ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ಸಾಲ
ಮೈಸೂರು

ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ಸಾಲ

May 14, 2020

ನವದೆಹಲಿ, ಮೇ13- ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‍ಡೌನ್ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ವ್ಯವಸ್ಥೆಯ ಚೇತರಿಕೆಗಾಗಿ ಮಂಗಳವಾರ ಘೋಷಿ ಸಿದ್ದ `ವಿಶೇಷ ಆರ್ಥಿಕ ಪ್ಯಾಕೇಜ್’ ಮೂಲಕ ಬಡವರು, ಶ್ರಮಿಕರು, ರೈತರಿಗೆ ಭಾರೀ ಅನುಕೂಲ ಮಾಡಿಕೊಡ ಲಾಗುತ್ತಿದೆ. ಬುಧವಾರ ಸಂಜೆ 4ಕ್ಕೆ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾತ್ರಿ ಭಾಷಣದಲ್ಲಿ ಘೋಷಿಸಿದ್ದ `ಆತ್ಮ ನಿರ್ಭರ ಭಾರತ’ದ ವಿಶೇಷ ಆರ್ಥಿಕ ಪ್ಯಾಕೇಜ್‍ನ ಸ್ವರೂಪಗಳನ್ನು ಇಂದು ವಿವರವಾಗಿ ಬಿಡಿಸಿಟ್ಟರು. ಭವಿಷ್ಯನಿಧಿ ಚಂದಾದಾರರು, ಆದಾಯ ತೆರಿಗೆದಾರರು, ಎಂಎಸ್‍ಎಂಇಗಳಿಗೆ ಬಂಪರ್ ಗಿಫ್ಟ್ ಸಿಕ್ಕಿದೆ. ಸರ್ಕಾರಿ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಲು ಆರು ತಿಂಗಳಷ್ಟು ಗಡುವು ವಿಸ್ತರಿಸಲಾಗಿದೆ.

ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ. ಸಾಲ ಒದಗಿಸಲಾಗುತ್ತಿದೆ. ಆದಾಯ ತೆರಿಗೆದಾರರು ಪಾವತಿಸಿದ್ದ 18 ಸಾವಿರ ಕೋಟಿ ರೂ. ತೆರಿಗೆ ಹಣ ವಾಪಸ್ ಮಾಡಲಾಗುತ್ತಿದೆ. ಭವಿಷ್ಯನಿಧಿಗೆ ಜಮಾ ಮಾಡಲು 2,500 ಕೋಟಿ ರೂ. ಮೀಸಲಿಡುವ ಮೂಲಕ ಇಪಿಎಫ್ ಚಂದಾದಾರರು ಮತ್ತು ಉದ್ಯೋಗ ದಾತರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಬಡವರ ಜನಧನ್ ಖಾತೆಗೆ ಈಗಾಗಲೇ ಆರ್ಥಿಕ ನೆರವು ಜಮಾ ಮಾಡಲಾಗಿದೆ. ಮುಂದಿನ ಕೆಲದಿನ ಹಂತಹಂತವಾಗಿ ಹಲವು ಜನಪರ ಯೋಜನೆ ಗಳನ್ನು ಘೋಷಿಸಲಿದ್ದೇವೆ. ಒಂದೊಂದು ವಲಯಕ್ಕೆ ಒಂದೊಂದು ದಿನ ಯೋಜನೆಗಳನ್ನು ಘೋಷಿಸ ಲಿದ್ದೇವೆ ಎಂದು ವಿತ್ತ ಸಚಿವೆ ಹೇಳಿದರು. ಭಾರತ ಸ್ವಂತ ಶಕ್ತಿ ಹೊಂದಿದೆ. ಇಡೀ ವಿಶ್ವಕ್ಕೇ ಕೊಡುಗೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಂಎಸ್‍ಎಂಇ: 25 ಕೋಟಿಯಿಂದ 100 ಕೋಟಿ ರೂ.ವರೆಗೆ ವಹಿವಾಟು ನಡೆಸುವ `ಸೂಕ್ಷ್ಮ ಗಾತ್ರದ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (ಎಂಎಸ್‍ಎಂಇ) ಸುಲಭದಲ್ಲಿ, ಯಾವುದೇ ಅಡ ಮಾನದ ಅಗತ್ಯವಿಲ್ಲದೇ ದೊಡ್ಡ ಮೊತ್ತದ ಸಾಲ ಒದಗಿಸಲೆಂದು 3 ಲಕ್ಷ ಕೋಟಿ ರೂ.ಗಳನ್ನು ವಿಶೇಷ ಪ್ಯಾಕೇಜ್‍ನಲ್ಲಿ ಮೀಸಲಿಡಲಾಗುತ್ತಿದೆ. ಇದರಿಂದ ದೇಶದ ಎಂಎಸ್‍ಎಂಇ ವಲಯದ 45 ಲಕ್ಷ ಕೈಗಾ ರಿಕೆಗಳಿಗೆ ಅನುಕೂಲವಾಗಲಿದೆ. ಈ ಸಾಲ ಮರು ಪಾವತಿಗೆ 4 ವರ್ಷ ಕಾಲಾವಕಾಶವಿರಲಿದೆ. ಸಾಲ ಪಡೆದ ಮೊದಲ 12 ತಿಂಗಳವರೆಗೂ ಮರು ಪಾವತಿ ಚಿಂತೆ ಇಲ್ಲ. ಬ್ಯಾಂಕುಗಳು ನೀಡುವ ಸಾಲಕ್ಕೆ ಕೇಂದ್ರ ಸರಕಾರವೇ ಗ್ಯಾರಂಟಿ ನೀಡಲಿದೆ ಎಂದು ವಿತ್ತ ಸಚಿವೆ ವಿವರಿಸಿದ್ದಾರೆ.

