ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ಬೃಹತ್  ಏಕಶಿಲಾ ಮೂರ್ತಿಗೆ ಪುಷ್ಪ ನಮನ
ಮೈಸೂರು

ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ಬೃಹತ್ ಏಕಶಿಲಾ ಮೂರ್ತಿಗೆ ಪುಷ್ಪ ನಮನ

October 19, 2021

ಮೈಸೂರು,ಅ.18(ಪಿಎಂ)- ನಂಜನಗೂಡು ತಾಲೂಕು ದೊಡ್ಡಕವಲಂದೆ ಹೋಬಳಿಯ ಗಟ್ಟ ವಾಡಿ ಗ್ರಾಮದಲ್ಲಿ ತಪೋಭೂಮಿ ಟ್ರಸ್ಟ್ ವತಿಯಿಂದ ನಿರ್ಮಾಣ ಹಂತದಲ್ಲಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಲ್ಲಿ 36 ಅಡಿ ಎತ್ತರದ ಪೀಠದಲ್ಲಿ ಪ್ರತಿಷ್ಠಾಪಿ ಸಲು ಉದ್ದೇಶಿಸಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯ 18 ಅಡಿ ಎತ್ತರದ ಏಕಶಿಲಾ ಮೂರ್ತಿಗೆ ಮೈಸೂ ರಿನಲ್ಲಿ ಸೋಮವಾರ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಮೈಸೂರು ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಶ್ರೀ ಸುಬ್ರ ಹ್ಮಣ್ಯೇಶ್ವರ ಸ್ವಾಮಿಯ ಏಕಶಿಲಾ ಮೂರ್ತಿಗೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಇನ್ನಿತರ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಈ ಬೃಹತ್ ಮೂರ್ತಿ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಶಿಲ್ಪಿ ರಮಾನಾಥ ಅವರಿಂದ ನಿರ್ಮಾಣಗೊಂಡಿದೆ. ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಮೂರ್ತಿಯನ್ನು ಮೈಸೂರು ಮಾರ್ಗವಾಗಿ ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರಕ್ಕೆ ಕೊಂಡೊ ಯ್ಯಲಾಯಿತು. ಇಡೀ ದೇಶದಲ್ಲೇ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ಬೃಹತ್ ಪ್ರತಿಮೆ ಇದೆಂದು ತಪೋಭೂಮಿ ಟ್ರಸ್ಟ್ ಹೇಳಿಕೊಂಡಿರುವುದು ಗಮನಾರ್ಹ.

ಇದಕ್ಕೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ನಡೆದ ಮೂರ್ತಿಯ ಸ್ವಾಗತ ಮತ್ತು ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜನಪದ ಕಲಾ ತಂಡಗಳ ಸಾಂಸ್ಕøತಿಕ ಮೆರುಗಿನೊಂದಿಗೆ ಮೂರ್ತಿ ಯನ್ನು ಸ್ವಾಗತಿಸಿದ ಗಣ್ಯರು ಪುಷ್ಪ ನಮನ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಮೈಸೂರು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆ ಯರ್, ಸುಬ್ರಹ್ಮಣ್ಯಸ್ವಾಮಿಯ ಸುಂದರ ಮೂರ್ತಿಯು ಅರಮನೆ ಉತ್ತರ ದ್ವಾರದಿಂದ ಪ್ರತಿಷ್ಠಾಪನೆ ಆಗಲು ಹೊರಟಿರುವುದು ಸಂತಸ ತಂದಿದೆ. ಇಲ್ಲಿಂದ ಪ್ರಾರಂಭವಾದ ಎಲ್ಲಾ ಕಾರ್ಯಗಳು ಯಶಸ್ವಿಯಾಗು ತ್ತವೆ. ಒಂದು ಗ್ರಾಮದಲ್ಲಿ ದೇವಸ್ಥಾನ ಇದ್ದರೆ ಆ ದೇವಸ್ಥಾನದ ಮುಖಾಂತರ ಊರಿನ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.

ನಂಜನಗೂಡು ಶಾಸಕ ಹರ್ಷವರ್ಧನ್ ಮಾತನಾಡಿ, ಸುಬ್ರಹ್ಮಣ್ಯಸ್ವಾಮಿಯ ಬೃಹತ್ ಮೂರ್ತಿ ನನ್ನ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಆಗಲಿರುವುದು ನನಗೆ ಅತೀವ ಸಂತಸ ಉಂಟು ಮಾಡಿದೆ. ಮೂರ್ತಿ ಪ್ರತಿಷ್ಠಾಪನೆಗೊಳ್ಳುವ ಪುಣ್ಯಕ್ಷೇತ್ರದ ಅಭಿವೃದ್ಧಿಗೆ ಸದಾ ಸಹಕಾರ ನೀಡುವುದಾಗಿ ತಿಳಿಸಿದರು.
ಪುಣ್ಯ ಕ್ಷೇತ್ರದ ಧರ್ಮದರ್ಶಿ ಸುಬ್ರಹ್ಮಣ್ಯ ಸ್ವಾಮೀಜಿ ಮಾತನಾಡಿ, ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಲ್ಲಿ ಸಾರ್ವ ಜನಿಕರಿಗಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳು ಈಗಾಗಲೇ ನಡೆಯುತ್ತಿವೆ. ಉಚಿತ ಆರೋಗ್ಯ ತಪಾ ಸಣಾ ಶಿಬಿರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅನ್ನಸಂತರ್ಪಣೆ ಇತ್ಯಾದಿ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.

ಶಾಸಕ ಎಲ್.ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಹೆಚ್.ವಿ.ರಾಜೀವ್, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಪಾಲಿಕೆ ಸದಸ್ಯ ಮಾ.ವಿ.ರಾಮ್‍ಪ್ರಸಾದ್, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯ ದರ್ಶಿ ಗಿರಿಧರ್ ಮತ್ತಿತರರು ಪಾಲ್ಗೊಂಡಿದ್ದರು.

Translate »