ರಸ್ತೆಗಿಳಿಯಲಿದೆ ಮತ್ತೊಂದು ಅಂಬಾರಿ ಡಬಲ್ ಡೆಕ್ಕರ್ ಬಸ್
ಮೈಸೂರು

ರಸ್ತೆಗಿಳಿಯಲಿದೆ ಮತ್ತೊಂದು ಅಂಬಾರಿ ಡಬಲ್ ಡೆಕ್ಕರ್ ಬಸ್

October 3, 2021

ಸಂಚಾರ ಒತ್ತಡದಿಂದ ಸಂಜೆ ವೇಳೆ ಸಂಚಾರ ಅಂತರ ಕಡಿತಕ್ಕೆ ಕೆಎಸ್‌ಟಿಡಿಸಿ
ಮೈಸೂರು, ಅ.೨(ಆರ್‌ಕೆ)-ಮೈಸೂರಲ್ಲಿ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಸರಾ ವೇಳೆ ಮತ್ತೊಂದು ಡಬಲ್ ಡೆಕ್ಕರ್ `ಅಂಬಾರಿ’ ಬಸ್ಸನ್ನು ರಸ್ತೆಗಿಳಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ ಮುಂದಾಗಿದೆ.

ಈಗಾಗಲೇ ಎರಡು ಬಸ್ಸುಗಳು ಮೈಸೂರು ನಗರದಲ್ಲಿ ಸಂಚ ರಿಸುತ್ತಿದ್ದು, ವಾರಾಂತ್ಯದ ಶನಿವಾರ ಮತ್ತು ಭಾನುವಾರಗಳಂದು ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಇನ್ನೂ ಒಂದು ಡಬಲ್ ಡೆಕ್ಕರ್ ಬಸ್ಸನ್ನು ರಸ್ತೆಗಿಳಿಸಲು ನಿಗಮವು ಸಿದ್ಧತೆ ನಡೆಸುತ್ತಿದೆ. ಮರ‍್ನಾಲ್ಕು ದಿನಗಳಲ್ಲಿ ಅದು ಕಾರ್ಯಾರಂಭ ಮಾಡಲಿದೆ ಎಂದು ಪ್ರವಾಸೋದ್ಯಮ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಸಂಜೆ ಟ್ರಿಪ್‌ಗಳಲ್ಲಿ ಜೆಎಲ್‌ಬಿ ರಸ್ತೆಯ ಮಯೂರ ಹೊಯ್ಸಳ ಹೋಟೆಲ್ ಬಳಿಯಿಂದ ಹೊರಡಲಿರುವ ಬಸ್, ಡಿಸಿ ಕಚೇರಿ, ರಾಮಸ್ವಾಮಿ ಸರ್ಕಲ್, ಚಾಮರಾಜ ಜೋಡಿ ರಸ್ತೆ, ಸಂಸ್ಕೃತ ಪಾಠಶಾಲೆ, ಹಾರ್ಡಿಂಜ್ ಸರ್ಕಲ್, ಕೆ.ಆರ್.ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದ ಕಾಲೇಜು ಸರ್ಕಲ್, ರೈಲ್ವೆ ಸ್ಟೇಷನ್ ಸರ್ಕಲ್ ಮಾರ್ಗವಾಗಿ ಮಯೂರ ಹೊಯ್ಸಳ ಹೋಟೆಲ್ ಬಳಿ ಅಂತ್ಯಗೊಳ್ಳಲಿದೆ. ಏಪ್ರಿಲ್ ೧೮ರಂದು ೫೫, ೧೯ರಂದು ೧೧೫, ೨೦ರಂದು ೨೧, ೨೨ರಂದು ೨೫, ೨೫ರಂದು ೫೬, ೨೬ರಂದು ೯೨, ೨೮ರಂದು ೧೮ ಮಂದಿ ಡಬಲ್ ಡೆಕ್ಕರ್ ಬಸ್ಸಿನಲ್ಲಿ ಪ್ರಯಾಣ ಸಿದ್ದರು. ಅಕ್ಟೋ ಬರ್ ೧ ರಂದು ೧೦ ಹಾಗೂ ಇಂದು ೧೦೦ಕ್ಕೂ ಹೆಚ್ಚು ಮಂದಿ ಪ್ರಯಾಣ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇಡಿಕೆಗನುಗುಣವಾಗಿ ನಿಗಮವು ಟ್ರಿಪ್‌ಗಳನ್ನು ಆಯೋ ಜಿಸಬೇಕಾಗಿರುವುದರಿಂದ ಈಗಿರುವ ಎರಡು ಬಸ್ ಜೊತೆಗೆ ಮತ್ತೊಂದನ್ನು ಬಳಸಿಕೊಳ್ಳಲು ತಯಾರಿ ನಡೆಸುತ್ತಿದೆ.

Translate »