ದಾವೋಸ್‌ನಲ್ಲಿಕೂರ್ಗ್ ಕಾಫಿ ಘಮ
ಮೈಸೂರು

ದಾವೋಸ್‌ನಲ್ಲಿಕೂರ್ಗ್ ಕಾಫಿ ಘಮ

May 27, 2022

ಬೆಂಗಳೂರಿನಲ್ಲಿ, ಹೈಟೆಕ್ ಪರಿಸರ ವ್ಯವಸ್ಥೆಗೆ ಕಾರಣವಾಗಿ ಹೆಚ್ಚಿನ ಸಂಖ್ಯೆಯ ಆರ್ ಅಂಡ್ ಡಿ ಕೇಂದ್ರಗಳು ಮತ್ತು ಅಂತರಿಕ್ಷ ಯಾನದಲ್ಲಿ ನಮ್ಮ ಪರಿಣತಿ, ರಕ್ಷಣಾ, ಯಂತ್ರೋ ಪಕರಣಗಳು ಮತ್ತು ಸಹಜವಾಗಿ ಮಾಹಿತಿ ತಂತ್ರ ಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹೊಂದಿದ್ದು, ಈ ಎಲ್ಲಾ ಯೋಜನೆಗಳನ್ನು ಬೆಂಗಳೂರಿನ ಆಚೆಗೂ ವಿಸ್ತರಿಸಲು ಯೋಚಿಸುತ್ತಿದ್ದೇವೆ. ಈ ಸಂಬAಧ ಅಗತ್ಯ ಕೆಲಸಗಳು ಈಗಾಗಲೇ ಆರಂಭವಾಗಿವೆ. -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ದಾವೋಸ್, ಮೇ ೨೬- ದಾವೋಸ್‌ನಲ್ಲಿ ನಡೆಯು ತ್ತಿರುವ ವಿಶ್ವ ಆರ್ಥಿಕ ವೇದಿಕೆ ಯಲ್ಲಿ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಜಾಗತಿಕ ಹೂಡಿಕೆದಾರರ ಸಭೆಗೆ ಚಾಲನೆ ನೀಡಿದ ವೇಳೆ ಸಭೆಯಲ್ಲಿ ಭಾಗ ವಹಿಸಿದ್ದವರು ರಾಜ್ಯದ ಕೊಡಗು ಜಿಲ್ಲೆಯ ಕಾಫಿಯ ಅನುಭವ ದಿಂದ ಉಲ್ಲಸಿತರಾದರಲ್ಲದೆ ಹಲವು ಕಾಫಿ ಪ್ಯಾಕೆಟ್‌ಗಳನ್ನು ಸ್ವೀಕರಿಸಿದರು.

ವಿಶ್ವ ಆರ್ಥಿಕ ವೇದಿಕೆ ಸಭೆ ಮುಕ್ತಾಯದ ನಂತರವೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನೊಂದು ದಿನ ವಾಸ್ತವ್ಯ ವಿಸ್ತರಿಸಿ, ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿರುವ ಉದ್ಯಮಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಮುಖ್ಯಮಂತ್ರಿಗಳ ನಿಯೋಗವು ಕೂರ್ಗ್ನ ಅರೇಬಿಕಾ ಮತ್ತು ರೊಬಸ್ಟಾ ಮಾದರಿಯ ಕಾಫಿಯನ್ನು ಕರ್ನಾಟಕದ ಪೆವಿಲಿಯನ್‌ಗೆ ಭೇಟಿ ನೀಡಿದ ಪ್ರತಿಯೊಬ್ಬರಿಗೂ ಕಾಫಿ ಬ್ಯಾಗ್ಸ್ ಮತ್ತು ಟಿಪ್ಪಣ ಯನ್ನು ನೀಡಿತು.

ಕರ್ನಾಟಕ, ಭಾರತದ ಜಿಐ ಕಾಫಿ ಹಬ್ ಹಾಗೂ ಐದು ಜಿಐ ಟ್ಯಾಗ್ಡ್ ಕಾಫಿಗಳ ನೆಲೆಯಾಗಿದೆ. ಅಲ್ಲದೆ, ಕರ್ನಾ ಟಕದ ಮಾನ್‌ಸೂನ್ ಮಲಬಾರ್ ಅರೇಬಿಕಾ ಮತ್ತು ರೊಬಸ್ಟಾ ಕಾಫಿ, ಚಿಕ್ಕಮಗಳೂರು ಅರೇಬಿಕಾ ಮತ್ತು ಕೂರ್ಗ್ ಅರೇಬಿಕಾ ಕಾಫಿ ಬೀಜಗಳು ಜಾಗತಿಕವಾಗಿ ಹೆಸರು ವಾಸಿಯಾಗಿದೆ ಎಂದು ಟಿಪ್ಪಣ ಯಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೂಡಿಕೆ ದಾರರು ಮತ್ತು ಸುದ್ದಿ ಸಂಸ್ಥೆಗಳನ್ನು ಉದ್ದೇಶಿಸಿ ಮಾತ ನಾಡಿ, ವ್ಯಾಪಾರ ಮಾಡಲು ಕರ್ನಾಟಕ ಅತ್ಯಂತ ಸುರಕ್ಷಿತ ಸ್ಥಳವಾಗಿದೆ ಎಂದರು. ಹಾಲಿ ಭಾರತದಲ್ಲಿರುವ ಸುಮಾರು ಅರ್ಧದಷ್ಟು ವಿದೇಶಿ ಕಂಪನಿಗಳು ಈಗಾಗಲೇ ಕರ್ನಾಟಕದಲ್ಲಿವೆ. ಮತ್ತು ಅವರೆಲ್ಲರೂ ರಾಜ್ಯದಲ್ಲಿ ಉದ್ದಿಮೆ ಗಳನ್ನು ವಿಸ್ತರಿಸಿ ವೈವಿಧ್ಯಗೊಳಿಸಲು ಯೋಚಿಸುತ್ತಿದ್ದಾರೆ. ಅಲ್ಲದೇ ದೃಢವಾದ ಮೂಲಸೌಕರ್ಯಗಳೊಂದಿಗೆ ಹಲ ವಾರು ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಕರ್ಷಿತರಾಗಿರುವುದನ್ನು ಸಾಬೀತು ಪಡಿಸಿದ್ದಾರೆ ಎಂದು ವಿವರಿಸಿದರು.ರಾಜ್ಯದ ರಾಜಧಾನಿ ಬೆಂಗಳೂರಿನ ಜನಸಂದಣ ಯನ್ನು ಕಡಿಮೆ ಮಾಡಲು ಅಕ್ಕಪಕ್ಕದ ಹಲವು ಪ್ರದೇಶಗಳನ್ನು ಅಭಿ ವೃದ್ಧಿಪಡಿಸುವ ಮೂಲಕ ಹಾಗೂ ಶ್ರೇಣ ೨ (ಮೈಸೂರು) ಮತ್ತು ಶ್ರೇಣ ೩ (ಹುಬ್ಬಳ್ಳಿ ಮತ್ತು ಧಾರವಾಡ) ನಗರ ಗಳಲ್ಲಿ ಇನ್ನೂ ನಾಲ್ಕು ಏರ್‌ಪೋರ್ಟ್ಗಳನ್ನು ನಿರ್ಮಿಸ ಲಾಗುವುದು ಎಂದರಲ್ಲದೇ “ಕರ್ನಾಟಕ ಇತರ ರಾಜ್ಯಗಳಿಂದ ವಿಭಿನ್ನವಾಗಿದೆ” ಎಂದು ಹೇಳಿದರು.

 

Translate »