ಮಳವಳ್ಳಿ,ಮಾ.6-ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ಬಳಿಯ ಭೀಮನ ಕಿಂಡಿ ಬಳಿ ಇರುವ ಬೀಮನ ದೊಡ್ಡಿ ಗ್ರಾಮದಲ್ಲಿ ರೈತರೊ ಬ್ಬರ ಜಮೀನು ಸೇರಿದಂತೆ ಹಾಗೂ ತಾಲೂಕಿನ ಮತ್ತಿತ ರೆಡೆ ಆನೆಗಳ ಹಿಂಡೊಂದು ದಾಳಿ ಮಾಡಿ ಬಾಳೆ ಬೆಳೆಯನ್ನು ನಾಶ ಮಾಡಿರುವ ಹಾಗೂ ಬೈಕ್ ಜಖಂಗೊಳಿಸಿ ಹಸುಗಳ ಮೇಲೆ ಹಲ್ಲೆ ನಡೆಸಿರು ಘಟನೆ ನಡೆದಿದೆ. ತಾಲೂಕಿನ ಭೀಮನದೊಡ್ಡಿ ಗ್ರಾಮದ ರಾಮಚಂದ್ರ ಎಂಬುವವರ ಜಮೀನಿಗೆ ನುಗ್ಗಿದ ಆನೆಗಳು ಅವರ ಜಮೀನಿನಲ್ಲಿ ಎರಡು ಎಕರೆಗೆ ಹಾಕಿದ್ದ ಬಾಳೆ ಬೆಳೆ ನಾಶ ಮಾಡಿವೆ. ಇದರಿಂದ ಸುಮಾರು 3 ಲಕ್ಷ ನಷ್ಟವನ್ನುಂಟಾಗಿದೆ ಎಂದು ರೈತ ರೈತ ರಾಮಚಂದ್ರ ತಿಳಿಸಿದ್ದಾರೆ. ಸುಮಾರು ರಾತ್ರಿ 11 ಗಂಟೆಗೆ ಬಂದ ಆನೆಗಳು ಬೆಳಗ್ಗಿನ ಜಾವದವರೆಗೂ ಅಲ್ಲಿಯೇ ಬಿಡಾರ ಹೂಡಿ ಬಾಳೆಬೆಳೆಯ ಬೆಳಗಳನ್ನು ತಿಂದು ನಾಶ ಮಾಡಿವೆ.
ಇನ್ನು ತಾಲೂಕಿನ ದೇವಿರಳ್ಳಿ ಬಳಿ ಕೃಷ್ಣ ಎಂಬುವವರು ಹಿಪ್ಪೆನೇರಳೆ ಸೊಪ್ಪು ಕೀಳುತ್ತಿರುವಾಗ ಆನೆಗಳು ಅಟ್ಟಿಸಿಕೊಂಡು ಬಂದಿವೆ. ಆದರೆ ಕೃಷ್ಣರವರು ಆನೆಗಳಿಗೆ ಸಿಗದೆ ಜೀವಾಪಾಯದಿಂದ ಪಾರಾಗಿದ್ದಾರೆ, ಆದರೆ ಇವರ ಬೈಕ್ ಹಾಗೂ ಇವರ ಪಕ್ಕದ ಜಮೀನಿನ ದೇವೇಗೌಡರ ಬೈಕ್‍ನ್ನು ತುಳಿದು ನಾಶ ಮಾಡಿವೆ.
ಅಲ್ಲದೆ ಬೀಮನದೊಡ್ಡಿ ಬಳಿ ಶಶೀಧರ್‍ರವರ ಎತ್ತಿನಗಾಡಿಗೆ ಅಡ್ಡಲಾಗಿ ಬಂದ ಆನೆಗಳು ಎತ್ತಿನಗಾಡಿಯ ಮೇಲೆ ದಾಳಿ ನಡೆಸಿವೆ ನಂತರ ಆರಣ್ಯದೊಳಕ್ಕೆ ಹೋಗಿವೆ.ಈ ಬಗ್ಗೆ ಅರಣ್ಯಾಧಿಕಾರಿಗಳು ತಂಡ ಪರಿಶೀಲಿನೆ ನಡೆಸಿದೆ.