ಕಲಿಯುಗದ ಕಂಸ ಪೋಸ್ಟರ್ ಬಿಡುಗಡೆ
ಸಿನಿಮಾ

ಕಲಿಯುಗದ ಕಂಸ ಪೋಸ್ಟರ್ ಬಿಡುಗಡೆ

May 15, 2020

ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ‘ಕಲಿಯುಗದ ಕಂಸ’ನ ಆಗಮನ ವಾಗುತ್ತಿದೆ. ಹೌದು ಇದು ಹೊಸ ಚಿತ್ರವೊಂದರ ಶೀರ್ಷಿಕೆ. ಇಲ್ಲಿ ಕಂಸನ ಪಾತ್ರದಾರಿಯಾಗಿ ಸಂದೀಪ್ ಕಾಣಿಸಿಕೊಂಡಿದ್ದಾರೆ. ಅವರಿಗಿದು ಪ್ರಥಮ ಪ್ರಯತ್ನ. ಇವರ ಸಹೋದರ ದಿಲೀಪ್‍ಕುಮಾರ್ ಹಾಗೂ ಸಹೋದರಿ ಶ್ರೀಮತಿ ದೇವಕಿ ಈ ಚಿತ್ರದ ನಿರ್ಮಾಪಕರು. ಮೊನ್ನೆ ಸಂದೀಪ್ ಅವರ ಜನ್ಮದಿನ. ಅಂದೇ ಈ ಚಿತ್ರದ ಮೋಷನ್ ಪೆÇೀಸ್ಟರ್‍ನ್ನು ಎ 2 ಮ್ಯೂಜಿಕ್ ಯು ಟ್ಯೂಬ್‍ನಲ್ಲಿ ಬಿಡುಗಡೆ ಮಾಡಲಾಗಿದೆ. ಒಂದು ನಿಮಿಷ 48 ಸೆಕಂಡ್ ಆವಧಿಯ ಈ ಮೋಷನ್ ಪೆÇೀಸ್ಟರ್‍ನ್ನು ಎಡಿಟ್ ಮಾಡಿಕೊಟ್ಟವರು ರಾಮ್‍ಬಾಬು. ತೆಲುಗಿನ ಸೂಪರ್ ಹಿಟ್ ‘ಬಾಹುಬಲಿ’ ಹಾಗೂ ‘ಸೈರಾ ನರಸಿಂಹರೆಡ್ಡಿ’ಯಂಥ ಸಿನಿಮಾಗಳಿಗೆ ಸಂಕಲನ ಮಾಡಿದವರು. ‘ಕಲಿಯುಗ ಕಂಸ’ ಇನ್ನೇನು ಸೆಟ್ಟೇರಲು ಎಲ್ಲ ತಯಾರಿ ನಡೆದಿದೆ. ‘ರೌಡಿಯೊಬ್ಬನ ಕಥಾವಸ್ತುವನ್ನು ಈ ಚಿತ್ರದ ಮೂಲಕ ನಿರ್ದೇಶಕ ಬಿ.ಎಚ್.ಪ್ರಸಾದ್ ಹೇಳ ಹೊರಟಿದ್ದಾರೆ. ಇಲ್ಲಿ ಮಚ್ಚು ಲಾಂಗುಗಳು ಇರುವುದಿಲ್ಲ, ಸಮಾಜದ ಅತಿ ಕಿರಿಯ ವಯಸಿನ ಕ್ರಿಮಿನಲ್ ಒಬ್ಬನ ಕಥೆಯಿದು, ಗುಜರಾತ್‍ನಲ್ಲಿ ನಡೆದಂಥ ನೈಜ ಘಟನೆಯೊಂದನ್ನು ಆಧಾರವಾಗಿಟ್ಟು ಕೊಂಡು ಈ ಚಿತ್ರದ ಸ್ಕ್ರಿಪ್ಟ್ ಹೆಣೆಯ ಲಾಗಿದೆ. ನಾಯಕ ತನ್ನ ಬುದ್ದಿ ಶಕ್ತಿಯಿಂದ ಹೇಗೆ ಕಂಸನಾಗಿ ಬದಲಾಗುತ್ತಾನೆ ಎನ್ನುವುದೇ ಈ ಚಿತ್ರದ ಒನ್‍ಲೈನ್ ಸ್ಟೋರಿ. ಕೊರೊನಾ ಮುಗಿದ ಬಳಿಕ ಅಂದರೆ ಜುಲೈನಲ್ಲಿ ‘ಕಲಿಯುಗದ ಕಂಸ’ ಚಿತ್ರದ ಚಿತ್ರೀಕರಣವನ್ನು ಶುರು ಮಾಡುವ ಯೋಜನೆ ಚಿತ್ರತಂಡ ಹಾಕಿಕೊಂಡಿದೆ. ನಿರ್ದೇಶಕ ಬಿ.ಎಚ್. ಪ್ರಸಾದ್ ಅವರಿಗೂ ಇದು ಪ್ರಥಮ ಪ್ರಯತ್ನ. ಇವರು ಯಾರೊಂದಿಗೂ ಸಹಾಯಕರಾಗಿ ಅನುಭವ ಪಡೆಯ ದಿದ್ದರೂ, ನಿರ್ದೇಶನದ ಕುರಿತಂತೆ ಹಲವಾರು ವಿಚಾರಗಳನ್ನು ತಿಳಿದು ಕೊಂಡು ನಿರ್ದೇಶನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಸಂದೀಪ ತನ್ನ ಮೊದಲ ಚಿತ್ರದಲ್ಲೇ ಮಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬೈನಲ್ಲಿ  ಅಭಿನಯ ತರಬೇತಿಯ ಜೊತೆಗೆ  ರಂಗಭೂಮಿಯ ಅನುಭವವನ್ನೂ ಪಡೆದುಕೊಂಡಿದ್ದಾರೆ. ಅಲ್ಲದೆ ಸಾಹಸ ಹಾಗೂ ನೃತ್ಯದಲ್ಲೂ ತರಬೇತಿ ಪಡೆದಿದ್ದಾರೆ. ಈ ಚಿತ್ರದ ನಾಯಕಿ ಶ್ರೇಯಶರ್ಮ. 2007ರಲ್ಲಿ ಬೇಬಿ ಶ್ರೇಯ ಆಗಿ ರಮೇಶ್ ಅರವಿಂದ್ ಅಭಿನಯದ ಸೌಂದರ್ಯ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದರು. ತಮಿಳಿನ ಆರ್ಯ ಈಗಾಗಲೇ ರಾಜರಥ ಎಂಬ ಚಿತ್ರದಲ್ಲಿ ಅಭಿನಯಿ ಸಿದ್ದರು. ಈಗ ಈ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿ ದ್ದಾರೆ. ಶರತ್ ಲೋಹಿತಾಶ್ವ, ಹರೀಶ್‍ರೈ ಹಾಗೂ ಇನ್ನಿತರರು ಪೆÇೀಷಕ ಪಾತ್ರಗಳಲ್ಲಿ ನಟಿಸುತ್ತಿ ದ್ದಾರೆ. ಲೋಕಿ ಈ ಚಿತ್ರದ ಹಾಡು ಗಳಿಗೆ ರಾಗ ಸಂಯೋಜನೆ,  ಪ್ರಖ್ಯಾತ್ ನಾರಾಯಣ್ ಚಿತ್ರಕ್ಕೆ ಛಾಯಾಗ್ರಾಹಕರು.

 

 

 

Translate »