ಕಲಾವಿದರು ಬದುಕಿದ್ದಾಗಲೇ ಅವರ   ಕುಟುಂಬಕ್ಕೆ ಸರ್ಕಾರ ನೆರವಾಗಬೇಕು
ಮೈಸೂರು

ಕಲಾವಿದರು ಬದುಕಿದ್ದಾಗಲೇ ಅವರ  ಕುಟುಂಬಕ್ಕೆ ಸರ್ಕಾರ ನೆರವಾಗಬೇಕು

September 22, 2020

ಮೈಸೂರು, ಸೆ.21(ಆರ್‍ಕೆಬಿ)- ಕಲಾವಿದರು ಬದುಕಿರು ವಾಗಲೇ ಸರ್ಕಾರ ಅವರ ಕುಟುಂಬಕ್ಕೆ ಏನಾದರೂ ಸಹಾಯ ಮಾಡಬೇಕು. ಹಿರಿಯ ಹಾಸ್ಯನಟ ಕೆ.ಎಂ.ರತ್ನಾಕರ್ ಅವರನ್ನು ಕನ್ನಡ ಚಿತ್ರರಂಗ ಕಳೆದುಕೊಂಡು ದಶಕ ಕಳೆದಿದ್ದರೂ ಸರ್ಕಾರ ಅವರನ್ನು ಕುರಿತು ಪುಸ್ತಕ ಪ್ರಕಟಿಸಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಿಲ್ಲ ಎಂದು ಸಾಹಿತಿ, ಅಂಕಣಕಾರ ಬನ್ನೂರು ಕೆ.ರಾಜು ಬೇಸರ ವ್ಯಕ್ತಪಡಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸೋಮವಾರ ಹಾಸ್ಯನಟ ರತ್ನಾಕರ್ ಅಭಿಮಾನಿ ಬಳಗ ಏರ್ಪಡಿಸಿದ್ದ ರತ್ನಾಕರ್ ಅವರ 10ನೇ ವರ್ಷದ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾ ಡಿದರು. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟನೆಯ ಮೂಲಕ ಜನಮನ ಸೂರೆಗೊಂಡಿದ್ದ ದಿವಂಗತ ಕೆ.ಎಂ.ರತ್ನಾಕರ್ ಮತ್ತು ಅವರ ಕುಟುಂಬದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತಾಳಿದೆ. ಕಲಾವಿ ದರು ಬದುಕಿರುವಾಗಲೇ ಅವರ ಕುಟುಂಬಕ್ಕೆ ಏನಾದರೂ ಮಾಡ ಬೇಕು. ಸಣ್ಣ ಸಣ್ಣ ಪುಸ್ತಕಗಳನ್ನು ಮುದ್ರಿಸಿ ಮುಂದಿನ ಪೀಳಿಗೆಗೆ ಅವರ ಕೊಡುಗೆ ಸ್ಮರಿಸುವ ಕೆಲಸ ಮಾಡಬೇಕು. ಇವರಂತೆಯೇ ನಿರ್ಲಕ್ಷಿತ ಹಾಗೂ ಅಸಹಾಯಕ ಕಲಾವಿದರಿಗೆ ನೆರವಾಗಬೇಕು. ಕಲಾವಿದರ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಕಲಾವಿದರ ಸಂಘಗಳು ಸಹ ಮಾಡಬೇಕು ಎಂದು ಒತ್ತಾಯಿಸಿದರು.

ಎಲ್ಲಾ ನಟರ ಧ್ವನಿಯನ್ನು ಮಿಮಿಕ್ರಿ ಕಲಾದವಿದರು ಮಾಡಿ ದ್ದಾರೆ. ಆದರೆ ರತ್ನಾಕರ್ ಅವರ ಧ್ವನಿಯನ್ನು ಇದುವರೆಗೆ ಯಾರಿಂದಲೂ ಅನುಕರಣೆ ಮಾಡಲಾಗಿಲ್ಲ. ಅಂತಹ ಕಲಾ ವಿದರ ನೆನಪುಮಾಡಿಕೊಳ್ಳುವ ಮೂಲಕ ನಾವು ಅವರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು. ರತ್ನಾಕರ್ ಅವರ ಒಡನಾಡಿ ಕುಪ್ಯ ವೆಂಕಟರಾವ್ ಅವರು ಇಳಿವಯಸ್ಸಿನಲ್ಲೂ ತಮ್ಮ ಸುಶ್ರಾವ್ಯ ಕಂಠದಿಂದ ರಂಗಗೀತೆಯನ್ನು ಹಾಡುವ ಮೂಲಕ ತಮ್ಮ ಗೆಳೆಯ ರತ್ನಾಕರ್ ಅವರನ್ನು ಸ್ಮರಿಸಿದರು. ನಟ ರತ್ನಾಕರ್ ಪುತ್ರ ರಾಘವೇಂದ್ರ ರತ್ನಾಕರ್, ಮೊಮ್ಮಗಳು ಶ್ರೇಷ್ಠ ಕೆ.ರಾಘ್ ಅವರು ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಮೇಲುಕೋಟೆ ವೆಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಸಂಸ್ಕøತಿ ಚಿಂತಕ ಕೆ.ರಘುರಾಂ ವಾಜಪೇಯಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಬಿಜೆಪಿ ಮುಖಂಡ ಗೋಪಾಲರಾವ್, ಮುಕ್ತಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಸ್.ರಾಮಪ್ರಸಾದ್, ಡಾ.ಎಂ.ಪಿ. ಪ್ರೀತಂ ರಾಘವೇಂದ್ರ ರತ್ನಾಕರ್ ಇನ್ನಿತರರು ಉಪಸ್ಥಿತರಿದ್ದರು.

Translate »