ಆರ್‍ಎಸ್‍ಎಸ್ ವಿರುದ್ಧ ಟೀಕೆ: ಬಿಜೆಪಿ ಖಂಡನೆ
ಮೈಸೂರು

ಆರ್‍ಎಸ್‍ಎಸ್ ವಿರುದ್ಧ ಟೀಕೆ: ಬಿಜೆಪಿ ಖಂಡನೆ

October 19, 2021

ಮೈಸೂರು,ಅ.18(ಆರ್‍ಕೆಬಿ)- ಚುನಾ ವಣೆ ಸಂದರ್ಭದಲ್ಲಿ ಆರ್‍ಎಸ್‍ಎಸ್ ಅನ್ನು ಟೀಕಿಸುತ್ತಿರುವ ಮಾಜಿ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಕಿಡಿಕಾರಿದ್ದು, ಇದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನೈತಿಕ ಸ್ಥೈರ್ಯ ಕುಸಿಯುತ್ತಿರುವುದರ ಸಂಕೇತ ಎಂದು ತಿಳಿಸಿದ್ದಾರೆ.

ಮೈಸೂರು ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿ ಸುವುದನ್ನು ಬಿಟ್ಟು ಆರ್‍ಎಸ್‍ಎಸ್ ಅನ್ನು ಟೀಕಿಸುತ್ತಿರುವುದನ್ನು ಖಂಡಿಸಿದರು.

ದೇಶದ ಸಂಸ್ಕøತಿಗೆ ಶ್ರಮಿ ಸುತ್ತಿರುವ ಆರ್‍ಎಸ್‍ಎಸ್ 140 ದೇಶಗಳಲ್ಲಿ ಸೇವೆ ವಿಸ್ತರಿಸಿದೆ. ಮುಸ್ಲಿಂ ವಿರೊಧಿ ಎಂದು ಆರೋಪಿಸುತ್ತಾ ಬಂದಿರುವ ಸಿದ್ದರಾಮಯ್ಯ ಅವರಿಗೆ ಆರ್‍ಎಸ್‍ಎಸ್ ಅಂಗಸಂಸ್ಥೆ ಯಾದ ರಾಷ್ಟ್ರೀಯ ಮುಸ್ಲಿಂ ಮಂಚ್‍ನಲ್ಲಿ 11,000 ಕಾರ್ಯಕರ್ತರಿ ದ್ದಾರೆ ಎಂಬುದು ತಿಳಿದಿಲ್ಲ. ಸಮಾಜ ಸೇವೆಯಲ್ಲಿ ತೊಡಗಿರುವ ಆರ್‍ಎಸ್‍ಎಸ್ ಬಗ್ಗೆ ಮಾತನಾಡುವ ನೈತಿ ಕತೆ ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಇಲ್ಲ ಎಂದು ಎಂ.ಜಿ.ಮಹೇಶ್ ಹೇಳಿದರು.

ಸಭ್ಯತೆ, ಸಂಸ್ಕಾರ ತಿಳಿದಿಲ್ಲ ಸಿದ್ದ ರಾಮಯ್ಯ, ಅನಾಗರಿಕ ಶಬ್ಧಗಳಿಂದ ಏಕವಚನದಲ್ಲಿ ನಿಂದಿಸುವುದು, ತೇಜೋ ವಧೆ ಮಾಡುವುದು ಅವರ ಜೀವನ ಪದ್ಧತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಏಕವಚನದಲ್ಲಿ ನಿಂದಿ ಸುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಮೋದಿಯವರನ್ನು ಏಕವಚನದಲ್ಲಿ ನಿಂದಿ ಸಿರುವ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರ ಸಹ ವಕ್ತಾರ ಕೇಬಲ್ ಮಹೇಶ್, ಮಾಧ್ಯಮ ಸಹ ಸಂಚಾಲಕ ಪ್ರದೀಪ್‍ಕುಮಾರ್ ಇತರರು ಉಪಸ್ಥಿತರಿದ್ದರು.

Translate »