ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ಆರಂಭ
ಮೈಸೂರು

ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ಆರಂಭ

September 22, 2020

ಮೊದಲ ದಿನ ಗಣಿತ ಪರೀಕ್ಷೆಗೆ 5749 ವಿದ್ಯಾರ್ಥಿಗಳ ಪೈಕಿ 518 ಮಂದಿ ಗೈರು
ಮೈಸೂರು,ಸೆ.21(ಆರ್‍ಕೆಬಿ)-ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗಳು ಸೋಮವಾರ ದಿಂದ ಆರಂಭವಾಗಿದ್ದು, ಮೈಸೂರು ನಗರದ 15 ಪರೀಕ್ಷಾ ಕೇಂದ್ರಗಳು ಸೇರಿದಂತೆ ಜಿಲ್ಲೆಯ ಒಟ್ಟು 35 ಪರೀಕ್ಷಾ ಕೇಂದ್ರ ಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆ ಯಿತು. ಮೊದಲ ದಿನವಾದ ಇಂದು ನಡೆದ ಗಣಿತ ಪರೀಕ್ಷೆಗೆ ನೋಂದಾ ಯಿಸಿಕೊಂಡಿದ್ದ 5749 ಅಭ್ಯರ್ಥಿ ಗಳ ಪೈಕಿ 5231 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 518 ಮಂದಿ ಗೈರು ಹಾಜರಾಗಿದ್ದರು. ಎಲ್ಲಾ ವಿಷಯಗಳು ಸೇರಿದಂತೆ ಒಟ್ಟಾರೆ 9762 ಅಭ್ಯರ್ಥಿ ಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಈ ಪೈಕಿ ಬಾಲಕರು 6155, ಬಾಲಕಿ ಯರು 3607 ಮಂದಿ ಇದ್ದಾರೆ. ಪರೀಕ್ಷೆಗಳು ಸೆ.28ರವರೆಗೆ ನಡೆಯಲಿದ್ದು, ಸೆ.22 ರಂದು ಕನ್ನಡ, 23ರಂದು ಸಮಾಜ ವಿಜ್ಞಾನ, 24ರಂದು ದ್ವಿತೀಯ ಭಾಷೆ, 25ರಂದು ತೃತೀಯ ಭಾಷೆ ಮತ್ತು 28ರಂದು ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. ಪ್ರತಿದಿನ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ನಡೆಯಲಿವೆ. ಮಾಸ್ಕ್ ಮತ್ತು ಸಾಮಾಜಿಕ ಅಂತರದಡಿ ಪರೀಕ್ಷೆ ನಡೆಸಲಾಗಿದ್ದು, ಯಾವುದೇ ತೊಂದರೆ ಇಲ್ಲದೆ ಸುಸೂತ್ರವಾಗಿ ನಡೆಯಿತು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾಂಡುರಂಗ ತಿಳಿಸಿದರು.

Translate »