ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ಸ್ವಾಗತಿಸಿದ ಅಜ್ಮೀರ್ ದರ್ಗಾ ಮುಖ್ಯಸ್ಥ
ಮೈಸೂರು

ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ಸ್ವಾಗತಿಸಿದ ಅಜ್ಮೀರ್ ದರ್ಗಾ ಮುಖ್ಯಸ್ಥ

May 27, 2022

ಜೈಪುರ, ಮೇ ೨೬- ಉಗ್ರರಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬA ಧಿಸಿದಂತೆ ಎನ್‌ಐಎ ಕೋರ್ಟ್ ಕಾಶ್ಮೀರಿ ಪ್ರತ್ಯೇಕತಾ ವಾದಿ ನಾಯಕ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ನೀಡಿರುವು ದನ್ನು ಸ್ವಾಗತಿಸಿದ ಅಜ್ಮೀರ್ ದರ್ಗಾದ ದಿವಾನ್ ಸೈಯದ್ ಜೈನುಲ್ ಅಬೇದಿನ್ ಅಲಿ ಖಾನ್ ಅವರು, ದೇಶದ ನ್ಯಾಯಾಂಗ ವ್ಯವಸ್ಥೆಯು ತನ್ನ ವಿವೇಕ, ಸ್ವಾತಂತ್ರ÷್ಯ ಮತ್ತು ಪಾರ ದರ್ಶಕತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ತಿಳಿಸಿದ್ದಾರೆ.

ಈ ಅಪರಾಧಗಳು ಭಾರತದ ಕಲ್ಪನೆಯ ಹೃದಯ ಒಡೆಯುವ ಉದ್ದೇಶವನ್ನು ಹೊಂದಿದ್ದವು ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಭಾರತ ಒಕ್ಕೂಟದಿಂದ ಬಲವಂತವಾಗಿ ಪ್ರತ್ಯೇಕಿಸುವ ಉದ್ದೇಶ ವನ್ನು ಹೊಂದಿವೆ ಎಂದು ಅಜ್ಮೀರ್ ದರ್ಗಾ ಮುಖ್ಯಸ್ಥರು ಹೇಳಿದ್ದಾರೆ. ಸಂಪೂರ್ಣ ನ್ಯಾಯಾಂಗ ಪ್ರಕ್ರಿಯೆಯ ನಂತರ ಯಾಸಿನ್ ಮಲಿಕ್ ಅವರಿಗೆ ಶಿಕ್ಷೆ ನೀಡಲಾಗಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯು ತನ್ನ ವಿವೇಕ, ಸ್ವಾತಂತ್ರ÷್ಯ ಮತ್ತು ಪಾರ ದರ್ಶಕತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇದನ್ನು ಇಡೀ ಜಗತ್ತು ಸದಾ ಪ್ರಶಂಸಿ ಸುತ್ತದೆ” ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ವಿಶ್ವದ ಮುಂದೆ ಪಾಕಿಸ್ತಾನ ನಿಜವಾದ ಬಣ್ಣ ಈಗ ಬಯಲಾಗಿದೆ. ಭಾರತದಲ್ಲಿ ಭಯೋತ್ಪಾದನೆಯನ್ನು ಪ್ರಚೋದಿಸುವ ಮೂಲಕ ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳನ್ನು ನಡೆಸಲು ಅಮಾಯಕ ಕಾಶ್ಮೀರಿಗಳ ಕೈಯಿಂದ ಪುಸ್ತಕಗಳನ್ನು ಕಸಿದುಕೊಂಡು ಅವರ ಕೈಗೆ ಬಂದೂಕು ಗಳನ್ನು ನೀಡುತ್ತಿದೆ. ಯಾಸಿನ್ ಮಲಿಕ್ ಅವರಂತಹವರ ಮೂಲಕ ಭಾರತದಲ್ಲಿ ಭಯೋತ್ಪಾದನೆಗೆ ಹೇಗೆ ಆರ್ಥಿಕ ನೆರವು ನೀಡುತ್ತಿದೆ ಎಂಬುದು ಬಹಿರಂಗ ವಾಗಿದೆ? ಎಂದು ಅವರು ಹೇಳಿದ್ದಾರೆ.

 

Translate »