ಬಿಜೆಪಿ ಕಾರ್ಯಕರ್ತರಆಕ್ರೋಶದ ನಡುವೆ ಮುಖಂಡ ಪ್ರವೀಣ್ ನೆಟ್ಟಾರುಅಂತ್ಯಕ್ರಿಯೆ
News

ಬಿಜೆಪಿ ಕಾರ್ಯಕರ್ತರಆಕ್ರೋಶದ ನಡುವೆ ಮುಖಂಡ ಪ್ರವೀಣ್ ನೆಟ್ಟಾರುಅಂತ್ಯಕ್ರಿಯೆ

July 28, 2022

ಮಂಗಳೂರು,ಜು.27-ನಿನ್ನೆದುಷ್ಕರ್ಮಿ ಗಳಿಂದ ಹತ್ಯೆಗೀಡಾದಬಿಜೆಪಿ ಯುವ ಮುಖಂಡ ಪ್ರವೀಣ್‍ಕುಮಾರ್ ನೆಟ್ಟಾರುಅಂತ್ಯಕ್ರಿಯೆಇಂದು ಸ್ವಗ್ರಾಮ ಬೆಳ್ಳಾರೆನಲ್ಲಿ ನಡೆ ಯಿತು. ಪ್ರವೀಣ್ ಮೃತದೇಹದ ಮೆರವಣಿಗೆ ಹಾಗೂ ಅಂತ್ಯಸಂಸ್ಕಾರದ ವೇಳೆ ಬಿಜೆಪಿ ಹಾಗೂ ಹಿಂದೂ ಪರಕಾರ್ಯಕರ್ತರುಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್‍ಕಾರನ್ನು ಪಲ್ಟಿ ಮಾಡಲು ಪ್ರಯತ್ನಿಸಿದರು. ಉದ್ರಿಕ್ತರುಕಲ್ಲುತೂರಾಟ ನಡೆಸಿದ್ದು, ಪೊಲೀಸರು ಲಾಠಿಚಾರ್ಜ್ ಮಾಡಿ ಪರಿಸ್ಥಿತಿ ತಹಬದಿಗೆ ತಂದರು. ಸದ್ಯ ಬೆಳ್ಳಾರೆಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಪ್ರವೀಣ್ ಮೃತದೇಹವನ್ನು ಪುತ್ತೂರಿನಿಂದ ಮೆರವಣಿಗೆ ಮೂಲಕ ಅವರ ಸ್ವಗ್ರಾಮಕ್ಕೆತರಲಾಯಿತು. ಸಾರ್ವಜನಿಕರಅಂತಿಮದರ್ಶ ನದ ಬಳಿಕ ಬಿಲ್ಲವ
ಸಂಪ್ರದಾಯದಂತೆಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮಂತ್ರ ಪಠಣದ ಬಳಿಕ ಮನೆ ಸಮೀಪದಲ್ಲೇ ಪ್ರವೀಣ್‍ಚಿತೆಗೆ ಮೂವರು ಮಾವಂದಿರಾದ ಶೀನಪ್ಪ ಪೂಜಾರಿ, ಲಿಂಗಪ್ಪ ಪೂಜಾರಿ, ಲೋಕೇಶ್ ಪೂಜಾರಿಅಗ್ನಿ ಸ್ಪರ್ಶ ಮಾಡಿದ್ದಾರೆ.

ಆಕ್ರೋಶ: ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ದಕ್ಷಿಣಕನ್ನಡಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು ಹಿಂದೂ ಪರಕಾರ್ಯಕರ್ತರು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಳ್ಳಾರೆಯಲ್ಲಿ ಪ್ರತಿಭಟನೆ ವೇಳೆ ಹಿಂದೂಕಾರ್ಯಕರ್ತರು ಹಾಗೂ ಪೆÇಲೀಸರ ನಡುವೆ ವಾಗ್ವಾದ ನಡೆದಿದೆ. ಪ್ರತಿಭಟನಾಕಾರರುಕಲ್ಲುತೂರಾಟ ನಡೆಸಿದ್ದರಿಂದ ಗುಂಪನ್ನುಚದುರಿಸಲು ಪೆÇಲೀಸರು ಲಾಠಿ ಪ್ರಹಾರ ನಡೆಸಿದರು. ಲಾಠಿಚಾರ್ಚ್‍ನಿಂದಾಗಿ ಹಲವು ಕಾರ್ಯಕರ್ತರಿಗೆಗಾಯವಾಗಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‍ಕಟೀಲ್, ಸಚಿವ ಸುನೀಲ್‍ಕುಮಾರ್, ಆರ್‍ಎಸ್‍ಎಸ್ ಮುಖಂಡಕಲ್ಲಡ್ಕ ಪ್ರಭಾಕರ್ ಭಟ್ ಬೆಳ್ಳಾರೆ ಗ್ರಾಮಕ್ಕೆ ಭೇಟಿ ನೀಡಿ ಮೃತ ಪ್ರವೀಣ್ ನೆಟ್ಟಾರುಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ಯತ್ನಿಸಿದ್ದರು. ಈ ವೇಳೆ ಹಿಂದೂಕಾರ್ಯಕರ್ತರು ನಳಿನ್ ಕುಮಾರ್‍ಕಟೀಲ್‍ಕಾರಿಗೆ ಮುತ್ತಿಗೆ ಹಾಕಿದರು. ಆಕ್ರೋಶಗೊಂಡಕಾರ್ಯಕರ್ತರುಕಟೀಲ್‍ಅವರಕಾರನ್ನು ಪಲ್ಟಿ ಮಾಡಲು ಯತ್ನಿಸಿದ್ದು ಸಾಧ್ಯವಾಗದೆ ಟೈರ್‍ಗಳಿಂದ ಗಾಳಿ ಹೊರಬಿಟ್ಟರು.

ಅಂತ್ಯಸಂಸ್ಕಾರದ ವೇಳೆ ಭಾಷಣ ಮಾಡಲು ಆರಂಭಿಸಿದ ಕಲ್ಲಡ್ಕ ಪ್ರಭಾಕರ್ ಭಟ್‍ಅವರನ್ನುತೀವ್ರತರಾಟೆತೆಗೆದುಕೊಂಡ ಹಿಂದೂ ಪರಕಾರ್ಯಕರ್ತರು ನಳೀನ್ ಕುಮಾರ್‍ಕಟೀಲ್, ಸುನೀಲ್‍ಕುಮಾರ್ ಹಾಗೂ ಸರ್ಕಾರದ ವಿರುದ್ಧಘೋಷಣೆಕೂಗಿದರು. ಕಾರ್ಯಕರ್ತರಆಕ್ರೋಶದ ಮುಂದೆ ಏನೂ ಮಾತನಾಡಲು ಸಾಧ್ಯವಾಗದೇ ಮುಖಂಡರು ಸುಮ್ಮನೆ ಕುಳಿತುಕೊಳ್ಳಬೇಕಾಯಿತು. ಅತ್ತ ನಳೀನ್ ಕುಮಾರ್‍ಕಟೀಲ್‍ಕಾರನ್ನುಕಾರ್ಯಕರ್ತರು ಪಲ್ಟಿ ಮಾಡಲು ಯತ್ನಿಸಿ, ಪಂಕ್ಷರ್ ಮಾಡಿದ್ದರಿಂದಎಚ್ಚೆತ್ತುಕೊಂಡ ಪೊಲೀಸರು, ಮುಖಂಡರಿಗೆರಕ್ಷಣೆ ನೀಡಿ ಸ್ಥಳದಿಂದ ಕರೆದೊಯ್ದರು.

Translate »