ಕಾರ್ಮಿಕರ ಹೋರಾಟ ಬೆಂಬಲಿಸಿ ಎಐಯುಟಿಯುಸಿ ಪ್ರತಿಭಟನೆ
ಮೈಸೂರು

ಕಾರ್ಮಿಕರ ಹೋರಾಟ ಬೆಂಬಲಿಸಿ ಎಐಯುಟಿಯುಸಿ ಪ್ರತಿಭಟನೆ

October 19, 2021

ಮೈಸೂರು,ಅ.18(ಪಿಎಂ)- ನಂಜನ ಗೂಡು ತಾಂಡ್ಯ ಕೈಗಾರಿಕಾ ಪ್ರದೇಶದ ಕ್ರಿಹಾನ್ ಟೆಕ್ಸ್‍ಕೆಮ್ ಪ್ರೈವೇಟ್ ಲಿಮಿಟೆಡ್ (ಕೆಟಿಪಿಎಲ್) ಕಂಪನಿಯ ಕಾರ್ಖಾನೆ ಕಾರ್ಮಿಕರು ತಮ್ಮ ಹಳೇ ಕಂಪನಿಯ ಗ್ರಾಚ್ಯು ಯಿಟಿ ಹಣ ನೀಡಲು ಆಗ್ರಹಿಸಿ ನಡೆಸುತ್ತಿ ರುವ ಹೋರಾಟ ಬೆಂಬಲಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿ ಯನ್ ಸೆಂಟರ್ (ಎಐಯುಟಿಯುಸಿ) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ರೀಡ್ ಅಂಡ್ ಟೇಲರ್ ಎಂಬುದು ಒಂದು ಬ್ರಾಂಡ್ ಆಗಿದ್ದು, ಇದೇ ಹೆಸರಿನಲ್ಲಿ ನಡೆ ಯುತ್ತಿದ್ದ ಕಂಪನಿಯನ್ನು ಮಾಲೀಕರು ಮುಚ್ಚಿದ ಬಳಿಕ ಹೊಸ ಮಾಲೀಕರು ಕ್ರಿಹಾನ್ ಟೆಕ್ಸ್‍ಕೆಮ್ ಪ್ರೈವೇಟ್ ಲಿ. ಹೆಸರಿ ನಲ್ಲಿ ಪುನರಾರಂಭಿಸಿದರು. 565 ಹಳೇ ಕಾರ್ಮಿಕರಿಗೆ ಕೆಲಸವನ್ನೂ ನೀಡಲಾಗಿದೆ. ಆದರೆ ಹಳೇ ಮಾಲೀಕರು ನೀಡಬೇಕಿರುವ ಸುಮಾರು 10 ಕೋಟಿ ರೂ. ಕಾರ್ಮಿಕರ ಗ್ರಾಚ್ಯುಯಿಟಿ ಹಣವನ್ನು ಹೊಸ ಮಾಲೀ ಕರು ನೀಡದೇ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ನೂತನ ಕಂಪನಿಗೆ ಹೊಸ ದಾಗಿ ನೇಮಕಗೊಂಡ ಕಾರ್ಮಿಕರು ಹಳೇ ಕಂಪನಿಯ ಗ್ರಾಚ್ಯುಯಿಟಿ ಹಣ ನೀಡಲೇ ಬೇಕೆಂದು ಒತ್ತಾಯಿಸಿದಾಗ, ಹೊಸ ಸಂಘ ರಚಿಸಿ, 6 ಮಂದಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ಗ್ರಾಚ್ಯುಯಿಟಿ ಹಣಕ್ಕೆ ಮನವಿ ಸಲ್ಲಿಸಬೇಕೆಂದು ಆಡಳಿತ ಮಂಡಳಿಯವರು ತಿಳಿಸಿದ್ದರು. ಅದರಂತೆ ನಡೆದುಕೊಂಡರೂ ಚುನಾಯಿತರಾದ 6 ಮಂದಿ ಕಾರ್ಮಿಕರನ್ನು ವಜಾಗೊಳಿಸಿ, ಕಾರ್ಮಿಕ ವಿರೋಧಿ ವರ್ತನೆ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ದರು. ಸಂಘಟನೆ ಮುಖಂಡರಾದ ವಿ. ಯಶೋಧರ್, ಪಿ.ಎಸ್.ಸಂಧ್ಯಾ, ಮುದ್ದು ಕೃಷ್ಣ, ಸಿದ್ದರಾಜು, ಗಾಯಿತ್ರಿ, ಕಿರಣ್ ಮತ್ತಿ ತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »