ಹರಿಕಥೆ ಅಲ್ಲ ಗಿರಿಕಥೆ ಹೇಳಹೊರಟಿದ್ದಾರೆ ರಿಶಬ್ ಶೆಟ್ಟಿ
ಸಿನಿಮಾ

ಹರಿಕಥೆ ಅಲ್ಲ ಗಿರಿಕಥೆ ಹೇಳಹೊರಟಿದ್ದಾರೆ ರಿಶಬ್ ಶೆಟ್ಟಿ

May 15, 2020

ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿ ಹೆಸರಾಗಿರುವ ರಿಷಬ್‍ಶೆಟ್ಟಿ ರಿಕ್ಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಹೀಗೆ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟವರು. ಈಗಾಗಲೇ ಅವರು ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ರುದ್ರಪ್ರಯಾಗ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಹಿರಿಯ ನಟ ಅನಂತ್‍ನಾಗ್ ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಲು ರಿಷಭ್‍ಶೆಟ್ಟಿ ಸಜ್ಜಾಗಿದ್ದಾರೆ. ಗಿರಿಕೃಷ್ಣ ಎಂಬ ಯುವ ನಿರ್ದೇಶಕನ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಹೆಸರು ಹರಿಕಥೆ ಅಲ್ಲ ಗಿರಿಕಥೆ. ಈ ಚಿತ್ರಕ್ಕಾಗಿ ಬೆಲ್‍ಬಾಟಂ, ಕಥಾಸಂಗಮ ಚಿತ್ರಗಳ ನಂತರ ರಿಶಬ್‍ಶೆಟ್ಟಿ ಮತ್ತೊಮ್ಮೆ ಬಣ್ಣ ಹಚ್ಚುತ್ತಿz್ದÁರೆ. ವಿಶೇಷವೆಂದರೆ ಈ ಚಿತ್ರ ರಿಷಬ್‍ಶೆಟ್ಟಿ ಅವರ ಪೆÇ್ರಡP್ಷÀನ್ ಹೌಸ್‍ನಿಂದಲೇ ಹೊರಬರುತ್ತಿದೆ.

ಸಧ್ಯ ಸ್ಕ್ರಿಪ್ಟ್‍ವರ್ಕ್ ತಯಾರಿಕಾ ಹಂತದಲ್ಲಿರುವ ಈ ಚಿತ್ರದ ಚಿತ್ರೀಕರಣ ಲಾಕ್‍ಡೌನ್ ಮುಗಿದ ನಂತರ ಪ್ರಾರಂಭವಾಗುವ ನಿರೀಕ್ಷೆಯಿದೆ. ರಿಷಬ್‍ಶೆಟ್ಟಿ ಈ ಹಿಂದೆ ಬೆಲ್ ಬಾಟಮ್ ಚಿತ್ರದಲ್ಲಿ ನಟಿಸಿ ಯಶ ಕಂಡಿದ್ದು, ಜಯತೀರ್ಥ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ಎಂಭತ್ತರ ದಶಕದಲ್ಲಿ ನಡೆಯುವ ಕ್ರೈಮ್‍ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರ 2018ರ ದೊಡ್ಡ ಹಿಟ್ ಚಿತ್ರವಾಗಿಯೂ ಹೊರಹೊಮ್ಮಿತ್ತು. ಈಗ ಈ ಚಿತ್ರ ದೇಶದ ಇತರ ಭಾಷೆಗಳಲ್ಲೂ ಸಹ ರೀಮೇಕ್ ಆಗುತ್ತಿದೆ. ಇದಾದ ನಂತರ ರಿಷಬ್‍ಶೆಟ್ಟಿ, ರಕ್ಷಿತ್‍ಶೆಟ್ಟಿ ಅವರ ಜೊತೆ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಕೌಬಾಯ್ ಕೃಷ್ಣ ಎಂಬ ಗೌರವ ಪಾತ್ರದಲ್ಲಿ ಕಾಣಿಸಿಕೊಂಡರು.

ಈಗವರು ಮತ್ತೊಮ್ಮೆ ನಾಂiÀಕನಾಗಿ ಅಭಿಮಾನಿಗಳ ಮನರಂಜಿಸಲು ಸಜ್ಜಾಗಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಮೂಲಕ ಇನ್ನೊಮ್ಮೆ ಪ್ರೇP್ಷÀಕರಿಗೆ ಮೋಡಿ ಮಾಡಲು ಅಣಿಯಾಗಿz್ದÁರೆ. ಗಿರಿಕೃಷ್ಣ ಚಿತ್ರರಂಗಕ್ಕೆ ಹೊಸಬರೇನಲ್ಲ, ಅವರು ಈಗಾಗಲೇ ಲವ್ ಇನ್ ಮಂಡ್ಯ, ಎದೆಗಾರಿಕೆ, ಕರಿಯಾ ಕಣ್ ಬಿಟ್ಟಾ, ಕಿರಿಕ್ ಪಾರ್ಟಿ ಸೇರಿದಂತೆ ಇನ್ನೂ ಮೊದಲಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸುವ ಮೂಲಕ ಗುರ್ತಿಸಿ ಕೊಂಡಿz್ದÁರೆ. ಅಲ್ಲದೆ ರೀಫಿಲ್ ಎಂಬ ಕಿರುಚಿತ್ರ ದಲ್ಲಿ ಸಹ ಗಿರಿಕೃಷ್ಣ ನಟಿಸಿದ್ದು, ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಇನ್ನು ಈ ಚಿತ್ರದ ನಾಯಕಿ ಹಾಗೂ ಉಳಿದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ನಡೆಯ ಬೇಕಿದೆ. ಸದ್ಯ ಅಜನೀಶ್ ಬಿ.ಲೋಕನಾಥ್ ಚಿತ್ರದ ಸಂಗೀತ ನಿರ್ದೇಶಕರಾಗಿ ಫೈನಲ್ ಆಗಿದ್ದಾರೆ. ಅಲ್ಲದೆ ರಂಗನಾಥ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Translate »