ಇಂದು ಶಾರದಾವಿಲಾಸ ಕಾಲೇಜಿನ ಅಮೃತ ಮಹೋತ್ಸವ; ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಂದ ಉದ್ಘಾಟನೆ
ಮೈಸೂರು

ಇಂದು ಶಾರದಾವಿಲಾಸ ಕಾಲೇಜಿನ ಅಮೃತ ಮಹೋತ್ಸವ; ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಂದ ಉದ್ಘಾಟನೆ

October 8, 2020

ಕೌಶಲಾಧಾರಿತ 4 ಹೊಸ ಕೋರ್ಸ್‍ಗಳ ಆರಂಭ 4 ವರ್ಷಗಳ ಬಿ.ಎಸ್‍ಸಿ ಆನರ್ಸ್ ರಾಜ್ಯದಲ್ಲೇ ಪ್ರಥಮ
ಮೈಸೂರು, ಅ.7(ಆರ್‍ಕೆಬಿ)- ಶಾರದಾ ವಿಲಾಸ ಕಾಲೇಜಿನ ಅಮೃತ ಮಹೋತ್ಸವ ದಲ್ಲಿ ಕೌಶಲಾಧಾರಿತ ಶೈಕ್ಷಣಿಕ ಕೋರ್ಸ್ ಗಳ ಉದ್ಘಾಟನೆಯನ್ನು ಕೇಂದ್ರ ರಾಸಾಯ ನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಗುರುವಾರ ಮಧ್ಯಾಹ್ನ 3 ಗಂಟೆಗೆ ನೆರವೇರಿಸಲಿದ್ದಾರೆ ಎಂದು ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ ಇಂದಿಲ್ಲಿ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿದ ಅವರು, ಯುವಜನರ ಕೌಶಲಾಭಿವೃದ್ಧಿಗಾಗಿ ಸೃಜನಶೀಲತೆ ಮತ್ತು ಕಲ್ಪನಾಶಕ್ತಿ ಹೆಚ್ಚಿಸುವ ಕೌಶಲಾಧಾರಿತ ಕೋರ್ಸ್‍ಗಳನ್ನು ಆರಂಭಿಸಲಾಗುತ್ತಿದೆ. ರಾಜ್ಯ ದಲ್ಲಿಯೇ ಮೊದಲ ಬಾರಿಗೆ ಡೇಟಾ ಸೈನ್ಸ್ ಮತ್ತು ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ವಿಷಯಗಳಲ್ಲಿ 4 ವರ್ಷಗಳ ಬಿ.ಎಸ್‍ಸಿ ಆನರ್ಸ್, 3 ವರ್ಷಗಳ ಬಿ.ವೊಕ್ ಪದವಿ ಯನ್ನು ಸಾಫ್ಟ್‍ವೇರ್ ಡೆವ್‍ಲಪ್‍ಮೆಂಟ್ ಮತ್ತು ರೋಬೊಟಿಕ್ಸ್, ವರ್ಚುವಲ್ ರಿಯಾ ಲಿಟಿ ವಿಷಯಗಳÀಲ್ಲಿ ಪ್ರಾರಂಭಿಸಲಾಗುತ್ತಿದೆ. ಪಿಜಿ ಡಿಪ್ಲೊಮಾ ಇನ್ ಇ-ಕಾಮರ್ಸ್, ಡಿಜಿಟೈಸೇಷನ್ ಎಂಬ ವಿಷಯದಲ್ಲಿ ಡಿಪ್ಲೊಮಾ ಇನ್ ರೋಬೊಟಿಕ್ಸ್ ಆರಂಭಿಸಲಾಗುತ್ತಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್‍ಸಿಂಹ, ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ತನ್ವೀರ್ ಸೇಠ್, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗೌರವ ಕಾರ್ಯ ದರ್ಶಿ ಹೆಚ್.ಕೆ.ಶ್ರೀನಾಥ್, ಮಾರ್ಗ ದರ್ಶಕ ಶ್ರೀನಿವಾಸ್ ರಾಘವನ್, ಎಸ್. ನಾಗರಾಜು, ಸಾರ್ವಜನಿಕ ಸಂಪರ್ಕಾ ಧಿಕಾರಿ ರಾಜೇಂದ್ರಪ್ರಸಾದ್ ಉಪಸ್ಥಿತರಿದ್ದರು.

Translate »