ಐದಕ್ಕಿಂತ ಅಧಿಕ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ
News

ಐದಕ್ಕಿಂತ ಅಧಿಕ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ

September 14, 2022

ಬೆಂಗಳೂರು, ಸೆ. 13(ಕೆಎಂಶಿ)- ಐದಕ್ಕಿಂತ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವ ರನ್ನು ಗೂಂಡಾ ಕಾಯ್ದೆಯಡಿ ಕಠಿಣ ಶಿಕ್ಷೆಗೊಳ ಪಡಿಸಲು ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಪದೇ ಪದೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಇದರಲ್ಲಿ ಕ್ರಿಮಿನಲ್ ಹಿನ್ನೆಲೆ ಉಳ್ಳವರ ಪಾತ್ರವಿದೆ. ಇದನ್ನು ಅರಿತಿರುವ ರಾಜ್ಯ ಸರ್ಕಾರ, ಉತ್ತರ ಪ್ರದೇಶದ ಮಾದರಿಯಲ್ಲಿ 5 ಕ್ಕಿಂತ ಹೆಚ್ಚು ಕ್ರಿಮಿನಲ್ ಪ್ರಕರಣ ಇರುವವರನ್ನು ಗುರುತಿಸಿ ಅವ ರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ, ಗಡಿ ಪಾರು ಮಾಡುವ ತೀರ್ಮಾನ ಕೈಗೊಂಡಿದೆ.

ಗಡಿಪಾರು ಅಷ್ಟೇ ಅಲ್ಲದೆ ಈ ಗೂಂಡಾಗಳ ಆಸ್ತಿ ಪಾಸ್ತಿಗಳನ್ನು ಜಪ್ತಿ ಮಾಡುವ ಮಹತ್ವದ ತೀರ್ಮಾನವನ್ನು ಕೈಗೊಂಡಿರುವ ಸರ್ಕಾರ ಇಂತಹ ವರನ್ನು ಗುರುತಿಸಿ ಪಟ್ಟಿಮಾಡುವಂತೆ ಪೊಲೀಸ ರಿಗೆ ಆದೇಶ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಆಡಳಿತದಲ್ಲಿ ಸಣ್ಣಪುಟ್ಟ ಗಲಭೆ ನಡೆಸಿ ಎರಡು ಪ್ರಕರಣಗಳಲ್ಲಿ ಭಾಗಿಯಾದವರನ್ನು ಗೂಂಡಾ ಪಟ್ಟಿಗೆ ಸೇರಿಸಲಾಗಿದೆ. ಇಂತಹವರ ವರದಿಯನ್ನು ನೋಡಿಕೊಂಡು ಅವರನ್ನು ಗೂಂಡಾ ಕಾಯ್ದೆಯಿಂದ ಕೈಬಿಡಲು ತೀರ್ಮಾನ ಕೈಗೊಳ್ಳ ಲಾಗಿದೆ. ಗೃಹ ಇಲಾಖೆಯ ಉನ್ನತ ಮೂಲಗಳು ಇದನ್ನು ಖಚಿತಪಡಿಸಿದ್ದು, ಐದಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾರುವವರು ತಮ್ಮ ಚಾಳಿ ಯನ್ನು ಮುಂದುವರಿಸಿದ್ದಾರೆಯೇ ಇಲ್ಲವೇ ಎಂದು ತಿಳಿಯಲು ಪ್ರತ್ಯೇಕ ಪೊಲೀಸ್ ತಂಡವನ್ನು ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇಂತಹವರು ಈಗಲೂ ಕ್ರಿಮಿನಲ್ ಚಟುವಟಿಕೆ ಗಳಲ್ಲಿ ಭಾಗಿಯಾಗಿದ್ದರೆ ತಕ್ಷಣವೇ ಅವರನ್ನು ಗೂಂಡಾ ಕಾಯ್ದೆಯಡಿ ಶಿಕ್ಷಿಸಲು ಸರ್ಕಾರ ಸೂಚಿಸಿದೆ.
ಇಂತಹವರಿಗೆ ಜೈಲು ಶಿಕ್ಷೆ ವಿಧಿಸುವುದು, ಗಡಿ ಪಾರು ಮಾಡುವುದು ಅಥವಾ ಅವರ ಆಸ್ತಿಪಾಸ್ತಿ ಯನ್ನು ವಶಪಡಿಸಿಕೊಳ್ಳುವುದು ಅನಿವಾರ್ಯ ಎಂದು ಸರ್ಕಾರ ಸೂಚಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಗೂಂಡಾ ಕಾಯ್ದೆಯನ್ನು ಪರಿ ಣಾಮಕಾರಿಯಾಗಿ ಬಳಸಿಕೊಳ್ಳದೆ ಹೋದರೆ ರಾಜ್ಯದಲ್ಲಿ ಅಶಾಂತಿಯ ವಾತಾವರಣ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತವೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಇತ್ತೀಚೆಗೆ ಪ್ರಕರಣವೊಂದರಲ್ಲಿ ಭಾಗಿಯಾದ ನಾಲ್ವರ ಪೈಕಿ ಓರ್ವನಿಗೆ ಜೈಶ್-ಎ-ಮಹಮ್ಮದ್ ಉಗ್ರಗಾಮಿ ಸಂಘಟನೆಯ ಸಂಪರ್ಕವಿದೆ ಎಂಬುದು ತನಿಖೆಯಿಂದ ಬಯಲಿಗೆ ಬಂದಿದ್ದು, ಇದಾದ ನಂತರ ಸಮಾಜಘಾತಕ ಶಕ್ತಿಗಳ ಮೇಲೆ ಹದ್ದಿನ ಕಣ್ಣಿಡಲು ಸರ್ಕಾರ ಬಯಸಿದೆ. ಈ ಮಧ್ಯೆ ರಾಜ್ಯ ದಲ್ಲಿ ಪೆÇಲೀಸ್ ಇಲಾಖೆಯನ್ನು ಮತ್ತಷ್ಟು ಸುಭದ್ರ ಗೊಳಿಸಲು ಹೊಸತಾಗಿ ನಾನ್ನೂರೈವತ್ತು ಮಂದಿ ಸಬ್ ಇನ್ಸ್‍ಪೆಕ್ಟರ್ ಮತ್ತು ಸಾವಿರದ ಆರು ನೂರು ಮಂದಿ ಕಾನ್ಸ್‍ಟೇಬಲ್‍ಗಳನ್ನು ನೇಮಕ ಮಾಡಿ ಕೊಳ್ಳಲು ಸರ್ಕಾರ ಸಜ್ಜಾಗಿದೆ.

ಪೆÇಲೀಸ್ ಇಲಾಖೆಯನ್ನು ಸುಸಜ್ಜಿತಗೊಳಿಸ ಬೇಕು. ಆ ಮೂಲಕ ಕ್ರಿಮಿನಲ್ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹತ್ತಿಕ್ಕಬೇಕು ಎಂಬುದು ಸರ್ಕಾರದ ನಿರ್ಧಾರ ಎಂದು ಇದೇ ಮೂಲಗಳು ವಿವರ ನೀಡಿವೆ.

Translate »