ಯುವಜನತೆಗೆ ಅಕ್ಕ ಮಹಾದೇವಿ ಮಾದರಿ
ಮೈಸೂರು

ಯುವಜನತೆಗೆ ಅಕ್ಕ ಮಹಾದೇವಿ ಮಾದರಿ

December 27, 2021

ಮೈಸೂರು, ಡಿ.26(ಎಸ್‍ಪಿಎನ್)-ಅಕ್ಕಮಹಾದೇವಿಯವರು 12ನೇ ಶತ ಮಾನದ ವಚನ ಚಳವಳಿಯಲ್ಲಿ ಪ್ರಮುಖ ರಾಗಿದ್ದವರು ಎಂದು ಲೇಖಕ ಟಿ.ಎಲ್. ತ್ರಿಪುರಾಂತಕ ಅಭಿಪ್ರಾಯಪಟ್ಟರು.

ಮೈಸೂರು ಜೆ.ಪಿ.ನಗರದ ಅಕ್ಕಮಹಾ ದೇವಿ ಪ್ರತಿಮಾ ಮಂದಿರದಲ್ಲಿ ಜೆ.ಪಿ.ನಗರ ಶರಣ ವೇದಿಕೆ ವತಿಯಿಂದ ಆಯೋ ಜಿಸಿದ್ದ ವೀರವಿರಾಗಿಣಿ ಅಕ್ಕ ಮಹಾದೇವಿ ಕುರಿತ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

21ನೇ ಶತಮಾನದಲ್ಲೂ ಸ್ತ್ರೀಯರ ಶೋಷಣೆ ಬೇರೆ ಸ್ವರೂಪದಲ್ಲಿದೆ. 12ನೇ ಶತಮಾನದಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನಮಾನವಿಲ್ಲದ ಕಾಲಘಟ್ಟದಲ್ಲಿ ಹಲವು ಸಂಕಷ್ಟವನ್ನು ಎದುರಿಸಿ, ಅಕ್ಕ ಮಹಾದೇವಿ ವಚನ ಚಳವಳಿಯಲ್ಲಿ ಪ್ರಮುಖರಾಗಿದ್ದು, ಇಂದಿನ ಯುವ ಜನತೆಗೆ ಮಾದರಿಯಾಗಿದ್ದಾರೆ ಎಂದರು. ಅಕ್ಕಮಹಾದೇವಿ ವಚನ ಸಾಹಿತ್ಯದ ರಚನಾಕಾರರಲ್ಲಿ ಪ್ರಮುಖರು ಮಾತ್ರ ವಲ್ಲದೆ ಕನ್ನಡದ ಪ್ರಥಮ ಮಹಿಳಾ ಕವಯತ್ರಿ. ಅಕ್ಕ ತಮ್ಮ ಚಿಕ್ಕ ವಯಸಿನಲ್ಲೇ ಸಕಲ ಜೀವನದ ಸುಖವನ್ನು ತ್ಯಜಿಸಿ ಸಾಮಾಜಿಕ ಜೀವನ ದಲ್ಲಿ ತೊಡಗಿಸಿಕೊಂಡು ಅವರು ಎದುರಿ ಸಿದ ಪರೀಕ್ಷೆ ಲೆಕ್ಕವಿಲ್ಲದಷ್ಟು ಎಂದರು.

ಈ ವೇಳೆ ಸೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ಅವರು, ಶ್ರೀ ಮಲೆ ಮಹದೇಶ್ವರ ದೇವಸ್ಥಾನದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಜೆ.ಪಿ.ನಗರದ ಶರಣ ವೇದಿಕೆ ಅಧ್ಯಕ್ಷ ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜೆ.ನಾಗೇಂದ್ರಕುಮಾರ್, ಸಹಕಾರ್ಯದರ್ಶಿ ಬಿ.ಮಹದೇವಸ್ವಾಮಿ, ಖಜಾಂಚಿ ಯು.ಎಸ್.ಸದಾಶಿವ, ನಿರ್ದೇಶಕ ಎಸ್.ನಂದೀಶ್, ಎಸ್.ಪರಮೇಶ್ವರಪ್ಪ, ಎಸ್.ಮಹದೇವಸ್ವಾಮಿ, ಚಂದ್ರಶೇಖರ್, ನಾಗರಾಜು ಉಪಸ್ಥಿತರಿದ್ದರು.

Translate »