ಡಿಕೆಶಿಗೆ ಸಮನ್ಸ್
ಮೈಸೂರು

ಡಿಕೆಶಿಗೆ ಸಮನ್ಸ್

October 7, 2020

ಬೆಂಗಳೂರು, ಅ.6(ಕೆಎಂಶಿ)- ಆದಾಯಕ್ಕೂ ಮೀರಿದ ಆಸ್ತಿ ಪತ್ತೆಯಾಗಿ ರುವ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ. ಇನ್ನೆರಡು ದಿನದೊಳಗಾಗಿ ಬಳ್ಳಾರಿ ರಸ್ತೆಯಲ್ಲಿರುವ ನಮ್ಮ ಕಚೇರಿಗೆ ಖುದ್ದು ಹಾಜರಾಗುವಂತೆ ಸೂಚಿಸಿದೆ.

ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಹಾಗೂ ಅವರ ಸ್ನೇಹಿತರ ಮನೆ ಮತ್ತು ಕಚೇರಿಗಳ ಮೇಲೆ ನಿನ್ನೆ ಏಕಕಾಲದಲ್ಲಿ ದಾಳಿ ನಡೆಸಿ, ಕೆಲವು ದಾಖಲೆಗಳನ್ನು ವಶಪಡಿಸಿಕೊಂಡರು. ಪ್ರಾಥಮಿಕ ತನಿಖೆ ಪ್ರಕಾರ ತಮ್ಮ ಆದಾಯಕ್ಕಿಂತ 70 ಕೋಟಿ ರೂಗೂ. ಹೆಚ್ಚು ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಮಾಹಿತಿಯನ್ನು ಸಿಬಿಐ ಬಿಡುಗಡೆ ಮಾಡಿತ್ತು. ದಾಳಿ ನಡೆಸಿದ ಬೆನ್ನಲ್ಲೇ ಇಂದು ಸಿಬಿಐ ಸಮನ್ಸ್ ಜಾರಿ ಮಾಡಿದೆ. ರಾಜ್ಯದ 9, ದೆಹಲಿಯಲ್ಲಿ 4 ಹಾಗೂ ಮುಂಬೈನಲ್ಲಿ ಒಂದು ಕಡೆ ದಾಳಿ ನಡೆಸಿದ ಸಂದರ್ಭದಲ್ಲಿ ಸಂಗ್ರಹಿಸಿದ ಎಲ್ಲಾ ದಾಖಲೆಗಳನ್ನು ಬೆಂಗಳೂರು ಕಚೇರಿಯಲ್ಲಿ ಶೇಖರಿಸಲಾಗಿದೆ. ದಾಖಲೆಗಳನ್ನು ಪರಿಶೀಲಿಸಿದ ನಂತರ ಮತ್ತಷ್ಟು ವಿವರಣೆ ಪಡೆಯಲು ಸಮನ್ಸ್ ಜಾರಿ ಮಾಡಲಾಗಿದೆ. ವಿವರಣೆ ಸಂದರ್ಭದಲ್ಲಿ ಸಮರ್ಪಕವಾದ ಉತ್ತರ ದೊರೆಯದಿದ್ದರೆ,

