ಮಂಡ್ಯ,ಮಾ.6(ನಾಗಯ್ಯ)- ನಾಗ ಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗ ವಾಗಿ ಗುರುವಾರ ನಡೆದ ಉಚಿತ ಸಾಮೂ ಹಿಕ ವಿವಾಹ ಸಮಾರಂಭದಲ್ಲಿ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ 25 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಬೆಳಿಗ್ಗೆಯಿಂದಲೇ ಮದುವೆಯ ಎಲ್ಲಾ ವಿಧಿವಿಧಾನಗಳು ಶ್ರೀಮಠದಲ್ಲಿ ನೆರ ವೇರಿದವು. ಬಿಜಿಎಸ್ ಸಭಾಭವನವನ್ನು ವಿದ್ಯುತ್ ದೀಪಾಲಂಕಾರ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶ್ರೀಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾ ನಂದನಾಥ ಸ್ವಾಮೀಜಿಯವರು ಹೋಮ ಹವನ, ಧಾರ್ಮಿಕ ಸಂಪ್ರದಾಯಗಳಲ್ಲಿ ಭಾಗವಹಿಸಿದರು. ಪೂರ್ಣಾಹುತಿ ಅರ್ಪಿಸುವ ಮೂಲಕ ಮದುವೆಯ ವಿಧಿ ವಿಧಾನಗಳನ್ನು ಪೂರೈಸಿ, ವಧುವರರಿಗೆ ಮಂತ್ರಾಕ್ಷತೆ ಹಾಕಿ, ಫಲ, ತಾಂಬೂಲ ನೀಡಿ ಹರಸಿದರು. ವಧುವಿಗೆ ಸೀರೆ, ರವಿಕೆ, ತಾಳಿ, ಕಾಲುಂಗುರ ಮುತೈದೆಯ ರಿಗೆ ಸಲ್ಲುವ ಬಾಗಿನ, ವರನಿಗೆ ಪೇಟ, ಪಂಚೆ, ಶರ್ಟ್ ನೀಡಲಾಯಿತು.
355 ಹಿರಿಯ ದಂಪತಿಗಳಿಗೆ ಸನ್ಮಾನ: ಮದುವೆಯಾಗಿ 50 ವರ್ಷ ದಾಪಂತ್ಯ ಜೀವನ ಪೂರೈಸಿದ 355 ಹಿರಿಯ ದಂಪತಿ ಗಳಿಗೆ ಇದೇ ಸಂದರ್ಭದಲ್ಲಿ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಬಾಗಿನ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸ ಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಯಾವ ದೇಶದಲ್ಲಿ ಗೃಹಸ್ಥಾಶ್ರಮ ಬಹಳ ಗಟ್ಟಿಯಾಗಿರುತ್ತದೆಯೋ ಅಂತಹ ನೆಲದಲ್ಲಿ ಮಾತ್ರ ಸಂಸ್ಕøತಿ ಭದ್ರವಾಗಿರಲು ಸಾಧ್ಯ ಎಂದು ಹೇಳಿದರು.
ಜೀವನದಲ್ಲಿ ಸೋಲಿಗೆ ಹೆದರದೆ, ಏನೇ ಸಮಸ್ಯೆಗಳು ಬಂದರೂ ಸಹಿಸಿ ಕೊಂಡು, ನಿಮ್ಮೊಳಗಡಗಿರುವ ಶಕ್ತಿಯನ್ನು ಸಂಘಟಿಸಿಕೊಂಡು ಜೀವನವನ್ನು ಸಂತೃಪ್ತಿಯಾಗಿ ಕಳೆಯಿರಿ ಎಂದು ವಧು-ವರರಿಗೆ ಶುಭ ಹಾರೈಸಿದರು.