ಎಂಎಸ್‍ಎಂಇಗಳಿಗೆ ಸಾಲ ನೀಡಲು ಅನುಕೂಲ ವಾಗುವಂತೆ ರಾಷ್ಟ್ರೀಕೃತ ಬ್ಯಾಂಕ್‍ಗಳು, ದೊಡ್ಡ ಹಣ ಕಾಸು ಸಂಸ್ಥೆಗಳಿಗೆ 45 ಸಾವಿರ ಕೋಟಿ ರೂ. ಸಾಲ ಖಾತರಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಸಾಲ ಮೊತ್ತದ ಪ್ರಥಮ ಶೇ.20ರಷ್ಟು ನಷ್ಟವನ್ನು ಸರ್ಕಾ ರವೇ ಭರಿಸಲಿದೆ. ಸಣ್ಣ ಸಾಲ ನೀಡುವ ಬ್ಯಾಂಕೇ ತರ ಸಂಸ್ಥೆಗಳಿಗೆ 30 ಸಾವಿರ ಕೋಟಿ ರೂ. ನೆರವು ನೀಡಲಾಗುವುದು ಎಂದಿದ್ದಾರೆ.

ಉದ್ಯೋಗಿಗಳಿಗೆ ಸಂಬಳ ನೀಡಲು ಸಣ್ಣ ಕೈಗಾರಿಕೆಗಳಲ್ಲಿ ಹಣ ಇಲ್ಲದಿದ್ದರೆ ಕೇಂದ್ರ ನೆರವು ನೀಡಲಿದೆ. ಸರ್ಕಾರ ಉಳಿಸಿಕೊಂಡಿರುವ ಸಣ್ಣ ಕೈಗಾರಿಕೆಗಳ ಬಾಕಿಯನ್ನು 45 ದಿನಗಳಲ್ಲಿ ನೀಡಲಾಗುವುದು. ಅ.31ರವರೆಗೂ ಕೈಗಾರಿಕೆಗಳು ಸಾಲ ಪಡೆಯಬಹುದು. ಉದ್ಯಮ ವಹಿವಾಟಿಗೆ ಹೊಸ ಮಾನದಂಡ ನಿಗದಿಪಡಿಸಲಾಗುವುದು. ಇನ್ನು ಮುಂದೆ ಸೇವಾ ವಲಯ ಮತ್ತು ಉತ್ಪಾದನಾ ವಲಯ ಎರಡೂ ಒಂದೇ ಆಗಿರಲಿವೆ. ಎಂಎಸ್ ಎಂಇಗಳ ಉತ್ತೇಜನಕ್ಕಾಗಿ ಅಗತ್ಯ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದರು.

