ಭಾರತೀಯ ಸಾಂಸ್ಕøತಿಕ ವಿಕಾಸ ವೇದಿಕೆಯಿಂದ ಇಂದು ಕಾವೇರಿಗೆ ಬಾಗಿನ ಸಮರ್ಪಣೆ
ಮೈಸೂರು

ಭಾರತೀಯ ಸಾಂಸ್ಕøತಿಕ ವಿಕಾಸ ವೇದಿಕೆಯಿಂದ ಇಂದು ಕಾವೇರಿಗೆ ಬಾಗಿನ ಸಮರ್ಪಣೆ

September 22, 2020

ಮೈಸೂರು,ಸೆ.21(ಆರ್‍ಕೆಬಿ)-ಮೈಸೂರಿನ ಭಾರತೀಯ ಸಾಂಸ್ಕøತಿಕ ವಿಕಾಸ ವೇದಿಕೆ, ಭೂಮಿಕಾ ಭಾವೈಕ್ಯ ಬಳಗದ ಸಂಯುಕ್ತ ಆಶ್ರಯದಲ್ಲಿ ಅಖಿಲ ಕರ್ನಾಟಕ ಶಿವಶರಣ ಮಾದಾರ ಚನ್ನಯ್ಯ ವಿಚಾರ ವೇದಿಕೆ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸ್ಯಾಂಡಲ್‍ವುಡ್ ಸೆಲೆಬ್ರಿಟಿಸ್ ಸಹಕಾರದಲ್ಲಿ ಸೆ.22ರಂದು ಮಧ್ಯಾಹ್ನ 12 ಗಂಟೆಗೆ ಕೃಷ್ಣರಾಜಸಾಗರದ ಬಲದಂಡೆ ನಾಲೆ ಬಳಿ ಕಾವೇರಿ ಮಾತೆಗೆ 7ನೇ ವರ್ಷದ ಬಾಗಿನ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ತಗಡೂರು ಗೌರಿಶಂಕರ್ ತಿಳಿಸಿದರು.

ವ್ಯಾಸರಾಜಮಠದ ಶ್ರೀ ವಿದ್ಯಾಮನೋಹರತೀರ್ಥ ಸ್ವಾಮೀಜಿ, ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮೇಯರ್ ತಸ್ನೀಂ ಬಾಗಿನ ಸಮರ್ಪಣೆ ಮಾಡುವರು. ಬಳಿಕ ಮೇಯರ್ ತಸ್ನೀಂ, ಮೈಸೂರು ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಬಿಜೆಪಿ ಮಹಿಳಾ ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ಮಂಗಳಾ ಸೋಮಶೇಖರ್, ವಕೀಲರಾದ ಸ್ಮಿತಾ ದೇವಯ್ಯ, ಎಸ್.ಕೆ.ವೈದೇಹಿ ಇಳೈ ಆಳ್ವಾರ್ ಸ್ವಾಮೀಜಿ, ಕೆ.ಸುಧಾಮಣಿ ಮಹದೇವಪ್ಪ, ಇಂದಿರಾ ವೆಂಕಟೇಶ್, ಎನ್.ಎಸ್.ಶಾರದಾ ಜಗದೀಶ್ ಅವರಿಗೆ ಕರುನಾಡ ಮಹಿಳಾಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ಸಂಸ್ಕøತಿ ಚಿಂತಕ ಡಾ.ಕೆ.ರಘುರಾಂ ವಾಜಪೇಯಿ ಅಧ್ಯಕ್ಷತೆ ವಹಿಸುವರು ಎಂದು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗೋಷ್ಠಿಯಲ್ಲಿ ಉದ್ಯಮಿ ಎಸ್.ವೆಂಕಟೇಶ್, ಶ್ರೀ ಶಿವಶರಣ ಮಾದಾರ ಚೆನ್ನಯ್ಯ ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಎಸ್.ಈ.ಮಹದೇವಪ್ಪ, ಇಳೈ ಆಳ್ವಾರ್ ಸ್ವಾಮೀಜಿ, ವಕೀಲರಾದ ಸ್ಮಿತಾ ದೇವಯ್ಯ, ವೇದಿಕೆ ಗೌರವಾಧ್ಯಕ್ಷೆ ಡಾ.ನಳಿನಿ ತಮ್ಮಯ್ಯ ಇದ್ದರು.

Translate »