ಬದಲಾದ ಬ್ಯಾಂಕಿಂಗ್ ಸಮಯ – ಮಾರ್ಚ್ 30 ರಿಂದ ಏಪ್ರಿಲ್ 14 ರ ವರೆಗೆ
ಮೈಸೂರು

ಬದಲಾದ ಬ್ಯಾಂಕಿಂಗ್ ಸಮಯ – ಮಾರ್ಚ್ 30 ರಿಂದ ಏಪ್ರಿಲ್ 14 ರ ವರೆಗೆ

March 27, 2020

ಮೈಸೂರು, ಮಾ.27: ಇತ್ತೀಚಿನ ದಿನಗಳಲ್ಲಿ ರಾಷ್ಟ್ರ/ರಾಜ್ಯ ಹಾಗೂ ಜಿಲ್ಲೆಯ ಜನರನ್ನ ಕಂಗೆಡಿಸಿರುವ ಕೊರೊನಾ ವೈರಸ್ ನ ಸೋಂಕು ಹರಡದಂತೆ ಸರಕಾರ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ರಾಜ್ಯ ಮಟ್ಟದ ಬ್ಯಾಂಕರ್ ಗಳ ಸಮಿತಿಯು ಸಭೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಲಿಗೆ ನೀಡಲಾದ ದಿನಾಂಕ 26.03.2020 ರ ನಿರ್ದೇಶನದಂತೆ ಜಾರಿಗೊಳಿಸಲಾದ ಬ್ಯಾಂಕುಗಳ ಸಮಯ ಈ ರೀತಿ ಇದೆ.

  • ಬ್ಯಾಂಕಿಂಗ್ ವ್ಯವಹಾರದ ಸಮಯ ವಾರದ ಎಲ್ಲಾ ದಿನಗಳಲ್ಲಿ(ಭಾನುವಾರ, 2ನೇ ಶನಿವಾರ ಹಾಗೂ ಸರಕಾರಿ ರಜಾ ದಿನಗಳನ್ನು ಹೊರತು ಪಡಿಸಿ) ಬೆಳಗ್ಗೆ 10.ರಿಂದ ಮಧ್ಯಾಹ್ನ 2.ರ ವರೆಗೆ.
  • ಜಿಲ್ಲಾ(ಮಡಿಕೇರಿ) ಮತ್ತು ತಾಲ್ಲೂಕು ಕೇಂದ್ರ ಸ್ಥಾನಗಳಾದ(ಸೋಮವಾರಪೇಟೆ, ವಿರಾಜಪೇಟೆ) ಮತ್ತು ಅರೆ ನಗರ ಪ್ರದೇಶ(ಕುಶಾಲನಗರ) ದಲ್ಲಿ ವ್ಯವಹರಿಸುತ್ತಿರುವ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
  • ಬ್ಯಾಂಕುಗಳ ಗ್ರಾಮೀಣ ಭಾಗದ ಆಯ್ದ ಕೆಲವು ಶಾಖೆಗಳು(ಕೆಳ ಸೂಚಿಸಿದಂತೆ) ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಎಂದಿನಂತೆ ಕಾರ್ಯನಿರ್ವಹಿಸುತ್ತವೆ. (ಬ್ಯಾಂಕ್ ಆಫ಼್ ಬರೋಡ – ಸಿದ್ದಾಪುರ, ನಗರೂರು, ಗಡ್ಡೆಹಳ್ಳ, ಗೋಣಿಕೊಪ್ಪಲು. ಕಾರ್ಪೊರೇಶನ್ ಬ್ಯಾಂಕ್ – ಸೋಮವಾರಪೇಟೆ, ಗೋಣಿಕೊಪ್ಪಲು, ಕೂಡುಮಗಳೂರು. ಕೆನರಾ ಬ್ಯಾಂಕ್ – ಪೊನ್ನಂಪೇಟೆ, ಗುಡುಗಳಲೆ, ಗೋಣಿಕೊಪ್ಪಲು, ಸೋಮವಾರಪೇಟೆ, ಕೊಡ್ಲಿಪೇಟೆ, ನಾಪೋಕ್ಲು)
  • ಇನ್ನುಳಿದ ಎಲ್ಲಾ ಬ್ಯಾಂಕುಗಳ ಗ್ರಾಮೀಣ ಭಾಗದ ಶಾಖೆಗಳು ಈ ಕೆಳಕಂಡ ದಿನಗಳಲ್ಲಿ ಕಾರ್ಯನಿರ್ವಹಿಸುತ್ತವೆ.(ದಿನಾಂಕ. ಮಾ. 31,, ಏ. 02, ೦4, ೦7, ೦9 ಮತ್ತು 13)

ಇಂತಹ ರಾಷ್ಟ್ರೀಯ ಸಾಂಕ್ರಾಮಿಕ ಸೋಂಕಿನ ವಿಪತ್ತಿನ ಸಂದರ್ಭದಲ್ಲಿ ಸಾರ್ವಜನಿಕರು ಪಡೆದಿರುವ ಎಲ್ಲಾ ಉತ್ಪಾದಕ ಸಾಲ(Standard Loans) ಗಳಾದ ಮನೆ ಸಾಲ, ಕನ್ಸೂಮರ್ ಸಾಲ, ಎಮ್.ಎಸ್.ಎಮ್.ಇ ಸಾಲ, ವ್ಯಾಪಾರ ಸಾಲ, ಶಿಕ್ಷಣ ಸಾಲ ಇವುಗಳ ಮರುಪಾವತಿಗೆ ಸಂಬಂಧಿಸಿದಂತೆ  ಆಯಾ ಕಾರ್ಯಚಟುವಟಿಕೆಗಳಿಗೆ ಅನುಗುಣವಾಗಿ 3 ರಿಂದ 6 ತಿಂಗಳ ಸಾಲ ಮರುಪಾವತಿ ಅವಧಿಯ ಮುಂದೂಡಿಕೆಗೆ ರಾಜ್ಯ ಮಟ್ಟದ ಬ್ಯಾಂಕರ್ಸ್ಗಳ ಸಮಿತಿಯ ವತಿಯಿಂದ ಭಾರತ ಸರಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿಗೆ ಮನವಿ ಮಾಡಿದ್ದು ಇದರ ಕುರಿತು ವಿವರವಾದ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು.

ಸಾರ್ವಜನಿಕರು ಗಮನಿಸಬೇಕಾದ ಅಂಶವೆಂದರೆ ಏ.1 ಬ್ಯಾಂಕ್ ಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯ ದಿನ, ಏ.150 ಭಾನುವಾರ, ಏ.6 ಮಹಾವೀರ ಜಯಂತಿ, ಏ.10 ಗುಡ್ ಫ಼್ರೈಡೆ ಮತ್ತು ಏ.11.2ನೇ ಶನಿವಾರ, ಏ.13 ಭಾನುವಾರ ಮತ್ತು ಏ.14 ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ಬ್ಯಾಂಕ್ ಗೆ ಈಗಾಗಲೇ ಸಾರ್ವಜನಿಕ ರಜೆ ನೀಡಲಾಗಿದೆ.

Translate »