ಸುಳ್ಯಾದಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆಗೆ ಪಕ್ಷದಲ್ಲೇತೀವ್ರಆಕ್ರೋಶ ದೊಡ್ಡಬಳ್ಳಾಪುರ ಜನೋತ್ಸವರದ್ದು
News

ಸುಳ್ಯಾದಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆಗೆ ಪಕ್ಷದಲ್ಲೇತೀವ್ರಆಕ್ರೋಶ ದೊಡ್ಡಬಳ್ಳಾಪುರ ಜನೋತ್ಸವರದ್ದು

July 28, 2022

ಬೆಂಗಳೂರು, ಜು.27-ದಕ್ಷಿಣಕನ್ನಡದಲ್ಲಿ ಮಂಗಳವಾರ ರಾತ್ರಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಬಸವ ರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಒಂದು ವರ್ಷ ಪೂರೈಸಿದ ಸಂಭ್ರಮಕ್ಕಾಗಿಗುರುವಾರ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದಜನೋತ್ಸವಕಾರ್ಯಕ್ರಮವನ್ನುರದ್ದು ಮಾಡಿರುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಇಂದು ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟೂರುಅಂತ್ಯಕ್ರಿಯೆ ವೇಳೆ ಬಿಜೆಪಿ ಕಾರ್ಯಕರ್ತರುಆಕ್ರೋಶ ವ್ಯಕ್ತಪಡಿಸಿ, ಪಕ್ಷದರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್‍ಅವರಕಾರನ್ನೇ ಜಖಂಗೊಳಿಸಲು ಮುಂದಾಗಿದ್ದು, ಹಾಗೂ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಯುವಮೋರ್ಚಾ ಪದಾಧಿಕಾರಿಗಳು ರಾಜೀನಾಮೆಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರಾತ್ರಿ 12.30ಕ್ಕೆ ತುರ್ತು ಸುದ್ದಿಗೋಷ್ಠಿ ಕರೆದು ದೊಡ್ಡಬಳ್ಳಾಪುರದ ಜನೋತ್ಸವಕಾರ್ಯಕ್ರಮ ಹಾಗೂ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಸರ್ಕಾರಿಕಾರ್ಯಕ್ರಮ ವನ್ನು ರದ್ದುಪಡಿಸಿರುವುದಾಗಿ ಪ್ರಕಟಿಸಿದರು. ನಿನ್ನೆರಾತ್ರಿ ಪ್ರವೀಣ್ ಹತ್ಯೆಯಾದ ಸುದ್ದಿ ಕೇಳಿ ಬಹಳ ಸಂಕಟವಾಯಿತು. ರಾತ್ರಿಇಲ್ಲಿವರೆಗೆ ಪೊಲೀಸ್ ಅಧಿಕಾರಿಗಳಿಗೆ ಹಲವಾರು ಸೂಚನೆಗಳನ್ನು ಕೊಟ್ಟಿದ್ದೇನೆ. ಪ್ರವೀಣ್ ಹತ್ಯೆಅಮಾನವೀಯಕೃತ್ಯವಾಗಿದ್ದು, ಶಿವಮೊಗ್ಗದಲ್ಲಿ ಹರ್ಷನಕೊಲೆಯಾದ ಕೆಲವೇ ತಿಂಗಳಲ್ಲಿ ಪ್ರವೀಣ್ ಕೊಲೆ ನಡೆದಿ ರುವುದು ಮನಸ್ಸಿಗೆ ಘಾಸಿಯುಂಟು ಮಾಡಿದೆ. ಪಕ್ಷದರಾಜ್ಯಾಧ್ಯಕ್ಷಕಟೀಲ್‍ಅವರು ಬೆಳ್ಳಾರೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಬಂದಿದ್ದಾರೆ. ನಾಳೆ ಯಡಿಯೂರಪ್ಪನವರ ಸರ್ಕಾರಅಧಿಕಾರಕ್ಕೆ ಬಂದು 3 ವರ್ಷತುಂಬುತ್ತಿದೆ.

ಈ ಹಿನ್ನೆಲೆಯಲ್ಲೇ ನಮ್ಮ ಸರ್ಕಾರಕೈಗೊಂಡಜನಪರ ಕಾರ್ಯಕ್ರಮಗಳ ವಿವರಣೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಭರವಸೆ ನೀಡಲುಜನೋತ್ಸವಏರ್ಪಡಿಸಲಾಗಿತ್ತೇ ಹೊರತು, ಸಂಭ್ರಮಿಸುವುದಕ್ಕಾಗಿಅಲ್ಲಎಂದರು. ಬೆಳಗ್ಗೆಯಿಂದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರೂಇಂದು ಪ್ರವೀಣ್‍ಕುಟುಂಬದವರಆಕ್ರಂದನ ಹಾಗೂ ಈ ಹಿಂದೆ ಹರ್ಷನಕುಟುಂಬದವರಆಕ್ರಂದನವನ್ನು ನೋಡಿ ನಾಳೆ ಜನೋತ್ಸವಕಾರ್ಯಕ್ರಮ ನಡೆಸಲು ಮನಸ್ಸುಒಪ್ಪಲಿಲ್ಲ. ಹೀಗಾಗಿ ಮನಸಾಕ್ಷಿಗನುಗುಣವಾಗಿ ನಾಳಿನ ಕಾರ್ಯಕ್ರಮವನ್ನುರದ್ದುಪಡಿಸಲಾಗಿದೆಎಂದು ಮುಖ್ಯಮಂತ್ರಿಗಳು ಹೇಳಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಚಿವಡಾ. ಕೆ. ಸುಧಾಕರ್ ಉಪಸ್ಥಿತರಿದ್ದರು.

Translate »