ಮೈಸೂರು,ಅ.6(ಎಸ್‍ಬಿಡಿ)- ಬಿಜೆಪಿ ನಾಯಕರ ಮೇಲೆ ಸಿಬಿಐ ದಾಳಿ ಏಕೆ ನಡೆದಿಲ್ಲ? ಅವರೇನು ಸತ್ಯ ಹರಿಶ್ಚಂದ್ರರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ರಾಮಕೃಷ್ಣನಗರ ನಿವಾ ಸದ ಬಳಿ ಮಂಗಳವಾರ ಮಾಧ್ಯಮ ಗಳೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಮತ್ತೆ ಸಿಬಿಐ ದಾಳಿ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿದರು. ಬರೀ ಕಾಂಗ್ರೆಸ್‍ನವರ ಮೇಲೆ ಏಕೆ ಸಿಬಿಐ ದಾಳಿ ನಡೆಯುತ್ತಿದೆ? ಬಿಜೆಪಿಯವರ ಮೇಲೆ ಏಕೆ ನಡೆದಿಲ್ಲ. ಅವರೇನು ಸತ್ಯ ಹರಿಶ್ಚಂದ್ರರಾ. ವೈದ್ಯ ಕೀಯ ಉಪಕರಣಗಳ ವಿಚಾರವಾಗಿ ನಾನು ವಿಧಾನಸಭೆಯಲ್ಲಿ ಸಾಕಷ್ಟು ಆರೋಪ ಮಾಡಿದೆ. ಆ ವಿಚಾರವಾಗಿ ಏಕೆ ತನಿಖೆ ಮಾಡಲಿಲ್ಲ. ಕಾಂಗ್ರೆಸ್ ನಾಯಕರ ಟಾರ್ಗೆಟ್ ಮಾಡಿಲ್ಲ ಎನ್ನುವುದಾದರೆ ಬಿಜೆಪಿಯ ವರ ಮೇಲೂ ದಾಳಿ ಆಗಬೇಕಿತ್ತು. ನಾನು ಕಾನೂನಿನ ವಿರೋಧಿಯಲ್ಲ. ಆದರೆ ದಾಳಿ ನಡೆಸುತ್ತಿರುವ ಸಂದರ್ಭ ಯಾವುದು? ಡಿಕೆಶಿಯನ್ನೇ ಏಕೆ ಟಾರ್ಗೆಟ್ ಮಾಡಬೇಕು? ಎಂದು ಪ್ರಶ್ನಿಸಿ ದರಲ್ಲದೆ, ಬಿಜೆಪಿ ಯವರ ಮೇಲೂ ತನಿಖೆ ಆಗಲಿ ಎಂದು ಆಗ್ರಹಿಸಿದರು.
ಮೋದಿ, ಯೋಗಿ ವಿರುದ್ಧ ವಾಗ್ದಾಳಿ: ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಈ ಕೃತ್ಯದ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡಬೇಕಿತ್ತು. `ಬೇಟಿ ಬಜಾವೊ, ಬೇಟಿ ಪಡಾಹೋ’ ಏನಾಯ್ತೂ. ಈಗ ಬೇಟಿ ಹಠಾವೋ ಆಗೋಗಿದೆ. ದೆಹಲಿ ನಿರ್ಭಯ ಪ್ರಕರಣದಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಂಡಿತ್ತು. ಆದರೆ ಈಗ ಪೆÇಲೀಸರ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಂತ್ರಸ್ಥೆ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಹೋಗಿದ್ದ ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ ಮೇಲೆ ಹಲ್ಲೆ ಮಾಡಿಸಿದ್ದಾರೆ. ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಕಾವಿ ಹಾಕೋಕೆ ಅರ್ಹರಲ್ಲ. ಅವರ ಮೇಲೆ 27 ಕೇಸುಗಳಿವೆ. ಅಷ್ಟು ಕೇಸುಗಳಿದ್ದವರನ್ನು ರೌಡಿ ಶೀಟರ್ ಅಂತ ಕರೆಯಬೇಕು ತಾನೆ? ನೋಡಿ ಅವರೇ ಮುಖ್ಯಮಂತ್ರಿಯಾಗಿದ್ದಾರೆ. 19 ವರ್ಷದ ಯುವತಿ ಮೇಲೆ ಅತ್ಯಾಚಾರ, ಕೊಲೆಯಾಗಿದೆ. ಆದರೂ ಅಂತ ಘಟನೆ ನಡೆದೆ ಇಲ್ಲ ಎನ್ನುತ್ತಾರೆ. ಅವರೇನು ಮನುಷ್ಯರಾ? ಇವರಿಗೆ ಮಾನವೀಯತೆ ಇದೆಯಾ?. ಬಿಜೆಪಿಯವರಿಗೆ ಮರ್ಯಾದೆ ಇದ್ದರೆ ಕೂಡಲೇ ಯೋಗಿ ಆದಿತ್ಯನಾಥ್ ವಜಾ ಮಾಡಬೇಕೆಂದು ಕಿಡಿಕಾರಿದರು.
ಹೆಚ್‍ಡಿಕೆಗೂ ಟಾಂಗ್: ಶಿರಾದಲ್ಲಿ ಡಾ.ರಾಜೇಶ್‍ಗೌಡರನ್ನು ಬಿಜೆಪಿಗೆ ಸೇರಿಸಿ, ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರ ಸರ್ಕಾರವಿದ್ದಾಗಲೇ ನಾರಾಯಣಗೌಡ, ವಿಶ್ವನಾಥ್, ಗೋಪಾಲಯ್ಯ ಬಿಜೆಪಿಗೆ ಹೋದರು. ಆಗ ಅವರು ಒಳ ಒಪ್ಪಂದ ಮಾಡಿಕೊಂಡಿದ್ರಾ. ನನ್ನ ಮಗ ಡಾ.ಯತೀಂದ್ರ ಹಾಗೂ ಡಾ.ರಾಜೇಶ್ ಗೌಡ ಇಬ್ಬರೂ ವೈದ್ಯರಾಗಿದ್ದು ಇಬ್ಬರೂ ಸ್ನೇಹಿತರು ನಿಜ. ಆದರೆ ಅದು ರಾಜಕೀಯ ಸ್ನೇಹವಲ್ಲ. ಇದೆಲ್ಲಾ ಚುನಾವಣೆಗೋಸ್ಕರ ನೀಡುತ್ತಿರುವ ಹೇಳಿಕೆ. ನನಗೂ ಬಿಜೆಪಿಯಲ್ಲಿ ಹಲವರು ಸ್ನೇಹಿತರಿದ್ದಾರೆ. ಹಾಗಾದ್ರೆ ಸ್ನೇಹ ಮಾಡೋದೇ ತಪ್ಪಾ? ಸ್ವಲ್ಪ ಬುದ್ದಿವಂತಿಕೆ ಇಟ್ಟುಕೊಂಡು ಮಾತನಾಡಬೇಕು ಎಂದು ತಿರುಗೇಟು ನೀಡಿದರು.