ಬೆಂಗಳೂರು,ಸೆ.13(ಕೆಎಂಶಿ)- ಅತ್ಯಂತ ಸೂಕ್ಷ್ಮ ಪ್ರದೇಶವಾಗಿ ರುವ ಕೊಡಗಿನಲ್ಲಿ ಹೊರಭಾಗಗಳಿಂದ ಬಂದಿರುವವರ ಮೇಲೆ ತೀವ್ರ ನಿಗಾ ವಹಿಸಲು ಪೆÇಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ಜಿಲ್ಲೆಯು ಕೇರಳ ಗಡಿ ಭಾಗಕ್ಕೆ ಹೊಂದಿಕೊಂಡಿರುವುದರಿಂದ ಬೇರೆ ಬೇರೆ ರಾಜ್ಯಗಳಿಂದ ಆಗಮಿಸುತ್ತಾರೆ. ಅವರು ಎಲ್ಲಿಂದ ಬರುತ್ತಾರೆ, ಏನು ಮಾಡುತ್ತಾರೆ, ಅವರ ಚಲನವಲನಗಳ ಮೇಲೆ ಮಾಹಿತಿ ಕಲೆ ಹಾಕಲು ಪೆÇಲೀಸರಿಗೆ ಸೂಚಿಸ ಲಾಗಿದೆ ಎಂದರು. ಕೆಲವರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಕೇರಳಕ್ಕೆ ಹೋಗುವುದು ಇಲ್ಲವೇ ಕೇರಳದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿ ಇಲ್ಲಿಗೆ ಬರುವುದು ಸರ್ವೆ ಸಾಮಾನ್ಯವಾಗಿದೆ. ಹೀಗಾಗಿ ಇಂಥವರ ಮೇಲೆ ಹದ್ದಿನಕಣ್ಣಿ ಡಲು ಸೂಚಿಸಲಾಗಿದೆ ಎಂದರು.
ಕೊಡಗಲ್ಲಿ 95 ಸಿಸಿಟಿವಿ ಕ್ಯಾಮರಾ ಗಳನ್ನು ಅಳವಡಿಸಲಾಗಿದೆ. ಅಲ್ಲದೆ 10 ಸಿಸಿ ಕ್ಯಾಮರಾಗಳನ್ನು ಪೆÇಲೀಸ್ ಇಲಾಖೆಯಿಂದ ಹಾಕಲಾಗಿದೆ. ಸೋಮವಾರ ಪೇಟೆಯಲ್ಲಿ 48, ಕುಶಾಲನಗರದಲ್ಲಿ 55 ಸಿಸಿ ಕ್ಯಾಮರಾ ಗಳನ್ನು ಅಳವಡಿಸಲಾಗಿದೆ ಎಂದರು.
ಪೆÇಲೀಸ್ ಇಲಾಖೆಯಿಂದ ಅಳವಡಿಸಿ ಕೊಂಡಿರುವ ಕ್ಯಾಮರಾಗಳಿಗೆ ವಾರ್ಷಿಕ ನಿರ್ವಹಣೆ, ದುರಸ್ತಿಯನ್ನು ಗೃಹ ಇಲಾಖೆ ಯಿಂದ ಮಾಡಲಾಗುತ್ತಿದೆ. ಖಾಸಗಿಯಾಗಿ ಅಳವಡಿಸಿಕೊಂಡಿದ್ದರೆ ಖಾಸಗಿಯವರೇ ನಿರ್ವಹಣೆ ಮಾಡಬೇಕು. ಎಲ್ಲಾದರೂ ಕ್ಯಾಮರಾಗಳು ದುರಸ್ತಿಯಾಗಿ ಕಾರ್ಯ ನಿರ್ವಹಿಸದೆ ಇದ್ದರೆ ಪೆÇಲೀಸ್ ಠಾಣೆ ಗಮ ನಕ್ಕೆ ತನ್ನಿ ತಕ್ಷಣವೇ ಕ್ರಮ ಕೈಗೊಳ್ಳಲಿ ದ್ದೇವೆ ಎಂದು ಭರವಸೆ ನೀಡಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಅಪ ರಾಧಗಳನ್ನು ತಡೆಗಟ್ಟಲು ಖಾಸಗಿಯವರು, ಉದ್ಯಮಿಗಳು ಹಾಗೂ ವಾಣಿಜ್ಯ ಉದ್ಯಮಿ ಗಳಿಂದ ಸಿಸಿಟಿವಿ ಕ್ಯಾಮರಾಗಳನ್ನು ಅಳ ವಡಿಸಲಾಗುತ್ತದೆ ಎಂದು ಸದನಕ್ಕೆ ತಿಳಿಸಿ ದರು. ಈ ಹಂತದಲ್ಲಿ ಶಾಸಕ ಯು.ಟಿ. ಖಾದರ್ ಮತ್ತಿತರ ಶಾಸಕರು ಸಿಸಿ ಕ್ಯಾಮರಾ ಗಳನ್ನು ಅಳವಡಿಸಲು ಶಾಸಕರ ಕ್ಷೇತ್ರ ಅನು ದಾನ ಇಲ್ಲವೇ ಜಿಲ್ಲಾ ಖನಿಜ ನಿಧಿಯಿಂದ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲು ಅಧಿಸೂಚನೆ ಹೊರಡಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜ್ಞಾನೇಂದ್ರ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಅಪರಾಧವನ್ನು ತಡೆಗಟ್ಟಲು ನಾವು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.