ಕುಶಾಲನಗರ,ಮಾ.6-ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಆನೆಕಾಡು ಬಳಿ ಕಾರೊಂದು ಚಾಲನ ನಿಯಂತ್ರಣ ತಪ್ಪಿ ಹಳ್ಳ ಬಿದ್ದಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿ ರುವ ಘಟನೆ ಸಂಭವಿಸಿದೆ.
ಏಳನೇ ಹೊಸಕೋಟೆ ನಿವಾಸಿ ಕಾರು ಚಾಲಕ ಅಬೂಬಕ್ಕರ್ ಗಂಭೀರ ವಾಗಿ ಗಾಯಗೊಂಡಿದ್ದು, ಈತನ ಮಗ ಆ್ಯರೀಸ್ ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾನೆ.
ಏಳನೇ ಹೊಸಕೋಟೆಯ ತಮ್ಮ ಮನೆಯಲ್ಲಿ ಊಟ ಮುಗಿಸಿಕೊಂಡು ತಂದೆ ಅಬೂಬಕ್ಕರ್ ಮಗ ಆ್ಯರೀಸ್ ಇಬ್ಬರು ನಿಸರ್ಗಧಾಮದ ಟೂರಿಸ್ಟ್ ಸೆಂಟರ್ ನಲ್ಲಿರುವ ತಮ್ಮ ಅಂಗಡಿಗೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಆನೆಕಾಡು ತಿರುವಿನಲ್ಲಿ ಎದುರಿನಿಂದ ಬಂದ ವಾಹನಕ್ಕೆ ಸೈಡ್ ನೀಡಲು ಹೋದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಬದಿ ಕಂಬಗಳಿಗೆ ಡಿಕ್ಕಿ ಹೋಡೆದು ಹಳ್ಳಕ್ಕೆ ಬಿದ್ದಿದೆ. ಈ ಸಂದರ್ಭ ಅಬೂಬಕ್ಕರ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಕಾರಿನಲ್ಲಿದ್ದ ಮಗ ಆ್ಯರೀಸ್ ಸಣ್ಣ ಪುಟ್ಟಗಳಿಂದ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ. ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಸಂಚಾರಿ ಪೆÇಲೀಸ್ ಠಾಣೆಯ ಸಿಬ್ಬಂದಿಗಳಾದ ಚಂಗಪ್ಪ ಹಾಗೂ ಸಂದೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.