ಸುಳ್ಯದಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿಮೈಸೂರಲ್ಲಿ ಬಿಜೆಪಿ ಪ್ರತಿಭಟನೆ
ಮೈಸೂರು

ಸುಳ್ಯದಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿಮೈಸೂರಲ್ಲಿ ಬಿಜೆಪಿ ಪ್ರತಿಭಟನೆ

July 29, 2022

ಮೈಸೂರು,ಜು.28(ಪಿಎಂ)- ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬಿಜೆಪಿ ನಗರ ಮತ್ತು ಜಿಲ್ಲಾ ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಗಾಂಧಿಚೌಕದಲ್ಲಿ ಜಮಾ ಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಹಂತಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಂತಕರು ದೇಶದ್ರೋಹಿಗಳು ಎಂದು ಕಿಡಿಕಾರಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮೇಯರ್ ಸಂದೇಶ ಸ್ವಾಮಿ, ಇಂದು ಹಿಂದೂ ಪರ ಕಾರ್ಯ ಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬಗ್ಗೆ ಹಂತಕ ಸಮುದಾಯದವರು ಈ ರೀತಿಯ ಕ್ರೌರ್ಯ ಎಷ್ಟು ಸರಿ ಎಂದು ಯೋಚನೆ ಮಾಡಬೇಕು. ಈ ಹತ್ಯೆ ವಿರುದ್ಧ ಜಾತ್ಯಾತೀತ ಮತ್ತು ಧರ್ಮಾತೀತ ಹೋರಾಟ ನಡೆಯಬೇಕು. ಅಲ್ಪಸಂಖ್ಯಾ ತರು, ಹಿಂದುಳಿದವರು ಸೇರಿದಂತೆ ಎಲ್ಲರೂ ಈ ಹತ್ಯೆಯನ್ನು ಒಕ್ಕೊರಲಿನಿಂದ ಖಂಡಿಸ ಬೇಕು ಎಂದು ಮನವಿ ಮಾಡಿದರು.

ಎಷ್ಟೇ ಕಠಿಣ ಕಾನೂನು ಕ್ರಮ ಕೈಗೊಂಡರು ಹಾಗೂ ಮುನ್ನೆಚ್ಚರಿಕೆ ವಹಿಸಿದರೂ ಹಿಂದೂಪರ ಕಾರ್ಯಕರ್ತರ ಹತ್ಯೆ ನಡೆ ಯುತ್ತಲೇ ಇರುವುದು ದುರ್ದೈವ. ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಎನ್‍ಆರ್ ವಿಧಾನಸಭಾ ಕ್ಷೇತ್ರದ ನಮ್ಮ ಕಾರ್ಯ ಕರ್ತರು ಜಾಗೃತರಾಗಿ ಇರಬೇಕು ಎಂದು ಕೋರಿದರು. ಸರ್ಕಾರ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಸರ್ಕಾರ ಇದ್ದರೂ ಈ ಹತ್ಯೆ ನಡೆದಿರುವುದು ಆತಂಕ ಕಾರಿ. ಮೈಸೂರು ಸೇರಿದಂತೆ ಇಡೀ ರಾಜ್ಯದಲ್ಲಿ ಎಲ್ಲೆಲ್ಲಿ ಇಂತಹ ಹಂತಕರು ಅಡಗಿ ಕುಳಿತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಬೇಸತ್ತು ಎನ್‍ಆರ್ ಕ್ಷೇತ್ರದ ಪಕ್ಷದ ಕಾರ್ಯ ಕರ್ತರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಅವರ ನೋವು ನನಗೆ ಅರ್ಥ ವಾಗುತ್ತದೆ. ರಾಜೀನಾಮೆ ನೀಡಿರುವ ಎಲ್ಲರೂ ಹಿಂಪಡೆಯಬೇಕು ಎಂದು ಕೋರಿದರು.

ಪಾಲಿಕೆ ಆಡಳಿತ ಪಕ್ಷದ ನಾಯಕ ಶಿವಕುಮಾರ್ ಮಾತನಾಡಿ, ಇಂದು ಅತ್ಯಂತ ನೋವಿನಿಂದ ಇಲ್ಲಿ ಸೇರಿದ್ದೇವೆ. ಒಂದು ಸತ್ಯ ಸಂಗತಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಪ್ರವೀಣ್ ಕೊಲೆ ಕೇವಲ ಬಿಜೆಪಿ ಮುಖಂಡ ಎನ್ನುವ ಕಾರಣಕ್ಕೆ ನಡೆದಿಲ್ಲ. ಒಬ್ಬ ಹಿಂದೂ ಕೊಲೆ ಮೂಲಕ ಹಿಂದೂಪರ ಹೋರಾಟ ಹತ್ತಿಕ್ಕಬೇಕು ಎಂಬ ಉದ್ದೇಶ ಇಲ್ಲಿ ಅಡ ಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ಬಿಜೆಪಿಯಲ್ಲಿ ಒಂದು ಸಿದ್ಧಾಂತಕ್ಕೆ ಬದ್ಧವಾಗಿ ಕಾರ್ಯಕರ್ತರು ಹಿಂದೂ ಪರ ವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹಿಂದೂಪರವಾಗಿ ಹೋರಾಟ ಮಾಡು ವವರ ಹತ್ಯೆಗಳು ಆಗಾಗ್ಗೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಕಾರ್ಯ ಕರ್ತರಲ್ಲಿ ಆಕ್ರೋಶವಿದೆ. ಹಾಗಾಗಿ ಈ ಹತ್ಯೆಯಿಂದ ಬೇಸತ್ತು ಎನ್‍ಆರ್ ಕ್ಷೇತ್ರದ ಯುವ ಮೋರ್ಚಾದ ಏಳೆಂಟು ಮಂದಿ ವಿವಿಧ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಅವರ ಮನವೊಲಿಸಿ ಮತ್ತೆ ಅದೇ ಸ್ಥಾನ ಗಳಲ್ಲಿ ಮುಂದುವರೆಯುವಂತೆ ಮಾಡು ತ್ತೇವೆ ಎಂದು ತಿಳಿಸಿದರು.

ನಮ್ಮ ಗಡಿ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‍ಗೆ ಕ್ರಮ ಕೈಗೊಳ್ಳ ಬೇಕು. ಆ ಮೂಲಕ ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿ, ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂಬುದು ನಮ್ಮ ಪ್ರತಿಭಟನೆ ಒತ್ತಾಯ ವಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮ ಶೇಖರ್, ಪಾಲಿಕೆ ಬಿಜೆಪಿ ಸದಸ್ಯರಾದ ಎಂ.ಯು.ಸುಬ್ಬಯ್ಯ, ಪ್ರಮೀಳಾ ಭರತ್, ರಂಗಸ್ವಾಮಿ, ಡಾ.ಅಶ್ಚಿನಿ, ನಾಮನಿರ್ದೇ ಶಿತ ಸದಸ್ಯರಾದ ರಮೇಶ್, ಜಗದೀಶ್, ಮುಖಂಡರಾದ ಬಿ.ಎಂ.ರಘು, ಜಯ ಪ್ರಕಾಶ್ (ಜೆಪಿ), ಗಿರಿಧರ್, ಜೋಗಿ ಮಂಜು, ಸು.ಮುರಳಿ, ಡಾ.ಅನಿಲ್ ಥಾಮಸ್, ಕುಮಾರ್‍ಗೌಡ ಮತ್ತಿತರ ಮುಖಂಡರು, ಕಾರ್ಯಕರ್ತರು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »