ಮೈಸೂರಲ್ಲಿ ಅಂಗನವಾಡಿ ನೌಕರರ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ಅಂಗನವಾಡಿ ನೌಕರರ ಪ್ರತಿಭಟನೆ

July 14, 2020

ಮೈಸೂರು, ಜು.13(ಆರ್‍ಕೆಬಿ)- ಜಿಲ್ಲೆ ಯಲ್ಲಿ ಕೋವಿಡ್-19 ವಾರಿಯರ್ಸ್‍ಗಳಾಗಿ ಕೆಲಸಮಾಡಿ ಒತ್ತಡಕ್ಕೆ ಒಳಗಾಗಿ ಮರಣ ಹೊಂದಿದ ನಂಜನಗೂಡು ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಾದ ಕೆಂಪ ದೇವಮ್ಮ, ಚಾಂದು, ಪಿರಿಯಾಪಟ್ಟಣದ ಸರಸ್ವತಿ ಅವರಿಗೆ ಹೆಚ್ಚಿನ ಪರಿಹಾರ ನೀಡ ಬೇಕು. ನಿವೃತ್ತಿ ಸೌಲಭ್ಯದ ಪೂರ್ಣ ಹಣ ಕೊಡಿಸಬೇಕು. ಅನುಕಂಪದ ಆಧಾರದಲ್ಲಿ ಕುಟುಂಬದ ಸದಸ್ಯರಿಗೆ ಕೆಲಸ ಕೊಡ ಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿ ಕೆಗೆ ಆಗ್ರಹಿಸಿ ಅಂಗನವಾಡಿ ನೌಕರರು ಸೋಮವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕ ರರ ಸಂಘದ (ಸಿಐಟಿಯು) ಅಧ್ಯಕ್ಷೆ ಹೆಚ್. ಎಸ್.ಸುನಂದ ನೇತೃತ್ವದಲ್ಲಿ ಸಂಘದ ಕಡಕೊಳ, ಕೆ.ಸಾಲುಂಡಿ, ದೂರ ಸರ್ಕಲ್ ಗಳ ಅಂಗನವಾಡಿ ನೌಕರರು ಜಿಲ್ಲಾಧಿ ಕಾರಿ ಕಚೇರಿ ಬಳಿ ಜಮಾಯಿಸಿ, ತಮ್ಮ ಬೇಡಿಕೆಗಳ ಘೋಷಣೆ ಕೂಗಿದರು.

ರಾಜ್ಯಾದ್ಯಂತ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಘೋಷಣೆಗಳೊಂ ದಿಗೆ ಮನವಿ ಪತ್ರ ಸಲ್ಲಿಸುವಂತೆ ಕರ್ನಾ ಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕರೆಯ ಮೇರೆಗೆ ಮೈಸೂರು ಜಿಲ್ಲೆಯ ಲ್ಲಿಯೂ ಸಾಮಾಜಿಕ ಅಂತರದಡಿ ಪ್ರತಿ ಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಿದರು.

2017ರಿಂದ ನಿವೃತ್ತಿ ಹೊಂದಿದ 40 ಮಂದಿ ಕಾರ್ಯಕರ್ತೆಯರು, 66 ಮಂದಿ ಸಹಾಯಕಿಯರಿಗೆ ಬಾಕಿ ಇರುವ ನಿವೃತ್ತಿ ಹಣ ತಕ್ಷಣ ಬಿಡುಗಡೆ ಮಾಡಬೇಕು. ಪಾನ್ ಕಾರ್ಡ್ ನೀಡದವರಿಗೆ ತಕ್ಷಣ ನೀಡಿ ತಿಂಗಳ ವಂತಿಗೆ ಕಡಿತ ಮಾಡಬೇಕು. ಜಿಲ್ಲೆಯಲ್ಲಿ ಕೋವಿಡ್-19 ವಾರಿಯರ್ಸ್ ಆಗಿ ಕೆಲಸ ಮಾಡಿ ಒತ್ತಡಕ್ಕೆ ಒಳಗಾಗಿ ಮರಣ ಹೊಂದಿದ ನಂಜನಗೂಡು ತಾಲೂಕಿನ ಕಾರ್ಯಕರ್ತೆ ಯರಾದ ಕೆಂಪದೇವಮ್ಮ, ಚಾಂದು, ಪಿರಿಯಾ ಪಟ್ಟಣದ ಸರಸ್ವತಿಯವರಿಗೆ ಹೆಚ್ಚಿನ ಪರಿ ಹಾರ, ನಿವೃತ್ತಿ ಸೌಲಭ್ಯದ ಪೂರ್ಣ ಹಣದ ಜೊತೆಗೆ ಅನುಕಂಪದ ಆಧಾರದಲ್ಲಿ ಕುಟುಂಬ ಸದಸ್ಯರಿಗೆ ಕೆಲಸ ಕೊಡಬೇಕು. ತಿಂಗಳಿಗೆ ಸರಿಯಾಗಿ ಗೌರವಧನ ಬಿಡುಗಡೆ ಮಾಡಬೇಕು. ಮೊಟ್ಟೆ, ಗ್ಯಾಸ್, ಬಾಡಿಗೆ ಹಣ ಮಂಗಡವಾಗಿ ಕಾರ್ಯಕರ್ತೆಯರ ಖಾತೆಗೆ ಜಮಾ ಮಾಡಬೇಕು, ಖಾಲಿಯಾದ ಕೇಂದ್ರಗಳಿಗೆ ವರ್ಗಾವಣೆ, ಸ್ಥಾನ ಪಲ್ಲಟ, ಪ್ರಮೋಷನ್ ನೀಡಿ ನಂತರ ಹೊಸ ಆಯ್ಕೆ ಮಾಡಬೇಕು, 3 ತಿಂಗಳಿಗೊಮ್ಮೆ ಕಡ್ಡಾಯ ವಾಗಿ ಜಿಲ್ಲಾ ಮಟ್ಟದ ಕುಂದುಕೊರತೆಗಳ ಸಭೆ ಕರೆದು ಸಮಸ್ಯೆ ಬಗ್ಗೆ ಚರ್ಚಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಲತಾ, ಲಕ್ಷ್ಮಿ, ಪ್ರೇಮಮ್ಮ, ಕೆಂಪಾಮಣಿ, ಕೆ.ಎಂ. ವಿಜಯಾ ಇನ್ನಿತರರು ಭಾಗವಹಿಸಿದ್ದರು.

Translate »