ರಾಜ್ಯದಲ್ಲಿ ಶೀಘ್ರದಲ್ಲೇ ಮದ್ಯದ ದರ ಕಡಿತ ಸಾಧ್ಯತೆ
ಮೈಸೂರು

ರಾಜ್ಯದಲ್ಲಿ ಶೀಘ್ರದಲ್ಲೇ ಮದ್ಯದ ದರ ಕಡಿತ ಸಾಧ್ಯತೆ

May 27, 2022

ಬೆಂಗಳೂರು, ಮೇ ೨೬- ಎಲ್ಲವೂ ಸುಸೂತ್ರವಾಗಿ ನಡೆದರೆ ಕರ್ನಾಟಕದಲ್ಲಿ ದುಬಾರಿ ಬೆಲೆಯ ಮದ್ಯದ ಬೆಲೆ ಅಗ್ಗವಾಗಲಿದೆ. ರಾಜ್ಯ ಅಬಕಾರಿ ಇಲಾಖೆಯು ಇತರ ರಾಜ್ಯಗಳಲ್ಲಿನ ಮದ್ಯದ ದರದ ಮಾದರಿಯನ್ನು ಅಧ್ಯಯನ ಮಾಡಿದ ನಂತರ ದುಬಾರಿ ಮದ್ಯದ ಬೆಲೆಯನ್ನು ಕಡಿಮೆ ಮಾಡಲು ಯೋಚಿಸುತ್ತಿದೆ. ಇದರಿಂದ ಮದ್ಯ ಮಾರಾಟ ಹೆಚ್ಚಳವಾಗುವ ನಿರೀಕ್ಷೆ ಯೊಂದಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಆದಾಯದ ಮೇಲೆ ಕಣ ್ಣಟ್ಟಿದೆ.

೨೦೨೧-೨೨ರಲ್ಲಿ ಮದ್ಯದಿಂದ ೨೪,೫೮೦ ಕೋಟಿ ರೂ. ಆದಾಯ ಸಂಗ್ರಹ ಗುರಿ ನೀಡಲಾಗಿತ್ತು. ಆದರೆ ಗುರಿ ಮೀರಿ ೨೬,೨೭೬.೮೩ ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲಿ ೨೦೨೨-೨೩ನೇ ಸಾಲಿನಲ್ಲಿ ೨೯,೦೦೦ ಕೋಟಿ ಆದಾಯ ಸಂಗ್ರಹ ಗುರಿ ನೀಡಿದ್ದಾರೆ.

ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು ಮಾತನಾಡಿ, ಕರ್ನಾಟಕದಲ್ಲಿ ದುಬಾರಿ ಮದ್ಯದ ಬೆಲೆಯನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸಲಾಗುತ್ತಿದೆ. ಇದಕ್ಕಾಗಿ ಐದು ತಂಡಗಳನ್ನು ರಚಿಸ ಲಾಗಿದ್ದು, ಈ ತಂಡಗಳು ಮಹಾರಾಷ್ಟç, ತೆಲಂಗಾಣ, ಕೇರಳ, ದೆಹಲಿ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ, ದುಬಾರಿ ಮದ್ಯದ ಬೆಲೆಗಳು ಮತ್ತು ಅಬಕಾರಿ ಸುಂಕದ ಸ್ಲಾ÷್ಯಬ್‌ಗಳನ್ನು ಅಧ್ಯಯನ ಮಾಡಲಿವೆ. ”ಜೂನ್ ಮೊದಲ ವಾರದಲ್ಲಿ ವಿಧಾನ ಪರಿಷತ್ ಸದಸ್ಯರ ಚುನಾವಣೆ ನಂತರ ಅಧ್ಯಯನ ಮಾಡುತ್ತೇವೆ ಎಂದಿದ್ದಾರೆ. ಅಬಕಾರಿ ಇಲಾಖೆ ಯ ಮೂಲಗಳ ಪ್ರಕಾರ, ಕರ್ನಾಟಕ ದಲ್ಲಿ ಮದ್ಯದಿಂದ ದಿನಕ್ಕೆ ಸರಾಸರಿ ೭೫ ಕೋಟಿ ರೂಪಾಯಿ ಆದಾಯ ಸಂಗ್ರಹವಾಗುತ್ತಿದೆ. ಕರ್ನಾಟಕವು ಮದ್ಯದ ಬಳಕೆಯಲ್ಲಿ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಆದರೆ ಅಬಕಾರಿ ಸುಂಕ ದೇಶದಲ್ಲಿಯೇ ಅತಿ ಹೆಚ್ಚು ವಿಧಿಸುತ್ತಿರುವುದರಿಂದ ಆದಾಯ ಕಡಿಮೆಯಾಗಲು ಕಾರಣವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

 

Translate »