ಜಾಗತಿಕ ಟೆಂಡರ್‍ಗೆ ಅವಕಾಶವಿಲ್ಲ: ಇನ್ನು ಮುಂದೆ 200 ಕೋಟಿ ರೂ.ವರೆಗಿನ ವಹಿವಾಟಿಗೆ ಜಾಗತಿಕ ಟೆಂಡರ್ ಇರುವುದಿಲ್ಲ. ಇಷ್ಟು ಮೊತ್ತ ವಹಿವಾಟುಗಳ ಟೆಂಡರ್‍ಗಳಲ್ಲಿ ಭಾಗವಹಿಸಲು ವಿದೇಶಿ ಕಂಪನಿಗಳಿಗೆ ಅವಕಾಶ ಇಲ್ಲ. ಇದಕ್ಕಾಗಿ ಕಾನೂನಿಗೆ ತಿದ್ದುಪಡಿ ಮಾಡಲಾಗುವುದು. ಸ್ವಾವಲಂಬಿ ಭಾರತ ಮತ್ತು ಮೇಕಿಂಗ್ ಇಂಡಿಯಾ ಯೋಜನೆಗಳಿಗೆ ಇದರಿಂದ ನೆರವಾಗಲಿದೆ ಎಂದು ಅವರು ತಿಳಿಸಿದರು.

ವಿದ್ಯುತ್ ಕಂಪನಿಗಳಿಗೆ: ಲಾಕ್‍ಡೌನ್‍ನಿಂದಾಗಿ ದೇಶದ ವಿದ್ಯುತ್ ಸರಬರಾಜು ಕಂಪನಿಗಳು ಆರ್ಥಿಕವಾಗಿ ಭಾರೀ ಕಷ್ಟಕ್ಕೆ ಸಿಲುಕಿವೆ. ಹೀಗಾಗಿ ವಿದ್ಯುತ್ ಸರಬರಾಜು ಕಂಪನಿಗಳಿಗೆಂದೇ 90 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದರಿಂದ ಈ ಕಂಪನಿಗಳು ನಷ್ಟವನ್ನು ಭರಿಸಲಿವೆ ಎಂದಿದ್ದಾರೆ.

ಜನಧನ್: ಇದುವರೆಗೆ 42 ಕೋಟಿ ಜನರ ಜನಧನ್ ಖಾತೆಗಳಿಗೆ ಒಟ್ಟು 52 ಸಾವಿರ ಕೋಟಿ ರೂ. ವರ್ಗಾಯಿಸಿದ್ದೇವೆ ಎಂದರು.

ಸರ್ಕಾರಿ ಗುತ್ತಿಗೆದಾರರು: ಸರ್ಕಾರಿ ಗುತ್ತಿಗೆದಾರರಿಗೂ ಈ ವಿಶೇಷ ಪ್ಯಾಕೇಜ್‍ನಲ್ಲಿ ಅನುಕೂಲ ಮಾಡಿಕೊಡಲಾಗಿದೆ. ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು 6 ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ. ಅಗತ್ಯ ಬಿದ್ದಲ್ಲಿ ಇನ್ನೂ 3 ತಿಂಗಳು ಹೆಚ್ಚುವರಿ ಅವಕಾಶ ನೀಡಲಾಗುವುದು. ಗುತ್ತಿಗೆದಾರರು ನೀಡಿದ ಬ್ಯಾಂಕ್ ಗ್ಯಾರಂಟಿಗಳನ್ನು ಕಾಮಗಾರಿ ಮುಗಿಸಿದಂತೆಲ್ಲಾ ಹಂತಹಂತವಾಗಿ ವಾಪಸ್ ನೀಡಲಾಗುವುದು ಎಂದಿದ್ದಾರೆ.

