ವಾಯುಪಡೆ ಯೋಧ, ಆಲೂರಿನ ಮೋಹನ್‍ಕುಮಾರ್ ಆತ್ಮಹತ್ಯೆ
ಹಾಸನ

ವಾಯುಪಡೆ ಯೋಧ, ಆಲೂರಿನ ಮೋಹನ್‍ಕುಮಾರ್ ಆತ್ಮಹತ್ಯೆ

June 10, 2019

ಹರಿಯಾಣದ ಶಿರಸಾ ಕ್ಯಾಂಪ್ ನಲ್ಲಿ ರೈಫಲ್‍ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಆಲೂರು: ಹಾಸನ ಜಿಲ್ಲೆ ಆಲೂರು ತಾಲೂಕಿನ ಯುವ ಯೋಧ ರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಪತ್ರದಲ್ಲಿ ತಾಯಿ ಮತ್ತು ಪತ್ನಿಯ ಕ್ಷಮೆ ಕೋರಿದ್ದಾರೆ.

ಹರಿಯಾಣದಲ್ಲಿ ಭಾರತೀಯ ವಾಯು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕದಾಳು ನಿವಾಸಿ ಪುತ್ರ ಮೋಹನ್ ಕುಮಾರ್(28) ಶುಕ್ರವಾರ ಸಂಜೆ ತಮ್ಮದೇ ಸರ್ವಿಸ್ ಬಂದೂಕಿನಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. ತಂದೆ ವಸಂತ, ತಾಯಿ, ಪತ್ನಿ, ಸಹೋದರ ಶಾಂತರಾಜು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ.

8 ವರ್ಷಗಳಿಂದ ವಾಯುಸೇನೆಯ ಸಿಆರ್‍ಪಿಎಸ್ ವಿಭಾಗದಲ್ಲಿ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿದ್ದ ಮೋಹನ್ ಕುಮಾರ್, ಕದಾಳಿನ ವಸಂತ ಅವರ ಪುತ್ರ. ಮೋಹನ್ ಎಂಕಾಂ ಪದವೀಧರರಾಗಿದ್ದರು. 3 ವರ್ಷ ಗಳಿಂದೀಚೆಗೆ ಹರಿಯಾಣದ ಶಿರಸಾ ಏರ್‍ಫೆÇೀರ್ಸ್ ಸ್ಟೇಷನ್‍ಗೆ ಅವರಿಗೆ ವರ್ಗವಾಗಿತ್ತು. 2 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಅವರು, ಪತ್ನಿಯನ್ನು ಶಿರಸಾ ಕ್ಯಾಂಪ್‍ಗೆ ಕರೆದೊಯ್ದಿದ್ದರು.

ಮೋಹನ್ ಕುಮಾರ್ ಶುಕ್ರವಾರ ಮಧ್ಯಾಹ್ನ ಕಚೇರಿಯಲ್ಲಿ ಕರ್ತವ್ಯನಿರತ ನಾಗಿದ್ದರು. ಮಧ್ಯಾಹ್ನ ವಿರಾಮದ ವೇಳೆ ಅನ್ಯಮನಸ್ಕರಾಗಿದ್ದ ಅವರು ಶೌಚಾಲ ಯಕ್ಕೆ ಹೋಗಿ ಗುಂಡು ಹಾರಿಸಿಕೊಂಡಿ ದ್ದಾರೆ. ಶನಿವಾರ ಮಧ್ಯಾಹ್ನ ಮರಣೋ ತ್ತರ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಮೃತದೇಹವನ್ನು ದೆಹಲಿಗೆ ಮಿಲಿಟರಿ ವಾಹನದಲ್ಲಿ ತಂದು ಅಲ್ಲಿಂದ ವಿಮಾನ ದಲ್ಲಿ ಬೆಂಗಳೂರಿಗೆ ಕಳುಹಿಸಿಕೊಡ ಲಾಗಿದೆ. ಆಲೂರಿಗೆ ಮಿಲಿಟರಿ ವಾಹನ ದಲ್ಲಿಯೇ ಕೊಂಡೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಮಧ್ಯಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ ತಂದೆ ವಸಂತ ಅವರು, ಪುತ್ರನ ಸಾವಿನ ಸುದ್ದಿ ತಿಳಿಯುತ್ತಲೇ ಊರಿಗೆ ವಾಪಸಾದರು.

ಶಾಸಕ ಹೆಚ್.ಕೆ.ಕುಮಾರಸ್ವಾಮಿ ಸೇರಿ ದಂತೆ ಹಲವು ಗಣ್ಯರು, ಆತ್ಮೀಯರು ಹಾಗೂ ಸವಿತಾ ಸಮಾಜ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳವರು ಮೋಹನ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಅಮ್ಮಾ, ಚಿನ್ನೂ ನಾನು ನಿಮಗೇನಾ ದರೂ ನೋವುಂಟು ಮಾಡಿದ್ದರೆ ದಯ ವಿಟ್ಟು ಕ್ಷಮಿಸಿ. ಲವ್ ಯು ಅಮ್ಮಾ, ಲವ್ ಯು ಚಿನ್ನೂ… ಟೇಕ್ ಕೇರ್, ಐ ವಿಲ್ ಬಿ ಸೂನ್… ಎಂದು ಮೋಹನ್ ಕುಮಾರ್ ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಟ್ಟಿದ್ದಾರೆ.

Translate »