ಪೌರಕಾರ್ಮಿಕರ ಧರಣಿ
ಮೈಸೂರು

ಪೌರಕಾರ್ಮಿಕರ ಧರಣಿ

September 15, 2022

ಮೈಸೂರು, ಸೆ.14(ಆರ್‍ಕೆಬಿ)- ಖಾಯಂ ನೌಕರರಿಗೆ ಗೃಹಭಾಗ್ಯ ಯೋಜನೆ ಯಡಿ ಜಿ+3 ಮಾದರಿಯ ಮನೆಗಳನ್ನು ನಿರ್ಮಿಸಿಕೊಡಲು ಜಯನಗರ (ಮಳಲ ವಾಡಿ)ದಲ್ಲಿ ಮುಡಾ ವತಿಯಿಂದ ಒಂದು ಎಕರೆ 20 ಗುಂಟೆ ಜಮೀನು ಮಂಜೂರಾಗಿದ್ದು, ಸದರಿ ಸ್ಥಳದಲ್ಲಿಯೇ ಮನೆಗಳನ್ನು ನಿರ್ಮಿಸಿಕೊಡಬೇಕು. ಪಾಲಿಕೆಯ ನೇರ ಪಾವತಿಯಡಿ ಕೆಲಸ ನಿರ್ವಹಿಸುತ್ತಿದ್ದು, ಮೃತಪಟ್ಟಿರುವ ಹಾಗೂ ನಿವೃತ್ತಿ ಹೊಂದಿರುವ ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬೇಕು. ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೈಸೂರು ಮಹಾನಗರಪಾಲಿಕೆಯ ಪೌರಕಾರ್ಮಿಕರ ಒಕ್ಕೂಟದ ಆಶ್ರಯದಲ್ಲಿ ನೂರಾರು ಪೌರ ಕಾರ್ಮಿಕರು ಬುಧವಾರ ಮೈಸೂರು ನಗರಪಾಲಿಕೆ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಒಕ್ಕೂಟದ ಅಧ್ಯಕ್ಷ ಎನ್.ರಾಜ, ಪ್ರಧಾನ ಕಾರ್ಯದರ್ಶಿ ರಾಮಾಂಜನೇಯ ನೇತೃತ್ವ ದಲ್ಲಿ ನಡೆದ ಪ್ರತಿಭಟನೆ ವೇಳೆ ತಮ್ಮ ಬೇಡಿಕೆ ಗಳ ಶೀಘ್ರ ಈಡೇರಿಸದಿದ್ದರೆ ನಾಡಹಬ್ಬ ದಸರಾ ವಿಜಯದಶಮಿಯಂದು ಎಲ್ಲಾ ಸ್ವಚ್ಛತಾ ಕೆಲಸಗಳನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದರು. ಕೈಬಿಟ್ಟಿರುವ 48 ಹೆಚ್ಚುವರಿ ಪೌರಕಾರ್ಮಿಕರನ್ನು ತಕ್ಷಣ ಮರು ನೇಮಕ ಮಾಡಬೇಕು. ಪಾಲಿಕೆ ಯಲ್ಲಿ ಕೇವಲ ಪೌರಕಾರ್ಮಿಕರಿಗೆ ಮಾತ್ರ ನಿಗದಿ ಮಾಡಿರುವ ಫೇಸ್ ರೆಕಗ್ನಿಷನ್ ಹಾಜರಾತಿಯನ್ನು ಕೂಡಲೇ ರದ್ದು ಪಡಿಸಬೇಕು. ನೇರ ಪಾವತಿ ಪೌರ ಕಾರ್ಮಿಕರಿಗೆ ಒಳಚರಂಡಿ ಸಹಾಯಕ ಕಾರ್ಮಿಕರಿಗೆ ಹಾಗೂ ಸ್ವಚ್ಛತಾ ವಾಹನ ಚಾಲಕರಿಗೆ ಪಾಲಿಕೆಯ ಪರಿಶಿಷ್ಟ ಜಾತಿಯ ಶೇ.24ರ ಅನುದಾನದಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು. ನಗರಪಾಲಿಕೆ ಎದುರು ಪೌರಕಾರ್ಮಿಕರ ಪಿತಾಮಹ ರಾಷ್ಟ್ರನಾಯಕ ಐಪಿಡಿ ಸಾ¯ಪ್ಪ ಅವರ ಪುತ್ಥಳಿ ನಿರ್ಮಿಸಬೇಕು. ಸೆ.23ರಂದು ಅವರ ಜಯಂತಿ ಆಚರಿಸಬೇಕು.

