ಲಾಕ್‍ಡೌನ್‍ನಲ್ಲೇ ತಯಾರಾದ ಚಿತ್ರ ಪೇಂಟರ್
ಸಿನಿಮಾ

ಲಾಕ್‍ಡೌನ್‍ನಲ್ಲೇ ತಯಾರಾದ ಚಿತ್ರ ಪೇಂಟರ್

May 15, 2020

ನಿರ್ದೇಶಕ ವೆಂಕಟ್‍ಭಾರದ್ವಾಜ್ ಒಂದು ಚಿತ್ರವನ್ನು ಅದೂ ಲಾಕ್‍ಡೌನ್ ಸಮಯದಲ್ಲೇ ಮಾಡಿ ಮುಗಿಸಿದ್ದಾರೆ. ಅವರೇ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರಲ್ಲದೆ ನಿರ್ದೇಶನ ಕೂಡ ಮಾಡಿದ್ದಾರೆ. ಆ ಚಿತ್ರದ ಹೆಸರು `ದಿ ಪೈಂಟರ್.’ ಲಾಕ್ಡೌನ್ ಸಂದಭರ್Àದಲ್ಲೇ ಒಂದು ಚಲನಚಿತ್ರ ಮಾಡಬಾರದೇಕೆ ಎಂದು ಕೊಂಡಾಗ ಹುಟ್ಟಿz್ದÉೀ `ದಿ ಪೈಂಟರ್’. ಇಂದಿನ ಲಾಕ್‍ಡೌನ್ ಪರಿಸ್ಥಿತಿಗೆ ತಕ್ಕಂತೆ ಒಂದು ಚಾಲೆಂಜಿಂಗ್ ಸಬ್ಜೆಕ್ಟ್ ರೆಡಿ ಮಾಡಿದೆ. ಇವತ್ತಿನ ಪರಿಸ್ಥಿತಿಯನ್ನು ಕೆಲವರು ಹೇಗೆ ಒಳ್ಳೆಯದಕ್ಕೆ, ಮತ್ತೆ ಕೆಲವರು ಕೆಟ್ಟದ್ದಕ್ಕೆ ಹೇಗೆ ಉಪಯೋಗಿಸಿಕೊಳ್ಳು ತ್ತಾರೆ ಎಂಬ ವಿಷಯವನ್ನ ದಿ ಪೈಂಟರ್ ಚಿತ್ರದ ಮೂಲಕ ಹೇಳಲಾಗಿದೆ. ಇದೊಂದು ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಕಥಾವಸ್ತು ಹೊಂದಿರುವ ಚಿತ್ರ ಎಂದು ವೆಂಕಟ್ ಹೇಳುತ್ತಾರೆ.

ಸುಮಾರು 90 ನಿಮಿಷಗಳ ಅವಧಿಯ ಚಲನ ಚಿತ್ರ ಇದಾಗಿದ್ದು, 5 ಲೊಕೇಶನ್, 5 ಜನ ಕ್ಯಾಮರಾಮನ್, 17 ಜನ ಕಲಾವಿದರು ಮತ್ತು ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಏಪ್ರಿಲ್ 2ನೇ ವಾರದಿಂದ ಚಿತ್ರೀಕರಣ ಆರಂಭಿಸಿ 10 ದಿನಗಳ ಕಾಲ ಚೆನ್ನೈ, ಬೆಂಗಳೂರು, ಕನಕಪುರ, ಹೆಬ್ಬಾಳ ಮತ್ತು ತುಮಕೂರಿನಲ್ಲಿ ಚಿತ್ರದ ಶೂಟಿಂಗ್ ನಡೆಸಲಾಗಿದೆ.