ರಿಯಲ್ ಎಸ್ಟೇಟ್: ಕೊರೊನಾವನ್ನು ನೈಸರ್ಗಿಕ ವಿಕೋಪ ಎಂದು ಪರಿಗಣಿಸಿ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಸರ್ಕಾರ ಆರ್ಥಿಕ ನೆರವು ನೀಡಿದೆ. ಬಿಲ್ಡರ್ ಮತ್ತು ಡೆವಲಪರ್‍ಗಳಿಗೆ ಅನುಕೂಲವಾಗುವಂತೆ ಕಾಮಗಾರಿ ನೋಂದಣಿ ಪ್ರಮಾಣ ಪತ್ರಗಳನ್ನು ಹೊಸದಾಗಿ ನೀಡಲಾಗುವುದು. ಈ ಸಂಬಂಧ ಎಲ್ಲ ರಾಜ್ಯಗಳಿಗೂ ಕೇಂದ್ರ ನಗರಾಭಿವೃದ್ಧಿ ಇಲಾಖೆಯಿಂದ ಸೂಚನೆ ನೀಡಲಾಗಿದೆ.

ಇನ್ನು ಮೂರು ತಿಂಗಳು ಪಿಎಫ್ ಹಣವನ್ನು ಸರ್ಕಾರವೇ ಭರಿಸಲಿದೆ
ನವದೆಹಲಿ, ಮೇ 13- ದೇಶದಲ್ಲಿ ಲಾಕ್‍ಡೌನ್ ನಿಂದಾಗಿ ಹಲವು ಕಾರ್ಮಿಕರು ಹಾಗೂ ಕೈಗಾ ರಿಕೆ, ಸಂಸ್ಥೆಗಳು ಪರದಾಡುವಂತಾಗಿದೆ. ಮೂರು ತಿಂಗಳವರೆಗೆ ಕಂಪನಿಗಳು ಮತ್ತು ಉದ್ಯೋಗಿ ಗಳ ಪಿಎಫ್ ಪಾಲನ್ನು ಭರಿಸಿದ್ದ ಸರ್ಕಾರ, ಇದೀಗ ಇನ್ನೂ ಮೂರು ತಿಂಗಳು ಇದೇ ನೆರವು ಮುಂದುವರಿಸಲು ನಿರ್ಧರಿಸಿದೆ.

ಇದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆ ಗಳಿಗೆ ಸರ್ಕಾರದಿಂದ 2,500 ಕೋಟಿ ರೂ ನೆರವು ಸಿಕ್ಕಂತಾಗುತ್ತದೆ. ಮುಂದಿನ ಮೂರು ತಿಂಗಳ ಕಾಲ ಅಂದರೆ, ಆಗಸ್ಟ್ ತಿಂಗಳವರೆಗೆ ಕಂಪನಿಗಳು ಪಿಎಫ್ ಹಣ ಭರಿಸುವ ಹೊರೆ ಇರುವುದಿಲ್ಲ. ಸರ್ಕಾರವೇ ಇದನ್ನು ಭರಿಸಲಿದೆ ಎಂದು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಕಡಿಮೆ ಸಂಬಳ ಪಡೆಯುವ ನೌಕರರಿಗೆ ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟ ಎದು ರಾಗಿದೆ. ಅಂತಹ ಉದ್ಯೋಗಿಗಳಿಗೆ ಅನುಕೂಲ ವಾಗಲೆಂಬ ಉದ್ದೇಶದಿಂದ ತಿಂಗಳಿಗೆ 15,000ಕ್ಕೂ ಕಡಿಮೆ ಸಂಬಳ ಪಡೆಯುವ ನೌಕರರಿಗೆ ತಕ್ಷಣ ಪಿಎಫ್ ಹಣವನ್ನು ಪಾವತಿ ಮಾಡಲಾಗುವುದು. ಇಪಿಎಫ್ ಖಾತೆಗಳಿಂದ ಉದ್ಯೋಗಿಗಳು ತಮ್ಮ ಪಿಎಫ್ ಹಣವನ್ನು ಡ್ರಾ ಮಾಡಿಕೊಳ್ಳಬಹುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

15 ಸಾವಿರಕ್ಕೂ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ತಕ್ಷಣ ಪಿಎಫ್ ಹಣ ಪಾವತಿ ಮಾಡಲಾಗುವುದು. ಅಲ್ಲದೆ, ಪ್ರತಿ ತಿಂಗಳು 15,000ಕ್ಕೂ ಅಧಿಕ ಸಂಬಳ ಪಡೆಯುವ ನೌಕರರಿಗೆ ಕೂಡ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಉದ್ಯೋಗದಾತರ ಪಿಎಫ್ ಪಾಲು ಶೇ.12ರಿಂದ ಶೇ.10ಕ್ಕೆ ಇಳಿಕೆ ಮಾಡಲಾಗಿದೆ.

