ನಾಳೆ ಪಿಸಿ/ಪಿಎಸ್‍ಐ ಪರೀಕ್ಷೆಗೆ  ಉಚಿತ ತರಬೇತಿ: ಸಮಾರೋಪ
ಮೈಸೂರು

ನಾಳೆ ಪಿಸಿ/ಪಿಎಸ್‍ಐ ಪರೀಕ್ಷೆಗೆ ಉಚಿತ ತರಬೇತಿ: ಸಮಾರೋಪ

October 19, 2021

ಮೈಸೂರು,ಅ.18-ಮೈಸೂರಿನ ಜ್ಞಾನಬುತ್ತಿ ಸಂಸ್ಥೆ ಆಯೋಜಿಸಿದ್ದ ಪಿಎಸ್‍ಐ ಹಾಗೂ ಪೆÇಲೀಸ್ ಪೇದೆ ನೇಮಕ ತರಬೇತಿ ಪರೀಕ್ಷೆಗಳ ಉಚಿತ ತರಬೇತಿ ಶಿಬಿರ ಸಮಾರೋಪ ಸಮಾ ರಂಭ ಅ.20ರ ಬುಧವಾರ ಸಂಜೆ 6ಕ್ಕೆ ಲಕ್ಷ್ಮೀ ಪುರಂ ಸರ್ಕಾರಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ.

ಕರ್ನಾಟಕ ಪೆÇಲೀಸ್ ಅಕಾಡೆಮಿ ಉಪನಿರ್ದೇ ಶಕಿ ಡಾ.ಸುಮನ್ ಡಿ. ಪೆನ್ನೇಕರ್ ಅವರು ಪಿಎಸ್‍ಐ ಹಾಗೂ ಪೆÇಲೀಸ್ ಪೇದೆಗಳ ಪರೀಕ್ಷೆಯ ಅಧ್ಯಯನ ಪುಸ್ತಕ ಬಿಡುಗಡೆ ಮಾಡುವರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮಲೈ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಶುಭ ಹಾರೈಸುವರು. ನಿವೃತ್ತ ಪ್ರಾಧ್ಯಾಪಕ ಪೆÇ್ರ.ಎಂ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸುವರು ಎಂದು ಜ್ಞಾನಬುತ್ತಿ ಸಂಸ್ಥೆ ಕಾರ್ಯದರ್ಶಿ ಹೆಜಮಾಡಿ ಬಾಲಕೃಷ್ಣ ತಿಳಿಸಿದ್ಧಾರೆ.

ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ವಿಶೇಷ ಅತಿಥಿ ಗಳಾಗಿ ಭಾಗವಹಿಸುವರು ಹಾಗೂ ಪಿಎಸ್‍ಐ ದೈಹಿಕ ಶಿಕ್ಷಣ ತರಬೇತುದಾರ ಎಂ. ಪುನಿತ್, ಡಾ.ಶಿವಪ್ರಸಾದ್, ಡಾ.ಹೊನ್ನಯ್ಯ, ಪೆÇ್ರ.ವಿ.ಜಯಪ್ರಕಾಶ್, ಬಿ.ಕೆ. ಛಾನೇಶ್ವರ್ ರಾವ್, ರೋಹನ್‍ರವಿಕುಮಾರ್, ಡಾ.ಬಿ.ಟಿ.ರಘು, ಕೆ.ಆರ್.ವಿಭಾವಸು, ಎಸ್.ಮಂದಾರ, ಡಿ.ನವೀನ್‍ಪ್ರಸಾದ್, ಮುನಿರಾಜು ಭಾಗವಹಿಸುವರು. ಜ್ಞಾನಬುತ್ತಿ ಸಂಸ್ಥೆ ಕೊರೋನಾ ಹಿಂದಿನ ಅವಧಿಯಲ್ಲಿ 170 ಪಿಎಸ್‍ಐ ಅಭ್ಯರ್ಥಿಗಳಿಗೆ 70 ದಿನಗಳ ದೈಹಿಕ ಮತ್ತು ಲಿಖಿತ ಪರೀಕ್ಷೆಗೆ ತರಬೇತಿ ನೀಡಿದ್ದು, ಕೊರೊನಾ ನಂತರ ಪಿಸಿ ಮತ್ತು ಪಿಎಸ್‍ಐ ಅಭ್ಯರ್ಥಿಗಳಿಗೆ 45 ದಿನಗಳ ತರಬೇತಿ ಮುಗಿದಿದೆ ಎಂದು ತಿಳಿಸಿದ್ದಾರೆ.

Translate »