೧೨ ಸಾವಿರ ಬಿಸಿಯೂಟ ಕಾರ್ಮಿಕರ ಬಿಡುಗಡೆ ಕ್ರಮ ಖಂಡಿಸಿ
ಮೈಸೂರು, ಮೇ ೨೬(ಆರ್‌ಕೆಬಿ)- ಕಾರ್ಮಿಕರಿಗೆ ಸರ್ಕಾರ ನಿವೃತ್ತಿ ವೇತನ, ಇಡು ಗಂಟು ನೀಡಬೇಕು. ಕಡಿಮೆ ವೇತನದಲ್ಲೂ ಮಕ್ಕಳ ಹಸಿವು ನೀಗಿಸಲು ದುಡಿಯುವ ಕಾರ್ಮಿಕರ ಸೇವೆಯನ್ನು ನಿರ್ಲಕ್ಷಿಸಬಾರದು ಎಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಯಾವುದೇ ಸೂಚನೆ ಇಲ್ಲದೆ ರಾಜ್ಯದ ೧೨ ಸಾವಿರ ಬಿಸಿಯೂಟ ಕಾರ್ಮಿಕರನ್ನು ಸೇವೆಯಿಂದ ಬಿಡುಗಡೆಗೊಳಿಸಿರುವ ಸರ್ಕಾರದ ಕ್ರಮ ಖಂಡಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಸಂಯುಕ್ತ ಸಂಘಟನೆ (ಎಐಯುಟಿಯುಸಿ) ರಾಜ್ಯ ಕಾರ್ಯದರ್ಶಿ ಎಂ.ಉಮಾದೇವಿ, ರಾಜ್ಯ ಸರ್ಕಾರ ಕೇವಲ ಹಗರಣಗಳಲ್ಲಿ ಮುಳುಗಿದೆ. ಹೀಗಾಗಿ ರೈತರು ಮತ್ತು ಕಾರ್ಮಿಕರ ಸಮಸ್ಯೆ ನಿರ್ಲಕ್ಷಿಸಿದೆ. ಬಿಸಿಯೂಟ ಕಾರ್ಮಿಕರಿಗೆ ಬಜೆಟ್ ನಲ್ಲಿ ೧ ಸಾವಿರ ರೂ. ಹೆಚ್ಚಿಸಿ, ಇದೀಗ ಏಕಾಏಕಿ ಕೆಲಸದಿಂದ ಬಿಡುಗಡೆಗೊಳಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸ್ಕೀಮ್ ವರ್ಕರ್ಸ್ ಫೆಡರೇಷನ್ ಆಫ್ ಇಂಡಿ ಯಾದ ರಾಜ್ಯ ಘಟಕದ ಕಾರ್ಯದರ್ಶಿ ಪಿ.ಎಸ್.ಸಂಧ್ಯಾ, ಸಂಘದ ಜಿಲ್ಲಾ ಸಂಚಾಲಕ ಎಸ್.ಎಚ್.ಹರೀಶ್, ಕೆ.ವಿ.ಭಟ್, ಡಿ.ನಾಗಲಕ್ಷಿ÷್ಮ ಇನ್ನಿತರರು ಉಪಸ್ಥಿತರಿದ್ದರು.