ಸಿಬಿಐ ಅಧಿಕಾರಿಗಳು ಶಿವಕುಮಾರ್ ಅವರನ್ನು ಬಂಧಿಸುವ ಸಾಧ್ಯತೆ ಹೆಚ್ಚಿದೆ. ಸಿಬಿಐನಿಂದ ಮಾಹಿತಿ ಬರುತ್ತಿದ್ದಂತೆ ಶಿವಕುಮಾರ್ ಕಾನೂನು ತಜ್ಞರೊಟ್ಟಿಗೆ ಇಂದು ಇಡೀ ದಿನ ಸಮಾ ಲೋಚನೆ ನಡೆಸಿದರು. ವಕೀಲರ ಸಲಹೆಯಂತೆ ಸಿಬಿಐ ಕಚೇರಿಗೆ ತೆರಳಲಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಇಲ್ಲ. ನಿನ್ನೆ ನಡೆದ ದಾಳಿ ಸಂದರ್ಭದಲ್ಲಿ ದಾಖಲೆಗಳಷ್ಟೇ ಅಲ್ಲದೆ, 57 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಶಿವಕುಮಾರ್ ಹುಟ್ಟೂರಾದ ದೊಡ್ಡ ಆಲಹಳ್ಳಿ ಯಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಕೆಲವು ಮಹತ್ವದ ದಾಖಲೆಗಳು ದೊರೆತಿವೆ ಎಂದು ಹೇಳಲಾಗಿದೆ. ಶಿವಕುಮಾರ್ ಕಳೆದ ಐದು ವರ್ಷದ ಅವಧಿಯಲ್ಲಿ 33.92 ಕೋಟಿ ರೂ. ಆದಾಯ ಹೊಂದಿದ್ದಾರೆ. ಆದರೆ ಅದು 128.60 ಕೋಟಿ ರೂ.ಗೆ ಏರಿಕೆ ಯಾಗಿದೆ. ಅವರ ಆದಾಯಕ್ಕಿಂತ ಹೆಚ್ಚು ಸಂಗ್ರಹವಾಗಿರುವುದರಿಂದ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಿದ್ದಾರೆ. ಸಿದ್ದರಾಮಯ್ಯ ಆಡಳಿತದಲ್ಲಿ ಇಂಧನ ಸಚಿವರಾಗಿಯು, ಹೆಚ್.ಡಿ.ಕುಮಾರಸ್ವಾಮಿ ಆಡಳಿತದಲ್ಲಿ ಜಲಸಂಪನ್ಮೂಲ ಸಚಿವರಾಗಿಯು ಈ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಅವರ ಆದಾಯ ಹೆಚ್ಚಾಗಿದೆ ಎಂಬ ಗುಮಾನಿ ಸಿಬಿಐದು. ಈ ಬಗ್ಗೆ ತನಿಖೆ ನಡೆಯಲಿದೆ. ಕಳೆದ 14 ತಿಂಗಳ ಹಿಂದೆ ಶಿವಕುಮಾರ್ ಆದಾಯ ತೆರಿಗೆ ಮತ್ತು ಇಡಿ ಇಲಾಖೆಯಿಂದ ತನಿಖೆಗೊಳಪಟ್ಟು, ಸೆರೆವಾಸ ಅನುಭವಿ ಸಿದ್ದರು. ಇದೀಗ ಸಿಬಿಐ ಶಿವಕುಮಾರ್ ಅವರ ಆಸ್ತಿಪಾಸ್ತಿಗಳ ಬಗ್ಗೆ ತನಿಖೆ ಕೈಗೆತ್ತಿಕೊಂಡಿದೆ.

ಮಂಡ್ಯದಲ್ಲಿ ಅ.10ರಂದು ರಾಜ್ಯ ಮಟ್ಟದ ರೈತರ ಸಮ್ಮೇಳನ
ಬೆಂಗಳೂರು: ರಾಜ್ಯ ಮಟ್ಟದ ರೈತರ ಸಮ್ಮೇಳನ ವನ್ನು ಅ.10ರಂದು ಮಂಡ್ಯದಲ್ಲಿ ಮಾಡಲು ನಿರ್ಧರಿ ಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಶಿವಕುಮಾರ್ ಅವರು, ಎಐಸಿಸಿ ಆದೇಶದಂತೆ ರಾಜ್ಯ ಮಟ್ಟದ ರೈತರ ಸಮ್ಮೇಳನವನ್ನು ದಾವಣಗೆರೆಯಲ್ಲಿ ಮಾಡಲು ನಿರ್ಧ ರಿಸಿದ್ದೆವು. ಆದರೆ ಚುನಾವಣಾ ಆಯೋಗದ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯ ಕ್ರಮವನ್ನು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಅ.10ರ ಬೆಳಗ್ಗೆ 11 ಗಂಟೆಗೆ ನಡೆಸಲಾಗುವುದು.

ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ರೈತರನ್ನು ಬಂಡವಾಳಶಾಹಿಗಳ ನಿಯಂತ್ರಣಕ್ಕೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಸೆ.25ರಂದು ಪ್ರತಿಭಟನೆ ಮಾಡಿದ್ದೆವು. ಅ.2ರಂದು ಕಿಸಾನ್ ಮಜ್ದೂರ್ ದಿನ ಆಚರಿಸಿ ತಾಲೂಕು ಮಟ್ಟದಲ್ಲೂ ಹೋರಾಟ ಮಾಡಿ ದ್ದೆವು. ರೈತರ ಸಮ್ಮೇಳನ ಪಕ್ಷಾತೀತ ಕಾರ್ಯಕ್ರಮ. ಆರು ಜನ ರೈತ ಮುಖಂಡರು ಈ ಸಭೆಯಲ್ಲಿ ಮಾತನಾಡಲಿ ದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ ಭಾಗವಹಿಸಲಿದ್ದಾರೆ.

