೧೨ ಲಕ್ಷ ರೂ.ಖರ್ಚು ಮಾಡಿ ನಾಯಿಯಾದ ಜಪಾನಿಗ!
ಮೈಸೂರು

೧೨ ಲಕ್ಷ ರೂ.ಖರ್ಚು ಮಾಡಿ ನಾಯಿಯಾದ ಜಪಾನಿಗ!

May 27, 2022

ಟೋಕಿಯೋ(ಜಪಾನ್), ಮೇ ೨೬- ತಾನು ನಾಯಿಯಂತೆ ಕಾಣಬೇಕೆಂದು ಕನಸು ಹೊತ್ತಿದ್ದ ಜಪಾನಿನ ವ್ಯಕ್ತಿಯೊಬ್ಬ ಬರೋಬ್ಬರಿ ೧೨ ಲಕ್ಷ ರೂ. ವೆಚ್ಚ ಮಾಡಿ ತನ್ನ ಕನಸು ನನಸು ಮಾಡಿಕೊಂಡಿದ್ದಾನೆ.

ಟೋಕಿಯೋದ ಟೋಕೋ ಎಂಬಾತ @ಣoಛಿo_ eevee ಎಂಬ ತಮ್ಮ ಟ್ವಿಟರ್ ಖಾತೆಯಲ್ಲಿ ತಾನು ಥೇಟ್ ನಾಯಿ ಯಂತೇ ಮಾರ್ಪಾಡಾ ಗಿರುವ ವೀಡಿಯೋ ಪೋಸ್ಟ್ ಮಾಡಿದ್ದಾನೆ. ಜೊತೆಗೆ ನಾಯಿಯಂತೆಯೇ ವರ್ತಿಸಿ ದ್ದಾನೆ. ಈ ವೀಡಿಯೋ ನೋಡಿದರೆ ಮನುಷ್ಯ ನಾಯಿಯ ವೇಷಭೂಷಣ ಹೊಂದಿದ್ದಾನೆ ಎಂದು ನಂಬುವುದೇ ಕಷ್ಟಸಾಧ್ಯ ಎಂಬAತಿದೆ. ‘ನನ್ನ ಮೆಚ್ಚಿನವು ಚತುರ್ಭುಜ ಪ್ರಾಣ ಗಳು, ವಿಶೇಷವಾಗಿ ಅವು ತುಂಬಾ ಮುದ್ದಾಗಿರುತ್ತವೆ. ಇನ್ನು ಉದ್ದ ಕೂದಲಿನ ನಾಯಿಗಳು ಮಾನವನ ಆಕೃತಿಯನ್ನು ಮರೆಮಾಚುತ್ತವೆ. ಕೋಲೀಸ್ ಒಂದು ವಿಶಿಷ್ಟ ತಳಿಯ ನಾಯಿಯಾಗಿದ್ದು, ಇದು ನೈಜತೆಯಿಂದ ಕೂಡಿದೆ. ಹೀಗಾಗಿ ಈ ನಾಯಿಯ ತಳಿಯನ್ನು ಆಯ್ಕೆ ಮಾಡಿದೆ. ನಾನು ನಾಯಿಯಂತೆ ಕಾಣಲು, ‘ಜೆಪ್ಪೆಟ್’ ಎಂಬ ವೃತ್ತಿಪರ ಏಜೆನ್ಸಿಯಿಂದ ಸಾಧ್ಯವಾಯಿತು. ಈ ಸಂಸ್ಥೆಯೂ ಸಂಪೂರ್ಣ ವೇಷಭೂಷಣವನ್ನು ತಯಾರಿಸಲು ೪೦ ದಿನಗಳನ್ನು ತೆಗೆದುಕೊಂಡಿದೆ. ಇದಕ್ಕೆ ೧೨ ಲಕ್ಷ (೨ ಮಿಲಿಯನ್ ಯೆನ್) ಕ್ಕಿಂತ ಹೆಚ್ಚು ವೆಚ್ಚವಾಗಿದೆ’ ಎಂದು ಟೋಕೋ ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾನೆ. ಈತ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು, ಅದರಲ್ಲೂ ಕೂಡ ವೀಡಿಯೋ ಅಪ್ಲೋಡ್ ಮಾಡಿದ್ದಾನೆ.

 

Translate »