ಕೇಂದ್ರ, ರಾಜ್ಯ ಸರ್ಕಾರಗಳ ಸಾರ್ವತ್ರಿಕ ಹಬ್ಬಗಳ 21 ದಿನ ರಜೆ ಮತ್ತು ವೇತನ ಖಾಯಂ ಪೌರಕಾರ್ಮಿಕರಿಗೆ ನೀಡು ತ್ತಿದ್ದು, ಈ ಸೌಲಭ್ಯವನ್ನು ನೇರ ಪಾವತಿ ಪೌರ ಕಾರ್ಮಿಕರು, ಒಳಚರಂಡಿ ಸಹಾ ಯಕ ಕಾರ್ಮಿಕರಿಗೆ, ಸ್ವಚ್ಛತಾ ವಾಹನ ಚಾಲಕರಿಗೂ ನೀಡಬೇಕು. ದೂರದ ಊರುಗಳಿಂದ ಕೆಲಸಕ್ಕೆ ಬರುತ್ತಿರುವ ಮಹಿಳಾ ಪೌರಕಾರ್ಮಿಕರ ಅನು ಕೂಲಕ್ಕಾಗಿ ನಗರದ ಎಲ್ಲಾ ವಾರ್ಡ್ ಗಳಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು. ಪಾಲಿಕೆಯ ಒಕ್ಕೂಟದ ಸಂಘಕ್ಕೆ ಪಾಲಿಕೆ ಆವರಣದಲ್ಲಿ ಕಚೇರಿ ನೀಡಬೇಕು. ದಸರಾ ಹಬ್ಬದ ಮುಂಗಡ ಹಣ ರೂ.10 ಸಾವಿರ ಮೊತ್ತವನ್ನು ಖಾಯಂ ಪೌರ ಕಾರ್ಮಿಕರಿಗೆ ನೀಡುವ ರೀತಿ, ನೇರ ಪಾವತಿ ಪೌರಕಾರ್ಮಿಕರು, ಒಳಚರಂಡಿ ಪೌರಕಾರ್ಮಿಕರು ಮತ್ತು ಸ್ವಚ್ಛತಾ ವಾಹನ ಚಾಲಕರಿಗೂ ನೀಡಬೇಕು. ಪಾಲಿಕೆಯ ಒಳಚರಂಡಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 231 ಒಳಚರಂಡಿ ನೌಕರರನ್ನು ಸಹಾಯಕ ನೌಕರರೆಂದು ಕರೆಯಲ್ಪಡುತ್ತಿದ್ದು, ಇವರನ್ನು ಮತ್ತು ಸ್ವಚ್ಛತಾ ವಾಹನ ಚಾಲಕರನ್ನು ಪೌರಕಾರ್ಮಿಕರೆಂದು ಪರಿಗಣಿಸಬೇಕು. ಖಾಯಂ ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆ ಪರಿಹಾರ ರೂ. 2 ಸಾವಿರ ನೇರ ಪಾವತಿ ಸ್ವಚ್ಛತಾ ವಾಹನ ಚಾಲಕರಿಗೆ ಹಾಗೂ ಒಳಚರಂಡಿ ಸಹಾಯಕ ಪೌರ ಕಾರ್ಮಿಕರಿಗೆ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತ ನಾಡಿದ ಮಾಜಿ ಮೇಯರ್ ಪುರು ಷೋತ್ತಮ್, ಪೌರಕಾರ್ಮಿಕರನ್ನು ಕಡೆಗಣಿಸಬಾರದು. ಬೇಡಿಕೆ ಕೂಡಲೇ ಈಡೇರಿಸದಿದ್ದರೆ ದಸರಾ ಸಂದರ್ಭದಲ್ಲಿ ಪೌರಕಾರ್ಮಿಕರು ಸ್ವಚ್ಛತಾ ಕೆಲಸಗಳನ್ನು ಸ್ಥಗಿತಗೊಳಿಸಲು ಮುಂದಾಗಬೇಕಾ ಗುತ್ತದೆ. ಹಾಗಾಗಿ ಸರ್ಕಾರ ಪೌರಕಾರ್ಮಿಕರ ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸ ಬೇಕು ಎಂದು ಒತ್ತಾಯಿಸಿದರು. ಪ್ರತಿ ಭಟನೆಯಲ್ಲಿ ಒಕ್ಕೂಟದ ಪದಾಧಿಕಾರಿ ಗಳಾದ ರಾಮು, ಎಂ.ವಿ.ವೆಂಕಟೇಶ್, ಸಣ್ಣಬೋರ, ನರಸಿಂಹ, ಮಂಚಯ್ಯ, ಎಸ್.ಎಂ.ಪಳನಿಸ್ವಾಮಿ, ಎಂ.ಕೆ. ಮಹ ದೇವ್, ದಿನೇಶ್‍ಕುಮಾರ್, ಶ್ರೀಧರ, ಚಿನ್ನಪ್ಪ, ಮಂಜು ಜಯಸಿಂಹ, ಅಭಯ ಮಂಜು, ಸಿ.ಕುಮಾರ್, ಚಂದ್ರಶೇಖರ್, ಶಿವಕುಮಾರ್, ಬಿ.ಸೋಮಯ್ಯ ಇನ್ನಿ ತರರು ಭಾಗವಹಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಉಪ ಆಯುಕ್ತೆ ರೂಪಾ, ಸಮಸ್ಯೆಗಳ ಬಗ್ಗೆ ಆಯುಕ್ತರು ಮತ್ತು ಸರ್ಕಾರದ ಗಮನ ಸೆಳೆಯು ವುದಾಗಿ ಭರವಸೆ ನೀಡಿದರು.

Translate »