ಸಹಿ ಸಂಗ್ರಹ ಅಭಿಯಾನ: ರೈತ ವಿರೋಧಿ ಕಾಯ್ದೆ ಗಳ ವಿರುದ್ಧ ದೇಶಾದ್ಯಂತ ಸಹಿ ಸಂಗ್ರಹ ಅಭಿಯಾನ ಆರಂಭಿಸುತ್ತಿದ್ದೇವೆ. ನಮ್ಮ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ದೇಶನದಂತೆ 2 ಕೋಟಿ ಸಹಿ ಸಂಗ್ರಹಿಸಲಾಗು ವುದು. ಈ ಸಹಿಗಳುಳ್ಳ ಪತ್ರವನ್ನು ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಕಳುಹಿಸುತ್ತೇವೆ. ಅವರು ರಾಷ್ಟ್ರಪತಿ ಅವರಿಗೆ ಸಲ್ಲಿಸಲಿದ್ದಾರೆ. ಈ ರೈತ ವಿರೋಧಿ ಕಾಯ್ದೆಗಳ ರದ್ದತಿಗೆ ಮನವಿ ಮಾಡುತ್ತಾರೆ. ಈ ಅಭಿಯಾನದಲ್ಲಿ ಎಲ್ಲ ರೈತರು ಹಾಗೂ ಎಲ್ಲ ವರ್ಗದ ಜನ ಭಾಗವಹಿಸ ಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಗಾಯ ಆದವನಿಗೆ ಗೊತ್ತು ಆ ನೋವು… ಎದೆ ಮುಟ್ಟಿಕೊಂಡು ಭಾವುಕರಾದ ಡಿಕೆಶಿ
ಬೆಂಗಳೂರು, ಅ. 6- ನಿನ್ನೆ ನಡೆದ ಸಿಬಿಐ ರೇಡ್‍ನಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಹಳ ವ್ಯಥೆ ಪಟ್ಟಂತೆ ತೋರುತ್ತಿದೆ. ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದಾಗ ಡಿ.ಕೆ. ಶಿವಕುಮಾರ್ ಬಹಳ ಭಾವುಕರಾದರು. ಸಿಬಿಐ ದಾಳಿ ವಿಚಾರದ ಬಗ್ಗೆ ಮಾತನಾ ಡುವಾಗ ಅವರು ಎದೆ ಮುಟ್ಟಿಕೊಂಡು ಗಾಯ ಆಗಿರುವವನಿಗೆ ಗೊತ್ತು ಆ ಗಾಯದ ನೋವು.. ಒಳಗೆ ಎಷ್ಟು ನೋವಿದೆ ಅನ್ನೋದು ನನಗೆ ಮಾತ್ರ ಗೊತ್ತು. ಸಮಯ ಸಿಗಲಿ ಮಾತನಾಡೋಣ ಎಂದು ಹೇಳಿದರು. ಹಾಗೆಯೇ, ಸಿಬಿಐ ರೇಡ್ ವೇಳೆ ಸೀಜ್ ಆದ ವಸ್ತು ಗಳ ಬಗ್ಗೆ ಮಾಹಿತಿ ನೀಡಿದರು.

ನನ್ನ ಸಹೋದರನ ದೆಹಲಿ ಮನೆಯಲ್ಲಿ 1.5 ಲಕ್ಷ ರೂ, ನನ್ನ ಅಧಿಕೃತ ನಿವಾಸ ದಲ್ಲಿ 1.77 ಲಕ್ಷ ಹಣ, ನನ್ನ ಮನೆ ಪಕ್ಕದ ಕಚೇರಿಯಲ್ಲಿ 3.5 ಲಕ್ಷ, ನನ್ನ ಸ್ನೇಹಿತ ಹಾಗೂ ಉದ್ಯಮಿ ಸಚಿನ್ ನಾರಾಯಣ್ ಮನೆಯಲ್ಲಿ 50 ಲಕ್ಷ ರೂ ಸಿಕ್ಕಿದೆಯಂತೆ. ನನ್ನ ಕೋ ಬ್ರದರ್ ಶಶಿಕುಮಾರ್ ಮನೆ ಯಿಂದ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನನ್ನ ತಾಯಿ ಮನೆಯಲ್ಲಿ ಏನೂ ಸಿಕ್ಕಿಲ್ಲ. ಧವನಂ ಜುವೆಲರ್ಸ್‍ನ ಹರೀಶ್ ಮನೆಯಲ್ಲೂ ದಾಳಿ ಮಾಡಿದ್ದಾರೆ. ಅಲ್ಲಿ ಏನೂ ಹಣ ಸಿಕ್ಕಿಲ್ಲ. ಕೆಲ ದಾಖಲೆ ಪತ್ರಗಳನ್ನು ಕೊಂಡೊಯ್ದಿದ್ದಾರೆ. ಬಾಂಬೆ ಯಲ್ಲಿ ನನ್ನ ಮಗಳ ಹೆಸರಿನಲ್ಲಿ ಫ್ಲಾಟ್ ಇದೆ. ನಾವು ಅಲ್ಲಿ ಹೋಗಿ 6ವರ್ಷ ಆಯಿತು. ದೆಹಲಿಯಲ್ಲಿ ನನ್ನದು 2 ಮನೆ ಇದೆ. ನನ್ನ ಸಹೋದರನದ್ದೂ ಒಂದು ಮನೆ ಇದೆ. ಇದು ಸಿಬಿಐನವರ ಪಂಚ ನಾಮೆಯಲ್ಲಿ ಇರೋದು ಎಂದು ಡಿಕೆ ಶಿವಕುಮಾರ್ ವಿವರ ಬಿಚ್ಚಿಟ್ಟರು.

 

Translate »