನದಲ್ಲಿ ಎದುರಿಸುವ ಕುರಿತು ಪ್ರತ್ಯೇಕ ರಾಜಕೀಯ ತಂತ್ರಗಳನ್ನು ರೂಪಿಸಿಕೊಂಡಿವೆ.

ಸರ್ಕಾರಕ್ಕೆ ಸುಗ್ರೀವಾಜ್ಞೆಗಳ ಸವಾಲು!: ರಾಜ್ಯ ಬಿಜೆಪಿ ಸರ್ಕಾರಕ್ಕೆ ಈ ಮಳೆಗಾಲದ ಅಧಿವೇಶನ ಸವಾಲಾಗಿದ್ದು, ಭೂ ಸುಧಾ ರಣೆ ಕಾಯಿದೆ, ಎಪಿಎಂಸಿ ಕಾಯಿದೆ, ಕಾರ್ಮಿಕ ಕಾಯಿದೆ ತಿದ್ದುಪಡಿ, ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ಸೇರಿದಂತೆ 19 ಸುಗ್ರೀ ವಾಜ್ಞೆಗಳನ್ನು ಕಳೆದ 5 ತಿಂಗಳುಗಳ ಅವಧಿ ಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಹೊರಡಿ ಸಿದೆ. ಬಹುತೇಕ ಇಷ್ಟೊಂದು ಪ್ರಮಾಣ ದಲ್ಲಿ ಸುಗ್ರೀವಾಜ್ಞೆಗಳು ಅಧಿವೇಶನದಲ್ಲಿ ಮಂಡನೆ ಆಗುತ್ತಿರುವುದು ಇದೇ ಮೊದಲು.

ಕೇಂದ್ರ ಸರ್ಕಾರದ ಒತ್ತಡ ಇರುವುದ ರಿಂದ ಈ ಎಲ್ಲ ಸುಗ್ರೀವಾಜ್ಞೆಗಳಿಗೆ ಉಭಯ ಸದನಗಳಲ್ಲಿ ಅಂಗೀಕಾರ ಪಡೆದುಕೊಳ್ಳ ಬೇಕಾದ ಅನಿವಾರ್ಯತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇದೆ. ಒಂದೊಮ್ಮೆ ಸುಗ್ರೀವಾಜ್ಞೆ ಗಳಿಗೆ ಅಂಗೀಕಾರ ಪಡೆದುಕೊಳ್ಳದೆ ಇದ್ದರೆ ಅವುಗಳಿಗೆ ಕಾನೂನಿನ ರೂಪ ಸಿಗುವು ದಿಲ್ಲ. ಅದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮುಖಭಂಗವಾಗಲಿದೆ.

ಲಾಕ್‍ಡೌನ್ ಅವಧಿ ಲಾಭ ಪಡೆದು ಸರ್ಕಾರ 19 ಕಾಯಿದೆಗಳಿಗೆ ಸುಗ್ರೀವಾಜ್ಞೆ ಗಳ ಮೂಲಕ ತಿದ್ದುಪಡಿ ತಂದಿರುವುದು ವಿರೋಧ ಪಕ್ಷ ಕಾಂಗ್ರೆಸ್‍ಗೆ ಅರಿವಿದೆ. ಜೊತೆಗೆ ಈ ಅಧಿವೇಶನದಲ್ಲಿ ಇನ್ನೂ 10 ಕಾಯಿದೆ ಗಳಿಗೆ ತಿದ್ದುಪಡಿ ತರಲು ಸರ್ಕಾರ ತಿದ್ದುಪಡಿ ವಿಧೇಯಕಗಳ ಮಂಡನೆ ಮಾಡುತ್ತಿದೆ. ಇಷ್ಟೇ ಅಲ್ಲ ಕಳೆದ ಮಾರ್ಚ್‍ನಲ್ಲಿ ಮೊಟಕು ಗೊಳಿಸಲಾಗಿದ್ದ ಬಜೆಟ್ ಅಧಿವೇಶನದಲ್ಲಿ ಮಂಡನೆ ಆಗಿರುವ ಎರಡು ಪ್ರಮುಖ ಕಾಯಿದೆಗಳಿಗೆ ಅಂಗೀಕಾರ ಪಡೆದುಕೊಳ್ಳ ಬೇಕಿದೆ. ಹೀಗಾಗಿ ಒಟ್ಟು ಸುಮಾರು 31 ಕಾಯಿದೆಗಳಿಗೆ ಉಭಯ ಸದನಗಳಲ್ಲಿ ಅಂಗೀಕಾರ ಪಡೆದುಕೊಳ್ಳುವುದು ಅಗತ್ಯ ವಾಗಿದೆ. ಹೀಗಾಗಿ ಗದ್ದಲ ಮಾಡದೇ ಚರ್ಚೆ ಯಲ್ಲಿ ಭಾಗವಹಿಸಲು ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಿದೆ. ಸದನಗಳಲ್ಲಿ ಗದ್ದಲ ಮಾಡಿದರೆ ಚರ್ಚೆ ಇಲ್ಲದೆಯೇ ಸರ್ಕಾರ ಎಲ್ಲ ಕಾಯಿದೆಗಳಿಗೆ ಅನುಮೋದನೆ ಪಡೆದು ಕೊಳ್ಳಲು ಸಹಾಯಕವಾಗುತ್ತದೆ. ಹೀಗಾಗಿ ಚರ್ಚೆಯಲ್ಲಿ ಭಾಗವಹಿಸುವ ಮೂಲಕ ಎಲ್ಲ ಕಾಯಿದೆಗಳ ಕುರಿತು ಸುದೀರ್ಘ ಚರ್ಚೆ ಮಾಡುವುದಕ್ಕೆ ಕಾಂಗ್ರೆಸ್ ಸಿದ್ಧತೆ ಮಾಡಿ ಕೊಂಡಿದೆ. ಚರ್ಚೆಯ ಮೂಲಕ ಸುಗ್ರೀ ವಾಜ್ಞೆಗಳಲ್ಲಿನ ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ
ಜನವಿರೋಧಿ ಅಂಶಗಳನ್ನು ಜನರಿಗೆ ತಿಳಿಸುವುದು ಕಾಂಗ್ರೆಸ್ ತಂತ್ರ.

