ರಾಬರ್ಟ್‍ಗೆ ಅಮೆಜಾನ್ 70 ಕೋಟಿ ಆಫರ್ !
ಸಿನಿಮಾ

ರಾಬರ್ಟ್‍ಗೆ ಅಮೆಜಾನ್ 70 ಕೋಟಿ ಆಫರ್ !

May 15, 2020

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ದಿನದಿಂದ ದಿನಕ್ಕೆ ಹೊಸ ವಿಚಾರಗಳಿಂದ ಸುದ್ದಿಯಾ ಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳಿಂದಲೇ ಚಿತ್ರರಂಗದಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಈ ಚಿತ್ರ ಯಾವಾಗ ಬಿಡುಗಡೆಯಾಗುವುದೋ ಎಂದು ದಚ್ಚು ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿz್ದÁರೆ. ಅಂದುಕೊಂಡ ಪ್ಲಾನ್ ಪ್ರಕಾರ ಏ.9ರಂದೇ ರಾಬರ್ಟ್ ಬಿಡುಗಡೆಯಾಗಿರಬೇಕಿತ್ತು. ಆದರೆ ಲಾಕ್‍ಡೌನ್ ನಿಂದಾಗಿ ಎಲ್ಲಾ ಪ್ಲಾನ್ ತಲೆಕೆಳಗಾಗಿದೆ. ಇತ್ತೀಚೆಗೆ ಸ್ವತಃ ದರ್ಶನ್ ಅವರೇ ಟ್ವೀಟ್ ಮಾಡಿ ಲಾಕ್ಡೌನ್ ಇರುವುದರಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಆದಷ್ಟು ಬೇಗ ನಿಮ್ಮ ಮುಂದೆ ಬರುತ್ತೇವೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು. ಇದಾದ ನಂತರ ರಾಬರ್ಟ್ ಚಿತ್ರದ ಕುರಿತಂತೆ ಯಾವುದೇ ಅಪ್ಡೇಟ್ ಸಿಕ್ಕಿರಲಿಲ್ಲ. ಸಿನಿಮಾ ಬಿಡುಗಡೆ ಯಾವಾಗ ಎಂದು ಚರ್ಚೆ ನಡೆಯುತ್ತಿರುವಾಗಲೇ ಇನ್ನೊಂದು ಸುದ್ದಿ ಹೊರಬಿದ್ದಿದೆ. ಓಟಿಟಿ ಪ್ಲಾಟ್‍ಫಾರ್ಮ್ ಆದ ಅಮೆಜಾನ್ ಪ್ರೈಮ್ ಸಂಸ್ಥೆ ದಾಖಲೆಯ ಮೊತ್ತಕ್ಕೆ ರಾಬರ್ಟ್ ಸಿನಿಮಾವನ್ನು ಖರೀದಿಸಲು ಮುಂದಾಗಿದೆಯಂತೆ.

ಹೌದು, ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡಿರುವ ಒಟಿಟಿ ಪ್ಲಾಟ್‍ಫಾರ್ಮಗಳು ಥಿಯೇಟರ್‍ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವ ಹೊಸ ಸಿನಿಮಾಗಳನ್ನು ಖರೀದಿಸಲು ಮುಂದಾಗಿವೆ. ಈ ಕುರಿತು ಹಲವು ಭಾಷೆಗಳ ಸಿನಿಮಾ ಇಂಡಸ್ಟ್ರಿಗಳಲ್ಲಿ ಚರ್ಚೆಯೂ ನಡೆದಿದೆ. ಅದೇರೀತಿ ಇದೀಗ ಅಮೆಜಾನ್ ಪ್ರೈಮ್ ದಚ್ಚು ಅಭಿನಯದ ರಾಬರ್ಟ್ ಚಿತ್ರಕ್ಕೂ 70 ಕೋಟಿ ರೂ. ಬೇಡಿಕೆ ಇಟ್ಟಿದೆ. ಆದರೆ ಈ ಆಫರನ್ನು ಚಿತ್ರದ ನಿರ್ಮಾಪಕರು ಸಾರಾಸಗಟಾಗಿ ತಿರಸ್ಕರಿಸಿz್ದÁರಂತೆ.

ದರ್ಶನ್ ಸಿನಿಮಾ ಎಂದರೆ ಅಭಿಮಾನಿಗಳಿಗೆ ಒಂದು ರೀತಿಯ ಹಬ್ಬವಿದ್ದಂತೆ. ಚಿತ್ರ ಬಿಡುಗಡೆ ವೇಳೆಯ ಸಂಭ್ರಮಾಚರಣೆ, ಕಟೌಟ್‍ಗೆ ಹಾರ ಹಾಕುವುದು, ಮೊದಲ ಫಸ್ಟ್‍ಡೇ ಫಸ್ಟ್‍ಶೋ ನೋಡುವುದು ಹೀಗೆ ಅಭಿಮಾನಿಗಳು ಯೋಜನೆ ರೂಪಿಸಿಕೊಂಡಿರುತ್ತಾರೆ. ಒಟಿಟಿ ಪ್ಲಾಟ್‍ಫಾರ್ಮನಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದರೆ ಈ ಎಲ್ಲಾ ಸಂಭ್ರಮಗಳಿಗೆ ಬ್ರೇಕ್ ಹಾಕಿದಂತಾಗುತ್ತದೆ. ಹಣಕ್ಕಿಂತ ಅಭಿಮಾನಿಗಳು ಸಂಭ್ರಮ, ಅವರನ್ನು ತೃಪ್ತಿಪಡಿಸುವುದೇ ಮುಖ್ಯ ಎಂದು ತೀರ್ಮಾನಿಸಿದ ನಿರ್ಮಾಪಕರು ಈ ಆಫರನ್ನು ರಿಜೆಕ್ಟ್ ಮಾಡಿz್ದÁರೆ ಎನ್ನಲಾಗಿದೆ. ತಡವಾದರೂ ಅಡ್ಡಿಯಿಲ್ಲ ನಮ್ಮ ಚಿತ್ರವನ್ನು ಚಿತ್ರಮಂದಿರದ¯್ಲÉೀ ಬಿಡುಗಡೆ ಮಾಡಬೇಕು ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಅವರು ತೀರ್ಮಾನಿಸಿz್ದÁರಂತೆ. ರಾಬರ್ಟ್ ಸಿನಿಮಾಗೆ ತರುಣ್ ಸುಧೀರ್ ಆ್ಯP್ಷÀನ್-ಕಟ್ ಹೇಳಿದ್ದು, ಉಮಾಪತಿ ಫಿಲಂಸ್ ಬ್ಯಾನರ್‍ಅಡಿ ಚಿತ್ರ ನಿರ್ಮಾಣವಾಗಿದೆ. ಇನ್ನು ಚಿತ್ರದ ನಾಯಕಿಯಾಗಿ ಆಶಾಭಟ್ ನಟಿಸಿದ್ದು, ಉಳಿದ ಪ್ರಮುಖ ಪಾತ್ರದಲ್ಲಿ ಜಗಪತಿಬಾಬು, ರವಿಕಿಶನ್ ಹಾಗೂ ದೇವರಾಜ್ ಕಾಣಿಸಿಕೊಂಡಿz್ದÁರೆ.

Translate »