ಒಂದು ಒಳ್ಳೆಯ ಯೋಜನೆಗೆ ತಂಡ ನನಗೆ ಕೈ ಜೋಡಿಸಿತು. ಎಲ್ಲ ನಟರು ಮತ್ತು ತಂತ್ರಜ್ಞರು ಚಿತ್ರಕ್ಕೆ ನ್ಯಾಯ ಒದಗಿಸಿz್ದÁರೆ, ದಿನಕ್ಕೆ ಮಲ್ಟಿಪಲ್ ಲೊಕೇಶನ್ ಶೂಟ್ ಮಾಡಬೇಕೆಂದರೆ ನಿಜಕ್ಕೂ ದೊಡ್ಡ ಗುಂಡಿಗೆ ಬೇಕು, ಅದು ಇಂಥಾ ಪರಿಸ್ಥಿತಿಯಲ್ಲಿ. ಈ ಚಿತ್ರದಲ್ಲಿ ಎಲ್ಲ ನಟರು, ತಂತ್ರಜ್ಞರು ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡಿz್ದÁರೆ, ಶೂಟಿಂಗ್ ಸಮಯದಲ್ಲಿ ನಾವೇ ಅಡುಗೆ ಮಾಡಿಕೊಂಡು, ಊಟ ಮಾಡಿ ನಂತರ ಶೂಟ್ ಮಾಡಿದ್ದೀವಿ. ನಿಜಕ್ಕೂ ಇದೊಂದು ಒಳ್ಳೆಯ ಅನುಭವ, ಮನೆಯಲ್ಲಿ 5 ಜನ ಅಷ್ಟೇ, ಎಲ್ಲರೂ ಆ ಶಾಟ್‍ನಲ್ಲಿ ಆಕ್ಟ್ ಮಾಡ ಬೇಕು, ಅವರೇ ಕ್ಯಾಮೆರಾ ಮುಂದೆ ಆಕ್ಟ್ ಮಾಡಬೇಕು. ಆಗ ಅವರೇ ಕ್ಯಾಮೆರಾ ಮತ್ತು ಸೌಂಡ್ ರೋಲ್ ಮಾಡಿ ಕ್ಯಾಮೆರಾ ಮುಂದೆ ಬಂದು ನಿಂತು ಸುಮಾರು 5 ಸೆಕೆಂಡ್ ಬಿಟ್ಟು ಆP್ಷÀನ್ ಹೇಳಿದ ನಂತರ ನಟನೆ ಶುರು ಮಾಡಬೇಕು. ಇದೆಲ್ಲ ನಿಜಕ್ಕೂ ಒಂದು ಚಾಲೆಂಜ್ ಆಗಿತ್ತು. ಈಗ ಚಿತ್ರೀಕರಣ ಮುಗಿದಿದ್ದು, ಎಡಿಟಿಂಗ್ ನಡೀತಿದೆ. ಜೂನ್ ಮೊದಲ ವಾರದಲ್ಲಿ ಈ ಚಿತ್ರ ಸಂಪೂರ್ಣವಾಗಿ ರೆಡಿಯಾಗಲಿದೆ. ನಂತರ ಚಿತ್ರವನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡುತ್ತೇವೆ ಎಂದು ನಿರ್ದೇಶಕ ವೆಂಕಟ್ ಭಾರದ್ವಾಜ್ ಹೇಳಿದ್ದಾರೆ.

ಇನ್ನು ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ವೆಂಕಟ್ ಭಾರದ್ವಾಜ್, ರಾಜ್‍ಕಮಲ್, ನವೀನ್ ಪ್ರಸಾದ್, ಕಬೀರ್ ಸೋಮಯಾಜಿ, ಶಮೀಕ್, ಉಮಾ, ಶಮಾ, ವೈಷ್ಣವಿ, ವೆಂಕಟ್ ಶಾಸ್ತ್ರಿ, ಮನೋಜ್, ಕಿರಣ್, ಮಿಥುನ್ ಮತ್ತು ಸಂಜಯ್ ನಟಿಸಿದ್ದಾರೆ. ಇನ್ನು ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ವೆಂಕಟ್ ಭಾರದ್ವಾಜ್ ಅವರೇ ವಹಿಸಿಕೊಂಡಿದ್ದಾರೆ.

Translate »