6,750 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಮತ್ತೆ ಮೂರು ತಿಂಗಳ ಕಾಲ ಅಂದರೆ ಜೂನ್, ಜುಲೈ, ಆಗಸ್ಟ್ ತಿಂಗಳ ವರೆಗೆ ಸರ್ಕಾರವೇ ಪಿಎಫ್ ಹಣವನ್ನು ಪಾವತಿ ಮಾಡಲಿದೆ. ಕಂಪನಿ ಮತ್ತು ನೌಕರರ ಪಾಲಿನ ಪಿಎಫ್ ಹಣವನ್ನು ಸರ್ಕಾರವೇ ಭರಿಸಲಿದೆ. 2,500 ಕೋಟಿ ಲಿಕ್ವಿಡಿಟಿ ಪೆÇ್ರೀತ್ಸಾಹದೊಂದಿಗೆ 72.22 ಲಕ್ಷ ಉದ್ಯೋಗಿಗಳು ಈ ಇಪಿಎಫ್ ಅನು ಕೂಲ ಪಡೆಯಲಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಮುಂದಿನ ವರ್ಷದ ಮಾರ್ಚ್‍ವರೆಗೆ ಶೇ.25 ಟಿಡಿಎಸ್ ಕಡಿತ
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮುಂದಿನ ವರ್ಷದ ಮಾರ್ಚ್‍ವರೆಗೆ ಟಿಡಿಎಸ್ ಮತ್ತು ಟಿಸಿಎಸ್ ಕಡಿತವನ್ನು ಸದ್ಯ ಇರೋ ದರ ದಲ್ಲಿ ಶೇ.25ರಷ್ಟು ಕಡಿತಗೊಳಿಸಲಾಗುತ್ತದೆ ಎಂದು ಪ್ರಕಟಿಸಿದ್ದಾರೆ. ಪ್ರಫೆÇೀಷನಲ್ ಫೀ, ಕ್ಯಾಂಟ್ರಾಕ್ಟ್ ಪೇಮೆಂಟ್, ಬಡ್ಡಿ, ಬಾಡಿಗೆ, ಡಿವಿಡೆಂಡ್, ಕಮಿಷನ್, ಬ್ರೋಕರೇಜ್ ಸೇರಿದಂತೆ ಎಲ್ಲವೂ ಟಿಡಿಎಸ್ ಕಡಿತಕ್ಕೆ ಅನ್ವಯವಾಗಲಿದೆ. ಈ ಕಡಿತದ ಅನ್ವಯ ನಾಳೆಯಿಂದ ಮಾರ್ಚ್ 31, 2021ರವರೆಗೆ ಇರಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 50 ಸಾವಿರ ಕೋಟಿ ಹೊರೆ ಆಗಲಿದೆ. ಇನ್‍ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಗೆ ಈ ಮೊದಲು ಜುಲೈ 31ರಿಂದ ಅಕ್ಟೋಬರ್ 31ರವರೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಈಗ ನವೆಂಬರ್ 30ರವರೆಗೆ ವಿಸ್ತರಿಸಲಾ ಗಿದೆ. ಟ್ಯಾಕ್ಸ್ ಆಡಿಟ್ ಅವಧಿಯನ್ನು ಸೆಪ್ಟೆಂ ಬರ್ 30ರಿಂದ ಅಕ್ಟೋಬರ್ 31ರವರೆಗೆ ವಿಸ್ತರಿ ಸಲಾಗಿದೆ. ವಿವಾದ್ ಸೇ ವಿಶ್ವಾಸ್ ಯೋಜನೆ ಯಡಿಯಲ್ಲಿ ಹೆಚ್ಚುವರಿ ಮೊತ್ತವಿಲ್ಲದೇ ಪಾವತಿ ಸಲು ಅವಕಾಶ ನೀಡಿದ್ದು, 31ನೇ ಡಿಸೆಂಬರ್ 2020ರವರೆಗೆ ಅವಧಿ ವಿಸ್ತರಿಸಲಾಗಿದೆ.

Translate »