ಸಿಧು ಜೈಲಲ್ಲಿ ಗುಮಾಸ್ತ; ದಿನಕ್ಕೆ ೯೦ ರೂ. ಕೂಲಿ
ಮೈಸೂರು

ಸಿಧು ಜೈಲಲ್ಲಿ ಗುಮಾಸ್ತ; ದಿನಕ್ಕೆ ೯೦ ರೂ. ಕೂಲಿ

May 27, 2022

ಚಂಡೀಗಢ, ಮೇ ೨೬- ಒಂದು ವರ್ಷ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪಟಿಯಾಲಾ ಕೇಂದ್ರ ಕಾರಾಗೃಹದಲ್ಲಿ ಗುಮಾಸ್ತನ ಕೆಲಸ ಮಾಡುತ್ತಿದ್ದಾರೆ. ೩೪ ವರ್ಷಗಳ ಹಿಂದೆ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ನ್ಯಾಯಾಲಯ ೧ ವರ್ಷ ಕಠಿಣ ಸಜೆಗೆ ಗುರಿಯಾಗಿರುವ ಸಿಧು ಅವರನ್ನು ಪಟಿಯಾಲಾ ಕೇಂದ್ರ ಕಾರಾಗೃಹದ ಕೊಠಡಿ ಸಂಖ್ಯೆ ೧೦ ರಲ್ಲಿ ಇರಿಸಲಾಗಿದೆ. ಈಗ ಅವರನ್ನು ೯೦ ರೂಪಾಯಿ ದಿನಗೂಲಿಗೆ ಗುಮಾಸ್ತನ ಕೆಲಸಕ್ಕೆ ನೇಮಿಸಲಾಗಿದೆ. ಮೊದಲ ೩ ತಿಂಗಳು ಕೂಲಿ ನೀಡದೇ ತರಬೇತಿ ನೀಡಲಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಅವರು ದುಡಿದ ಒಟ್ಟು ಹಣವು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಕಾರಾಗೃಹದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲಸದ ಸಮಯ ಹೇಗೆ?: ಬೆಳಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧ ಗಂಟೆವರೆಗೆ ಹಾಗೂ ಮಧ್ಯಾಹ್ನ ೩ ರಿಂದ ಸಂಜೆ ೫ ಗಂಟೆಯವರೆಗೆ ಸಿಧು ಕೆಲಸ ಮಾಡುತ್ತಾರೆ. ಇದರ ನಡುವೆ ೨ ಗಂಟೆಗಳ ಕಾಲ ವಿರಾಮ ನೀಡಲಾಗುತ್ತದೆ. ಅವರ ಕೊಠಡಿ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Translate »