ಕಟ್ಟುನಿಟ್ಟಿನ ಹಾಜರಿ ಕಡ್ಡಾಯ: ಜೊತೆಗೆ ಸುಮಾರು 1200 ಪ್ರಶ್ನೆಗಳನ್ನು ಅಧಿವೇಶನ ದಲ್ಲಿ ಉತ್ತರಿಸಲು ಹಾಕಲಾಗಿದೆ. ಈ ಎಲ್ಲ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಟ್ಟಲ್ಲಿ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುವುದು ಕಾಂಗ್ರೆಸ್ ಪಕ್ಷಕ್ಕೆ ಸುಲಭವಾಗಲಿದೆ. ಜೊತೆಗೆ ನಿಲುವಳಿ ಸೂಚನೆ, ನಿಯಮ 330 ರಡಿ ಚರ್ಚೆ, ಗಮನ ಸೆಳೆಯುವ ಸೂಚನೆಗಳು, ಶೂನ್ಯ ವೇಳೆ ಎಲ್ಲ ಸಂದರ್ಭವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಾಗಿದ್ದು, ಪಕ್ಷದ ಎಲ್ಲ ಶಾಸಕರೂ ಗಂಭೀರವಾಗಿ ಪಾಲ್ಗೊಳ್ಳುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಇನ್ನು ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದಿಂದ ಸಮಾನಾಂತರ ದೂರ ಕಾಪಾಡಿಕೊಂಡು ಅಧಿವೇಶನದಲ್ಲಿ ಭಾಗವಹಿಸಲು ಜೆಡಿಎಸ್ ತೀರ್ಮಾನ ಮಾಡಿದೆ. ಮೈತ್ರಿ ಸರ್ಕಾರದ ಪತನದ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮಧ್ಯೆ ವಾಕ್ಸಮರ ಜೋರಾಗಿದ್ದು, ಹೀಗಾಗಿ ಅಧಿವೇಶನದಲ್ಲಿ ಕಾಂಗ್ರೆಸ್ ನಿಲುವುಗಳ ಕುರಿತು ಜೆಡಿಎಸ್ ತಟಸ್ಥವಾಗಿ ಉಳಿಯಲಿದೆ. ಸದನದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ಅದರ ನೇರ ಪರಿಣಾಮ ಶಾಸಕರು ಹಾಗೂ ಕಾರ್ಯಕರ್ತರ ಮೇಲಾಗಲಿದೆ. ಹೀಗಾಗಿ ಸರ್ಕಾರ ಪತನವಾಗಲು ಕಾರಣವಾಗಿದ್ದ ಅಂಶಗಳನ್ನು ಜೆಡಿಎಸ್ ಪ್ರಮುಖವಾಗಿ ಪ್ರಸ್ತಾಪ ಮಾಡಲಿದೆ.

ಜೊತೆಗೆ ರೈತ ವಿರೋಧ, ಕಾರ್ಮಿಕ ವಿರೋಧಿ ನೀತಿಗಳೂ ಸೇರಿದಂತೆ ಹಲವು ವಿಚಾರಗಳನ್ನು ಜೆಡಿಎಸ್ ಪ್ರಸ್ತಾಪ ಮಾಡಲು ನಿರ್ಧರಿಸಿದೆ. ಒಟ್ಟಾರೆ, ಮೂರು ರಾಜಕೀಯ ಪಕ್ಷಗಳು ಮಳೆಗಾಲದ ಅಧಿವಶನದಲ್ಲಿ ಚಳಿ ಬಿಟ್ಟು ಭಾಗವಹಿಸಿ ಜನರಸ ಸಮಸ್ಯೆಗಳಿಗೆ ಸ್ಪಂದಿಸಲಿ ಎಂಬುದು ಜನರ ಒತ್ತಾಯ!

Translate »